ಬೆಂಗಳೂರು: ಬೇರೆ ಯುವತಿಯೊಬ್ಬಳು ತನ್ನ ಗಂಡನ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ಇನ್ನು ಜಾಲತಾಣದಲ್ಲೇ ಆಕೆ ಮತ್ತು ಯುವತಿ ಕಿತ್ತಾಡಿಕೊಂಡಿದ್ದಾರೆ ಎನ್ನಲಾದ ವಿಡಿಯೋ ಸಹ ಭಾರಿ ವೈರಲ್ ಆಗಿದೆ.
ಮಂಗಳ (ಹೆಸರು ಬದಲಾಯಿಸಲಾಗಿದೆ) ಎನ್ನುವ ಮಹಿಳೆಗೆ ರಾಮ್ ಎನ್ನುವವನ ಜತೆ ಕೆಲ ವರ್ಷಗಳ ಹಿಂದೆಯೇ ಮದುವೆ ಆಗಿತ್ತು. ದಂಪತಿ ಇಬ್ಬರೂ ಒಂದೇ ಮನೆಯಲ್ಲಿ ವಾಸವಿದ್ದರು. ಈ ನಡುವೆ ಪತ್ನಿ ಇದ್ದರೂ ರಾಮ್ ಪ್ರೇಮಾ (ಹೆಸರು ಬದಲಾಯಿಸಲಾಗಿದೆ) ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಮಂಗಳ ಮನೆಯಲ್ಲಿ ಜಗಳ ಮಾಡಿದ್ದಳು. ಪ್ರೇಮಾ ಮತ್ತು ಮಂಗಳಾ ಎಂಬುವವರ ನಡುವೆಯೂ ಮಾತಿಗೆ ಮಾತು ಬೆಳೆದಿತ್ತು. ಈ ವಿಚಾರ ಹೊರಬಿದ್ದ ಮೇಲೂ ಆತನ ಮನೆಗೆ ಪ್ರೇಮಾ ಬಂದಾಗ ಸಿಟ್ಟಿಗೆದ್ದ ರಾಮ್ ಎಂಬಾತ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಮಂಗಳ ಮೊಬೈಲ್‌ನಲ್ಲಿ ಸೆರೆಯಾಗಿದೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಜಾಲತಾಣದಲ್ಲೇ ಇಬ್ಬರು ಮಹಿಳೆಯರ ನಡುವೆ ವಾರ್ ಶುರುವಾಗಿದೆ. ಗಂಡನ ವಿವಾಹೇತರ ಸಂಬಂಧದ ಬಗ್ಗೆ ಸಾಮಾಜಿಕ ತಾಲತಾಣದಲ್ಲೇ ಪತ್ನಿ ಚರ್ಚೆ ಆರಂಭಿಸಿದ್ದಾಳೆ. ಮುಂದುವರಿದು ಇಬ್ಬರ ನಡುವೆ ಕಮೆಂಟ್ಸ್ ವಾರ್ ಕೂಡ ನಡೆದಿದೆ.
ಈ ವಿಡಿಯೊ ಫೇಕ್ ಯಾರೂ ನಂಬಬೇಡಿ ಎಂದು ಪ್ರೇಮಾ ಎಂಬುವವರು ಕಮೆಂಟ್ ಮಾಡುತ್ತಿದ್ದಂತೆ, ಇದು ನಿಜವಾದ ವಿಡಿಯೋ, ತನ್ನ ಗಂಡನ ಜೊತೆಗೆ ಪ್ರೇಮಾ ಸಂಬಂಧ ಹೊಂದಿದ್ದಾಳೆ ಎಂದು ಮಂಗಳ ಪ್ರತಿಕ್ರಿಯಿಸಿದ್ದಾಳೆ. ಸದ್ಯ ಇವರಿಬ್ಬರ ಚರ್ಚೆ ಫೇಸ್‌ಬುಕ್‌ನಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.