ETV Bharat / state

2 ಡೋಸ್ ಕೋವಿಡ್ ಲಸಿಕೆ ಪಡೆದ ವ್ಯಕ್ತಿ 2 ತಿಂಗಳು ರಕ್ತದಾನ‌ ಮಾಡುವಂತಿಲ್ಲ : ಡಾ. ಕುಮಾರ್

ಹೊಸ ರಕ್ತ ಉತ್ಪನ್ನವಾಗುವುದರಿಂದ ಚೈತನ್ಯದ ಜೊತೆ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಹಾಗಾಗಿ, ಪ್ರತಿಯೊಬ್ಬ ಆರೋಗ್ಯವಂತರು ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ..

ಡಾ ಕುಮಾರ್
ಡಾ ಕುಮಾರ್
author img

By

Published : May 5, 2021, 8:24 PM IST

ಬೆಂಗಳೂರು : ಎರಡು ಬಾರಿ ಕೋವಿಡ್ ಲಸಿಕೆ ತೆಗೆದುಕೊಂಡ ಮೇಲೆ 2 ತಿಂಗಳುಗಳ ಕಾಲ ರಕ್ತದಾನ ಮಾಡುವಂತಿಲ್ಲ ಎಂದು ರಾಜ್ಯ ಇಂಡಿಯನ್ ರೆಡ್ ಕ್ರಾಸ್ ಉಪಾಧ್ಯಕ್ಷ ಡಾ.ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ರಕ್ತದ ಕೊರತೆ ಎಲ್ಲೆಡೆ ಹೆಚ್ಚಾಗಿದೆ. ಕಳೆದೊಂದು ವರ್ಷದಿಂದ ರಕ್ತದ ಅಭಾವ ತಲೆದೂರಿದೆ. ರಾಜ್ಯದಲ್ಲಿ ರಕ್ತದ ಅವಶ್ಯಕತೆ ಇರುವುದು ಹಲವಾರು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದರು.

ಈಗ 18 ವರ್ಷ ಮೇಲ್ಪಟ್ಟವರು ಸಹ ಲಸಿಕೆ ಪಡೆಯುತ್ತಿದ್ದಾರೆ. ಹಾಗಾಗಿ, ಲಸಿಕೆ ಪಡೆದುಕೊಳ್ಳೋಕು ಮುನ್ನ ರಕ್ತದಾನ ಮಾಡಿ, ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ನೆಮ್ಮದಿ, ಪುಣ್ಯ ನಿಮಗೆ ದೊರೆಯುತ್ತದೆ ಎಂದರು.

2 ಡೋಸ್ ಕೋವಿಡ್ ಲಸಿಕೆ ಪಡೆದ ವ್ಯಕ್ತಿ, 2 ತಿಂಗಳು ರಕ್ತದಾನ‌ ಮಾಡುವಂತಿಲ್ಲ..

ಆಗಾಗ ರಕ್ತದಾನ‌ ಮಾಡಿದರೆ ಹೃದಯಾಘಾತವಾಗೋ ಸಾಧ್ಯತೆಯು ಕಡಿಮೆಯಾಗುತ್ತದೆ. ಜ್ಞಾಪಕ ಶಕ್ತಿ ಸಹ ಜಾಸ್ತಿಯಾಗುತ್ತದೆ. ರಕ್ತದಾನ ಮಾಡಿದಾಗ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ ಎಂದರು.

ಹೊಸ ರಕ್ತ ಉತ್ಪನ್ನವಾಗುವುದರಿಂದ ಚೈತನ್ಯದ ಜೊತೆ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಹಾಗಾಗಿ, ಪ್ರತಿಯೊಬ್ಬ ಆರೋಗ್ಯವಂತರು ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಎಂದು ವೈದ್ಯ ಕುಮಾರ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.