ETV Bharat / state

ಪಾವಿತ್ರ್ಯತೆ ಇಲ್ಲದ ಬಜೆಟ್ ಒಪ್ಪಿದರೆ ಇತಿಹಾಸದಲ್ಲಿ ಕಳಂಕ ಉಳಿಯಲಿದೆ: ಎ.ಟಿ.ರಾಮಸ್ವಾಮಿ - a t ramaswamy talk on budget

ಈ ಬಾರಿಯ ಬಜೆಟ್​​ ಪಾವಿತ್ರ್ಯತೆ ಇಲ್ಲದ ಬಜೆಟ್ ಆಗಿದೆ. ಇದನ್ನು ಒಪ್ಪಿದರೆ ಇತಿಹಾಸದಲ್ಲಿ ಕಳಂಕವಾಗಿ ಉಳಿಯಲಿದೆ ಎಂದು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

a t ramaswamy
ಎ.ಟಿ. ರಾಮಸ್ವಾಮಿ
author img

By

Published : Mar 17, 2021, 6:01 PM IST

ಬೆಂಗಳೂರು: ಈ ಬಾರಿಯ ಬಜೆಟ್​​ ಪಾವಿತ್ರ್ಯತೆ ಇಲ್ಲದ ಬಜೆಟ್ ಆಗಿದೆ. ಇದನ್ನು ಒಪ್ಪಿದರೆ ಇತಿಹಾಸದಲ್ಲಿ ಕಳಂಕವಾಗಿ ಉಳಿಯಲಿದೆ ಎಂದು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಂಡವಾಳ ವೆಚ್ಚ ಕಡಿಮೆ ಮಾಡಿದರೆ ಅಭಿವೃದ್ಧಿ ಹೇಗೆ ಸಾಧ್ಯ?. ಸರ್ಕಾರ ಹಣಕಾಸು ಇಲಾಖೆಯ ಅಧೀನದಲ್ಲಿರಬಾರದು. ಎಲ್ಲದಕ್ಕೂ ಹಣಕಾಸು ಇಲಾಖೆಯತ್ತ ಬೊಟ್ಟು ಮಾಡಬಾರದು. ಸರಿಯಾದ ಆಡಳಿತ ಇಲ್ಲದಿದ್ದರೆ ಅದರ ದುಷ್ಪರಿಣಾಮವನ್ನು ರಾಜ್ಯದ ಜನರು ಅನುಭವಿಸಬೇಕಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಶಾಶ್ವತ ಯೋಜನೆಗಳು ಮಾಯ ಆಗುತ್ತಿವೆ. ಕೃಷಿ, ಕೈಗಾರಿಕೆ ನಿರೀಕ್ಷಿತ ಅಭಿವೃದ್ಧಿ ಆಗದಿರುವುದು ಕೃಷಿ ಪ್ರಧಾನ ದೇಶದಲ್ಲಿ ದೊಡ್ಡ ದುರಂತ. ಅಗ್ಗದ ಜನಪ್ರಿಯ ಯೋಜನೆಗಳು ಹೆಚ್ಚಾಗಿರುವುದರಿಂದ ಶಾಶ್ವತ ಯೋಜನೆಗಳು ಮಾಯ ಆಗುತ್ತಿವೆ. ಇತ್ತೀಚಿನ ಆಯವ್ಯಯದಲ್ಲಿ ಆಯಕ್ಕಿಂತ ವ್ಯಯವೇ ಹೆಚ್ಚಾಗಿದೆ. ಇದಕ್ಕೆ ಕಾರಣ ಒಳ್ಳೆಯ ಆಡಳಿತ ಇಲ್ಲದಿರುವುದು ಎಂದರು.

ನಾವು ಸಾಲ ತೆಗೆದುಕೊಂಡು ಸರ್ಕಾರ ನಡೆಸಿಕೊಂಡು ಹೋಗುವ ಪ್ರವೃತ್ತಿ ಮುಂದುವರೆಯುತ್ತಿದೆ. ರಾಜ್ಯದಲ್ಲಿ ಸಂಪತ್ತು ಸಾಕಷ್ಟಿದೆ. ಸ್ವರ್ಗ ಇಲ್ಲೇ ಇದೆ, ಆದ್ರೆ ನರಕ ಮಾಡಲು ಹೊರಟಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು.

ರಾಜ್ಯದಲ್ಲಿ ಯಾರದೋ ಸಹಾಯದಿಂದ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಯಡಿಯೂರಪ್ಪ ಕೇಂದ್ರದ ವಿರುದ್ಧ ಗುಡುಗಬೇಕು. ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಎಲ್ಲರೂ ಸೇರಿ ಒಂದು ನಿರ್ಣಯ ಕೈಗೊಂಡು ಕೇಂದ್ರದ ವಿರುದ್ಧ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಹತ್ತಾರು ಸಾವಿರ ಕೋಟಿ ರೂ. ಅಧಿಕಾರಿಗಳ ವಯಕ್ತಿಕ ಖಾತೆಯಲ್ಲಿ ಬಿದ್ದಿದೆ. ಇದಕ್ಕೆ ಯಾರು ಜವಾಬ್ದಾರರು? ಇದನ್ನು ಯಾರು ಕೇಳುವವರು? 4,421 ಕೋಟಿ ಪಿಡಿ ಅಕೌಂಟ್​ನಲ್ಲಿ ಇದೆ. ಇದನ್ನು ಯಾರೂ ಕೇಳುವುದಿಲ್ಲ. ಹಣಕಾಸು ಇಲಾಖೆ ಏನು ಮಾಡುತ್ತಿದೆ. ಮೇಧಾವಿಗಳು ಕೂತಿದ್ದಾರಲ್ಲಾ. ಹಣಕಾಸು ಇಲಾಖೆಯವರು ಅನ್ನ ತಿನ್ನುತ್ತಿದ್ದಾರಾ? ಮಣ್ಣು ತಿನ್ನುತ್ತಾರಾ? ಅಧಿಕಾರ ನಡೆಸುವವರು ನೀವಾ, ಅವರಾ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಸಿಎಸ್ಆರ್ ಸಮಿತಿ ಮುಖ್ಯಸ್ಥರನ್ನಾಗಿ ಗೀತಾಂಜಲಿ ಕಿರ್ಲೋಸ್ಕರ್ ನೇಮಕ

ಸಣ್ಣ ಪುಟ್ಟ ಕಾಮಗಾರಿ ಮಾಡುವ ಗುತ್ತಿಗೆದಾರರು ಏನಾಗಿದ್ದಾರೆ?. ಅವರು ಬೆಂಗಳೂರಿಗೆ ಬಂದು ಎನ್ ಒ ಸಿ ತೆಗೆದುಕೊಂಡು ಹೋಗಲಿಕ್ಕೆ ಆಗುವುದಿಲ್ಲ. ಕಾಯುವವರೆ ಕಳ್ಳರಾದರೆ ಯಾರು ರಕ್ಷಣೆ ನೀಡುತ್ತಾರೆ. ಕಡತವನ್ನು ಕೈಯ್ಯಲ್ಲಿ ಅಲ್ಲ ಕಾಸಿನಲ್ಲಿ ನೂಕಬೇಕು. ಇಲ್ಲವಾದರೆ ಕಡತ ಚಲನೆಯೇ ಆಗುವುದಿಲ್ಲ. ಖಾಸಗಿಯವರ ಯಾವುದಾದರು ಕಡತಗಳು ಕೂಡಲೇ ಮೂವ್ ಆಗುತ್ತದೆ. ಬಿಳಿ ಆನೆಗಳಾದ ಅಧಿಕಾರಿ ವರ್ಗವನ್ನು ಕಡಿಮೆ ಮಾಡಿ. ಇದರಿಂದ ಕಾರ್ಯಾಂಗದ ಕ್ರಿಯಾಶೀಲತೆಗೆ ಧಕ್ಕೆಯಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.