ETV Bharat / state

ಶಾಸಕರ ಗೈರು ಹಾಜರಿಗೆ ವಿಧಾನಸಭೆಯಲ್ಲಿ ಅಸಮಾಧಾನ

ಕಲಾಪದಲ್ಲಿ ಚರ್ಚೆಯ ಸಂದರ್ಭದಲ್ಲಿ ಶಾಸಕರು ಹಾಜರಿರದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ವಿಧಾನಸಭೆ
ವಿಧಾನಸಭೆ
author img

By

Published : Dec 8, 2020, 4:50 PM IST

ಬೆಂಗಳೂರು: ಕಾರ್ಯ-ಕಲಾಪಗಳ ಪಟ್ಟಿಯಲ್ಲಿ ವಿಷಯವಿದ್ದರೂ ಚರ್ಚೆಯ ಸಂದರ್ಭದಲ್ಲಿ ಶಾಸಕರು ಹಾಜರಿರದೇ ಇರುವ ಬಗ್ಗೆ ವಿಧಾನಸಭೆಯಲ್ಲಿ ಇಂದು ತೀವ್ರ ಅಸಮಾಧಾನ ವ್ಯಕ್ತವಾಯಿತು.

ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನಿಯಮ-69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಬಗ್ಗೆ ಅಲ್ಪಕಾಲಾವಧಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಆ ಸಂದರ್ಭದಲ್ಲಿ ನೋಟಿಸ್ ನೀಡಿದ್ದ ಸಂಬಂಧಿತ ಸದಸ್ಯರು ಸದನದಲ್ಲಿ ಹಾಜರಿಲ್ಲದಿರುವುದನ್ನು ಗಮನಿಸಿದ ಸ್ಪೀಕರ್ ಅವರು, ಯಾರೂ ಇಲ್ಲ. ಆದರೆ, ಕಾರ್ಯ-ಕಲಾಪ ಪಟ್ಟಿಯಲ್ಲಿ ವಿಷಯವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಗುರುವಾರದಂದು ಚಳಿಗಾಲದ ಅಧಿವೇಶನ ಅಂತ್ಯಗೊಳಿಸಲು ಕಲಾಪ‌ ಸಲಹಾ ಸಮಿತಿ ತೀರ್ಮಾನ

ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಎದ್ದು ನಿಂತು, ನಾವು ಗಂಭೀರವಾಗಿ ಪರಿಗಣಿಸಬೇಕು. ಅಜೆಂಡಾದಲ್ಲಿ ವಿಷಯವಿದ್ದರೂ ಸದನಕ್ಕೆ ಬರಲ್ಲ ಎಂದರೆ ಹೇಗೆ? ಇನ್ನು ಮುಂದೆ ಅವರ ವಿಷಯ ತರಬೇಡಿ ಎಂದು ಅಸಮಾಧಾನ ಹೊರಹಾಕಿದರು.

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, "ಅಜೆಂಡಾದಲ್ಲಿ ವಿಷಯವಿದ್ದಾಗ ಸದಸ್ಯರು ಇರಬೇಕಿತ್ತು. ಯಾವುದೇ ಪಕ್ಷವಾಗಲಿ, ಹೀಗಾದರೆ ಹೇಗೆ? ಅವರಿಗೆ ಎಚ್ಚರಿಕೆ ಕೊಡಿ" ಎಂದರು. ಆಗ ಕಾಂಗ್ರೆಸ್‍ನ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್‍ ಮಧ್ಯ ಪ್ರವೇಶೀಸಿ, ಅಧಿವೇಶನ ಕರೆದ ನಂತರ ಬಹಳಷ್ಟು ಬೆಳವಣಿಗೆ ನಡೆದಿದೆ. ಅದನ್ನು ನೀವು ಗಮನಿಸಲಿಲ್ಲ. ನಿನ್ನೆಯೇ ಸದನದ ಕಾರ್ಯ-ಕಲಾಪಗಳ ಸಲಹಾ ಸಮಿತಿ ಸಭೆ ಕರೆದು ನಿರ್ಣಯ ಮಾಡಬೇಕಿತ್ತು ಎಂದಾಗ ಸಿಎಂ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದರಿಂದ ಇಂದು ಕಾರ್ಯ-ಕಲಾಪಗಳ ಸಲಹಾ ಸಮಿತಿ ಸಭೆ ಕರೆಯಲಾಗಿದೆ ಎಂದು ಮಾಧುಸ್ವಾಮಿ ಸಮಜಾಯಿಷಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.