ETV Bharat / state

ಡ್ರಗ್ಸ್​​ ಮಾಫಿಯಾ: ಎ4 ಪ್ರಶಾಂತ್ ರಾಂಕ ಬಂಧನ - Prashant Ranka

ಸ್ಯಾಂಡಲ್​ವುಡ್​ಗೆ​ ಡ್ರಗ್ಸ್​​​ ನಂಟು ಆರೋಪ ಪ್ರಕರಣದಲ್ಲಿ ಸದ್ಯ ಒಬ್ಬೊಬ್ಬರೇ ಆರೋಪಿಗಳು ಸಿಕ್ಕಿಬೀಳುತ್ತಿದ್ದಾರೆ. ಇದೀಗ ಎ4 ಆರೋಪಿ ಪ್ರಶಾಂತ್​ ರಾಂಕನನ್ನು ಸಿಸಿಬಿ ಬಂಧಿಸಿದೆ.

A4 accused Prashant Ranka arrested for link with drug case
ಸ್ಯಾಂಡಲ್​​ವುಡ್​ ಡ್ರಗ್​ ಜಾಲ ಪ್ರಕರಣ: ಎ4 ಆರೋಪಿ ಪ್ರಶಾಂತ್ ರಾಂಕ ಬಂಧನ
author img

By

Published : Sep 10, 2020, 1:25 PM IST

Updated : Sep 10, 2020, 1:42 PM IST

ಬೆಂಗಳೂರು: ಸ್ಯಾಂಡಲ್​​​ವುಡ್​ಗೆ ಡ್ರಗ್ಸ್​ ನಂಟು ಆರೋಪ ​ಪ್ರಕರಣಕ್ಕೆ ಸಂಬಂಧಿಸಿದಂತೆ ನಟ-ನಟಿಯರು, ಉದ್ಯಮಿಗಳು, ರಾಜಕಾರಣಿಗಳಿಗೆ ಹಾಗೆಯೇ ಬಂಧಿತ ರಾಗಿಣಿ ಹಾಗೂ ಸಂಜನಾಗೆ ಡ್ರಗ್ ಪೆಡ್ಲರ್​ ಆಗಿದ್ದ ಆರೋಪಿ ಪ್ರಶಾಂತ್​ ರಾಂಕನನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಈತ ಡ್ರಗ್ಸ್​ ಮಾಫಿಯಾದಲ್ಲಿ ಪ್ರಮುಖ ಪಾತ್ರವಹಿಸಿದ್ದ. ವಿರೇನ್ ಖನ್ನಾ, ರವಿಶಂಕರ್ ಜೊತೆ ಸೇರಿಕೊಂಡು ಲೂಮ್ ಪೆಪ್ಪರ್​​​ನಿಂದ ಡ್ರಗ್ಸ್​ ಖರೀದಿಸಿ ಅದನ್ನು ಪಾರ್ಟಿಗಳಿಗೆ ಪೂರೈಸುತ್ತಿದ್ದ ಹಿನ್ನೆಲೆ ಪ್ರಶಾಂತ್ ರಾಂಕನನ್ನು ಬಂಧಿಸಿದ್ದಾರೆ. ಈತನ ವಿಚಾರಣೆಯನ್ನು ಡಿಸಿಪಿ ರವಿಕುಮಾರ್ ಹಾಗೂ ನಾರ್ಕೋಟಿಕ್ ವಿಂಗ್ ಇಂದಿನಿಂದ ನಡೆಸಲಿದ್ದು, ಡ್ರಗ್ಸ್​ ಮಾಫಿಯಾದ ಇನ್ನಷ್ಟು ಮಾಹಿತಿ ಈತನಿಂದ ಹೊರಬೀಳುವ ಸಾಧ್ಯತೆ ಇದೆ.

ಈತನ ಜೊತೆ ಇನ್ನಷ್ಟು ನಟ ನಟಿಯರು ಡ್ರಗ್ಸ್​ ಖರೀದಿಸಿರುವ ಸಾಧ್ಯಯಿದ್ದು, ಮತ್ತಷ್ಟು ಜನರಿಗೆ ಆತಂಕ ಶುರುವಾಗಿದೆ.

Last Updated : Sep 10, 2020, 1:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.