ETV Bharat / state

ಹೌದಪ್ಪ ಹೌದು, ನೀವೇ ಪುನರ್ಜನ್ಮ ಕೊಟ್ಟ ದೇವರು.. ಕೊರೊನಾ ಗೆದ್ದವನಿಂದ ವೈದ್ಯರ ಕಾಲಿಗೆರಗಿ ಕೃತಜ್ಞತೆ.. - ಕೆಸಿ ಜನರಲ್​ ಆಸ್ಪತ್ರೆ

ಕೆಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರೆಲ್ಲರೂ ಕೊರೊನಾದಿಂದ ಗುಣಮುಖನಾದ ಯುವಕನಿಗೆ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ.

Corona patient cure
ಕೊರೊನಾ ಗೆದ್ದ ಯುವಕ
author img

By

Published : Apr 12, 2020, 12:15 PM IST

ಬೆಂಗಳೂರು : ದಿನೇದಿನೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.‌ ಮತ್ತೊಂದು ಕಡೆ ಮಹಾಮಾರಿ ಕೊರೊನಾದಿಂದ ಹಲವಾರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಳ್ಳುತ್ತಿದ್ದಾರೆ. ನಿನ್ನೆ ಕೂಡ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಗುಣಮುಖನಾಗಿದ್ದಾನೆ.

ಕೊರೊನಾ ಗೆದ್ದ ಯುವಕ

ಕೊರೊನಾದಿಂದ ಗುಣಮುಖರಾದ ಯುವಕ ವೈದ್ಯರಿಗೆ ಕೃತಜ್ಞತೆ ಅರ್ಪಿಸಿದ್ದಾನೆ. ಆಸ್ಪತ್ರೆಯ ಅಧೀಕ್ಷಕ ಡಾ. ವೆಂಕಟೇಶಯ್ಯ, ಆರ್​ಎಂಒ ಡಾ. ಮೋಹನ್‌ಕುಮಾರ್ ಸೇರಿ ಹಲವು ವೈದ್ಯರಿಗೆ ಕಾಲಿಗೆ ಬಿದ್ದು ಯುವಕ ಧನ್ಯತಾ ಭಾವ ಅರ್ಪಿಸಿದ್ದಾನೆ.

ಕೆಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರೆಲ್ಲರೂ ಕೊರೊನಾದಿಂದ ಗುಣಮುಖನಾದ ಯುವಕನಿಗೆ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದ್ದಾರೆ. ಈ ದೃಶ್ಯ ನಿಜಕ್ಕೂ ಕೊರೊನಾ ಬಂದರೂ ಧೈರ್ಯಗೆಡಬೇಕಿಲ್ಲ ಅನ್ನೋದನ್ನ ಸಾರಿ ಸಾರಿ ಹೇಳುತ್ತಿದೆ. ಅಷ್ಟೇ ಅಲ್ಲ, ವೈದ್ಯರು ದೇವರಂತೆ ನಿಮ್ಮನ್ನ ಬದುಕಿಸಬಲ್ಲರು ಅನ್ನೋದು ಕೂಡ ಸತ್ಯ. ಎಲ್ಲರಿಗೂ ಆತ್ಮಸ್ಥೈರ್ಯ ತುಂಬುವ ರೀತಿಯಲ್ಲಿದೆ ಈ ದೃಶ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.