ETV Bharat / state

ರೋಹಿಣಿ ಸಿಂಧೂರಿ ಪತಿ ವಿರುದ್ಧ ದೂರು ಸ್ವೀಕಾರಕ್ಕೆ ನಿರಾಕರಣೆ ಆರೋಪ: ಪರಿಶೀಲಿಸಿ ಕ್ರಮವೆಂದ ಸಚಿವ ಆರಗ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ವಿರುದ್ಧ ಭೂ ಒತ್ತುವರಿ ಆರೋಪ ಪ್ರಕರಣ ಸಂಬಂಧ ಖ್ಯಾತ ಹಾಸ್ಯ ನಟ ಮಹಮೂದ್ ಅಲಿ ಪುತ್ರ ಹಾಗೂ ಗಾಯಕ ಲಕ್ಕಿ ಅಲಿ ಅವರು ಡಿಜಿಪಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
author img

By

Published : Dec 5, 2022, 6:17 PM IST

Updated : Dec 5, 2022, 6:42 PM IST

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ವಿರುದ್ಧ ದೂರು ಸ್ವೀಕರಿಸಲು ಯಾವ ಠಾಣೆಯ ಪೊಲೀಸರು ನಿರಾಕರಿಸಿದ್ದಾರೆ ಎನ್ನುವುದನ್ನು ಪರಿಶೀಲಿಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಹಲಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಧೀರ್ ರೆಡ್ಡಿ ವಿರುದ್ಧ ಭೂ ಒತ್ತುವರಿ ಆರೋಪ ಪ್ರಕರಣ ಸಂಬಂಧ ಖ್ಯಾತ ಹಾಸ್ಯ ನಟ ಮಹಮೂದ್ ಅಲಿ ಪುತ್ರ ಹಾಗೂ ಗಾಯಕ ಲಕ್ಕಿ ಅಲಿಯಿಂದ ಡಿಜಿಪಿಗೆ ಟ್ವೀಟ್ ಮೂಲಕ ದೂರು ಬಂದಿದೆ ಎನ್ನಲಾಗಿದೆ. ಈ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ‌ ನೋಡಿದೆ. ಲಕ್ಕಿ ಅಲಿಯವರ ದೂರಿನ‌ ಬಗ್ಗೆ ಮಾಹಿತಿ ಪಡೆಯುತ್ತೇನೆ. ಡಿಜಿಪಿಯವರ ಜತೆ ಇದರ ಬಗ್ಗೆ ಮಾತಾಡುತ್ತೇನೆ. ನಂತರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

  • I am getting no help from the local police, who are in fact supporting the encroachers and are indifferent to our situation and the legal status of our land.

    — Lucky Ali (@luckyali) December 4, 2022 " class="align-text-top noRightClick twitterSection" data=" ">

ಯಲಹಂಕ ಬಳಿಯ ಕೆಂಚನಹಳ್ಳಿಯಲ್ಲಿ ಲಕ್ಕಿ ಅಲಿ ಅವರ ಟ್ರಸ್ಟ್ ಗೆ ಸೇರಿದ ಜಮೀನಿದ್ದು, ಈ ಜಾಗವನ್ನು ಸುಧೀರ್ ರೆಡ್ಡಿ ಹಾಗೂ ಮಧು ರೆಡ್ಡಿ ಎಂಬುವವರು ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಪೊಲೀಸರ ಬೆಂಬಲ ಸಿಗದಿದ್ದಾಗ ಅನಿವಾರ್ಯವಾಗಿ ಸಾರ್ವಜನಿಕರ ಗಮನಕ್ಕೆ ತರಲಾಗಿದೆ ಎಂದು ಲಕ್ಕಿ ಅಲಿ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  • Dear Sir, I request your help to stop this illegal activity of them trying to prove a false possession before the final court hearing on December 7th.

    Please help us as I have no choice other than to take this to the Public.

    With Due Respect.
    Lucky Ali (Maqsood Mahmood Ali)

ಇದನ್ನೂ ಓದಿ: ಭೂ ಅಕ್ರಮ ಆರೋಪ: ಮರು ತನಿಖೆ ಮಾಡುವಂತೆ ಆದೇಶ ಹೊರಡಿಸಿದ ಸರ್ವೇ ಇಲಾಖೆ

Last Updated : Dec 5, 2022, 6:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.