ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಕಳೆದ ಎರಡ್ಮೂರು ದಿನಗಳಿಂದ ಪರ- ವಿರೋಧದ ಹೇಳಿಕೆಗಳು ಕೇಳಿ ಬರುತ್ತಿವೆ. ಇದೀಗ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಹರಿದಾಡುತ್ತಿದ್ದು, ಇನ್ನೊಂದು ಸುತ್ತಿನ ಕೇಸರೆರಚಾಟಕ್ಕೆ ನಾಂದಿ ಹಾಡುವ ಸೂಚನೆ ಗೋಚರಿಸುತ್ತಿದೆ.
ಕನ್ನಡ ಚಿತ್ರರಂಗದ ಹೆಸರಾಂತ ನಟ ದಿ.ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಆಗಿನ ಸಿಎಂ ಕುಮಾರಸ್ವಾಮಿ ಬಳಿಗೆ ಹೋದಾಗ ಮನವಿ ಪತ್ರವನ್ನು ಎಸೆದುಬಿಟ್ಟಿದ್ದರು ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ದನಿಗೂಡಿಸಿದ್ದ ಹಿರಿಯ ನಟ ದೊಡ್ಡಣ್ಣ, ಅಂಬರೀಶ್ರವರ ಸ್ಮಾರಕ ನಿರ್ಮಾಣಕ್ಕೆ ಕುಮಾರಸ್ವಾಮಿ ಕಾರಣ ಅಲ್ಲ. ಸಿಎಂ ಯಡಿಯೂರಪ್ಪನವರು ಕಾರಣಿಕರ್ತರು ಎಂದು ಹೇಳಿಕೆ ನೀಡಿದ್ದರು. ಈ ಕುರಿತಾಗಿ ಶಾಸಕ ಸಾರಾ ಮಹೇಶ್, ಡಿಸಿ ತಮ್ಮಣ್ಣ ಹಾಗೂ ಸಚಿವ ಕೆ.ಎಸ್ ,ಈಶ್ವರಪ್ಪ ಪ್ರತಿಕ್ರಿಯಿಸಿದ್ದರು.
![viral post](https://etvbharatimages.akamaized.net/etvbharat/prod-images/kn-bng-06-amabaresh-monument-controvercy-now-viral-post-from-bjp-ka10032_09072021215557_0907f_1625847957_581.jpg)
ಇನ್ನು ಅಂಬರೀಶ್ ಸ್ಮಾರಕ ವಿಚಾರ ಕುರಿತು ಪರ-ವಿರೋಧದ ಹೇಳಿಕೆಗಳು ಕಳೆದು ಎರಡ್ಮೂರು ದಿನಗಳಿಂದ ನಡೆಯುತ್ತಿದೆ. ಈ ವಿಚಾರವಾಗಿ ಈಗ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಯಡಿಯೂರಪ್ಪ ಹೆಸರಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.
ಅದರಲ್ಲಿ ಕರುನಾಡ ಹೆಮ್ಮೆಯ ನಟ ಅಂಬರೀಶ್ರ ಸಾಮಾಜಿಕ ಹಾಗೂ ಚಿತ್ರರಂಗದ ಸೇವೆಯನ್ನು ಗೌರವಿಸಿ ಅಂಬರೀಶ್ ಸ್ಮಾರಕಕ್ಕೆ 1 ಎಕರೆ 34 ಗುಂಟೆ ಭೂಮಿ ಹಾಗೂ ನಿರ್ಮಾಣಕ್ಕೆ ಮೊದಲ ಕಂತಾಗಿ 5 ಕೋಟಿ ರೂ.ಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಬಿ.ಎಸ್ .ಯೂರಪ್ಪನವರಿಗೆ ಅಭಿನಂದನೆಗಳು ಎಂದು ಬರೆಯಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.