ಬೆಂಗಳೂರು : ಟ್ರೇಡ್ ಲೈಸೆನ್ಸ್ ನೀಡಲು ವ್ಯಕ್ತಿಯಿಂದ ಲಂಚಕ್ಕೆ ಬೇಡಿಕೆಯಿಟ್ಟು ಹಣ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಹಾಗೂ ಕಾರ್ಯದರ್ಶಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಿಗೇಹಳ್ಳಿಯ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಮಂಜುನಾಥ್ ಹಾಗೂ ಕಾರ್ಯದರ್ಶಿ ಸುಬ್ರಮಣ್ಯ ಎಂಬುವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ರಾಮಮೂರ್ತಿ ನಗರದ ನಿವಾಸಿಯೋರ್ವರು ವಿರ್ಗೋನಗರದ ಬಳಿಯ ದೊಮ್ಮಸಂದ್ರದಲ್ಲಿ ಮೀನು ಹಾಗೂ ಮಾಂಸದ ಅಂಗಡಿ ತೆರೆಯಲು ಮುಂದಾಗಿದ್ದರು.
ಇದಕ್ಕೆ ಪರವಾನಿಗೆ ಪಡೆಯಲು ಸಿಗೇಹಳ್ಳಿ ಗ್ರಾಮ ಪಂಚಾಯತ್ ಗೆ ಅರ್ಜಿ ಹಾಕಿದ್ದರು. ಪಂಚಾಯತ್ ಕಾರ್ಯದರ್ಶಿ ಸುಬ್ರಮಣ್ಯ 1,500 ರೂ. ಜೊತೆಗೆ ಹೆಚ್ಚುವರಿಯಾಗಿ 3,500 ರೂಪಾಯಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದನು.
ಇದರಂತೆ ಪಂಚಾಯತ್ ಪರವಾಗಿ ಬಿಲ್ ಕಲೆಕ್ಟರ್ ಮಂಜುನಾಥ್ ದೂರುದಾರರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ-ಸಿದ್ದರಾಮಯ್ಯ ಎಲ್ಲೆಲ್ಲೋ ಭೇಟಿ ಆಗಿರ್ತಾರೆ, ನಾನೇನ್ ಬ್ಯಾಟರಿ ಹಾಕ್ಕೊಂಡ್ ಹುಡುಕ್ಲಾ.. HDK