ಬೆಂಗಳೂರು: ಕುಳಿತ ಜಾಗದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಹೆಚ್ಎಸ್ಆರ್ ಮೇಲ್ಸೇತುವೆ ಬಳಿಯ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನಾಗಮಂಗಲ ಮೂಲದ ಧನಂಜಯ (35) ಎಂದು ಗುರುತಿಸಲಾಗಿದೆ. ಧನಂಜಯ ಸ್ಥಳೀಯ ಕ್ಯಾಂಟರಿಂಗ್ ಸರ್ವಿಸ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಹೆಚ್ಎಸ್ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ವೇಳೆ ಮೃತ ಧನಂಜಯ ಜೇಬಿನಲ್ಲಿ ಸಾರಾಯಿ ಬಾಟಲಿ ಪತ್ತೆಯಾಗಿದೆ. ಅತಿಯಾದ ಮದ್ಯ ಸೇವನೆಯಿಂದ ಈತ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.