ಬೆಂಗಳೂರು: ಚಿನ್ನದ ಬಿಸ್ಕೆಟ್ಗಳನ್ನ ಗುದನಾಳದಲ್ಲಿ ಮರೆಮಾಚಿ ಕಳ್ಳಸಾಗಣೆಗೆ ಯತ್ನಿಸಿದ ಪ್ರಯಾಣಿಕನೊಬ್ಬ ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯಿಂದ 600 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಕ್ಕೆ ಆಗಸ್ಟ್ 15 ರಂದು ಕೋಲ್ಕತ್ತಾದಿಂದ ಏರ್ ಏಷ್ಯಾದ ವಿಮಾನ ಸಂಖ್ಯೆ 15 1536 ಬಂದಿಳಿದಿತ್ತು. ವಿಮಾನದಲ್ಲಿನ ಪ್ರಯಾಣಿಕನೊಬ್ಬ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಖಚಿತ ಮಾಹಿತಿ ಆಧಾರದ ಮೇಲೆ ತೆರಿಗೆ ಇಲಾಖೆಯ ವಾಯು ಗುಪ್ತಚರ ಘಟಕದ ಅಧಿಕಾರಿಗಳಿಗೆ ಸಿಕ್ಕಿದೆ.
ವಿಮಾನ ನಿಲ್ದಾಣದಲ್ಲಿ ಆತನನ್ನ ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿ ತಪಾಸಣೆಗೊಳಪಡಿಸಿದ್ದಾರೆ. ಆಗ ಆರೋಪಿ ತನ್ನ ಗುದನಾಳದಲ್ಲಿ ಚಿನ್ನದ ಬಿಸ್ಕೆಟ್ಗಳನ್ನಿಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್ಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಸಮುದ್ರ, ವಿಮಾನದ ಮೂಲಕ ಚಿನ್ನ ಕಳ್ಳ ಸಾಗಣೆ.. 12 ಕೋಟಿ ಮೌಲ್ಯದ ಬಂಗಾರ ವಶ!
ಕುಡಿದ ನಶೆಯಲ್ಲಿ ಅಮಾಯಕನ ಮೇಲೆ ಹಲ್ಲೆ: ಕೆಲಸದಾಳುಗಳನ್ನ ಕರೆಯಲು ಬಸ್ ನಿಲ್ದಾಣಕ್ಕೆ ಬಂದಿದ್ದ, ಆಟೋ ಡ್ರೈವರ್ ಆತನನ್ನ ಕರೆದಿದ್ದಾನೆ. ಆದರೆ, ಆತ ತಕ್ಷಣಕ್ಕೆ ಹೋಗಿಲ್ಲ, ಕರೆದರೂ ಬರಲಿಲ್ಲ ಎಂಬ ಕಾರಣಕ್ಕೆ ರೇಜರ್ ನಿಂದ ಹಲ್ಲೆ ನಡೆಸಿದ್ದಾನೆ. ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ತೂಬಗೆರೆಯ ನಿವಾಸಿ ರಮೇಶ್ ರೇಜರ್ ಹಲ್ಲೆಗೆ ತುತ್ತಾಗಿದ್ದಾನೆ. ಹಲ್ಲೆ ನಡೆಸಿದ ಆಟೋ ಡ್ರೈವರ್ ನಿಖಿಲ್ ಘಟನೆ ನಂತರ ಪರಾರಿಯಾಗಿದ್ದು, ಹಲ್ಲೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 30 ಸಂಜೆ 7:30ರ ಸಮಯದಲ್ಲಿ ರಮೇಶ್ ತನ್ನ ಹೊಲದಲ್ಲಿ ವ್ಯವಸಾಯದ ಕೆಲಸದಾಳುಗಳನ್ನು ಕರೆಯಲು ತೂಬಗೆರೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಯೇ ನಿಂತಿದ್ದ ರಮೇಶ್ ಎಂಬಾತನನ್ನು ಆಟೋ ಡ್ರೈವರ್ ನಿಖಿಲ್ ಕರೆದಿದ್ದಾನೆ. ನನಗೆ ಸ್ವಲ್ಪ ಕೆಲಸ ಇದೆ ಆಮೇಲೆ ಸಿಗುವುದಾಗಿ ರಮೇಶ್ ಆಟೋ ಡ್ರೈವರ್ ನಿಖಿಲ್ಗೆ ಹೇಳಿದ್ದಾರೆ. ಕುಡಿದ ನಶೆಯಲ್ಲಿದ್ದ ನಿಖಿಲ್, ನಾನು ಕರೆದರೂ ಬರಲಿಲ್ಲ ಎಂಬ ಕಾರಣಕ್ಕೆ ಹಲ್ಲೆಗೆ ಮುಂದಾಗಿದ್ದಾನೆ.
ನಾನು ಕರೆದರೂ ಬರದೇ ನಿನ್ನ ಪಾಡಿಗೆ ಹೋಗುತ್ತಿದ್ದೀಯಾ. ನಿನಗೆ ಎಷ್ಟು ದುರಾಹಂಕಾರ ಎಂದ ನಿಖಿಲ್ ರೇಜರ್ನಿಂದ ರಮೇಶ್ನ ಎಡಗೈ ಅನ್ನು ಕುಯ್ದಿದ್ದಾನೆ. ಇದನ್ನು ಗಮನಿಸಿದ ರಮೇಶ್ ಅವರ ಕಿರಿಯ ಸಹೋದರ ದರ್ಶನ್ ಹಾಗೂ ಶ್ರೀಧರ್ ಸ್ಥಳಕ್ಕೆ ಓಡಿ ಬಂದಿದ್ದಾರೆ. ಇವರ ಬೆನ್ನ ಹಿಂದೆ ಜನರೂ ಸಹ ಬರುತ್ತಿರುವುದನ್ನು ಗಮನಿಸಿದ ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆಸ್ಪತ್ರೆಯ ಚಿಕಿತ್ಸೆ ಪಡೆದ ರಮೇಶ್ಗೆ 10 ಹೊಲಿಗೆಗಳನ್ನ ಹಾಕಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.