ETV Bharat / state

ಸಿಎಂ ನಿವಾಸದ ಮುಂದೆ ಹೈಡ್ರಾಮಾ: ಪೊಲೀಸರಿಂದ ವಂಚನೆಯಾಗಿದೆ ಎಂದು ವಿಷ ಕುಡಿಯಲು ಯತ್ನಿಸಿದ ವೃದ್ಧ

ಆರ್‌ಟಿ ನಗರದಲ್ಲಿರುವ ಸಿಎಂ ನಿವಾಸದ ಎದುರು ಜನತಾದರ್ಶನದಲ್ಲಿ ವೃದ್ಧರೊಬ್ಬರು ತಮಗಾದ ಮೋಸ ವಿವರಿಸುತ್ತ ಸಿಎಂ ಬೊಮ್ಮಾಯಿ ಎದುರೇ ವಿಷ ಸೇವಿಸಲು ಯತ್ನಿಸಿದ್ದಾರೆ.

A old man tried to drink poison in front of CM Bommai
ಸಿಎಂ ಬೊಮ್ಮಾಯಿ ಎದುರೇ ವಿಷ ಕುಡಿಯಲು ಯತ್ನಿಸಿದ ವೃದ್ಧ
author img

By

Published : Mar 18, 2022, 12:34 PM IST

ಬೆಂಗಳೂರು: ನಿವೇಶನ ವಿಚಾರದಲ್ಲಿ ಪೊಲೀಸರು ಶಾಮೀಲಾಗಿ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ಸಿಎಂ ಬೊಮ್ಮಾಯಿ ಅವರ ಎದುರೇ ವೃದ್ಧರೊಬ್ಬರು ವಿಷ ಕುಡಿಯಲು ಯತ್ನಸಿದ ಘಟನೆ ನಡೆದಿದೆ.

ಆರ್‌ಟಿ ನಗರದಲ್ಲಿರುವ ಸಿಎಂ ನಿವಾಸದ ಎದುರು ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸುಂಕದಕಟ್ಟೆ ನಿವಾಸಿ ಚಂದ್ರಶೇಖರ್ ಎಂಬುವವರು ಆಗಮಿಸಿದ್ದರು.‌ ನನಗೆ ಪೊಲೀಸರಿಂದಲೇ ಅನ್ಯಾಯವಾಗಿದೆ ಎಂದು ಸಿಎಂಗೆ ದೂರು ನೀಡಿದರು. ಪೊಲೀಸರು ಕೆಲವರ ಜೊತೆ ಸೇರಿ ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ. ಮೋಸ ಮಾಡಿದ್ದಾರೆ ಎಂದು ಅನ್ನೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​​​ ವಿರುದ್ಧ ಆರೋಪ ಮಾಡಿದ ವೃದ್ಧ, ನ್ಯಾಯ ಕೊಡಿಸುವಂತೆ ಎಂದು ಸಿಎಂ ಬಳಿ ಮನವಿ ಮಾಡಿದರು.

ಈಗಾಗಲೇ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎನ್ನುತ್ತಲೇ ವ್ಯಕ್ತಿ ಬಾಟಲಿ ತೆಗೆದು ಸಿಎಂಗೆ ತೋರಿಸಿ ಕುಡಿಯಲು ಯತ್ನಿಸಿದರು. ಈ ವೇಳೆ, ಪೊಲೀಸರು ತಡೆದು ವೃದ್ಧನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು. ಆಗ ಈ ಕುರಿತಂತೆ ಪರಿಶೀಲನೆ ನಡೆಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂಒದಿ: ಮಥುರಾದಲ್ಲಿ ಉರಿಯುವ ಬೃಹತ್‌ ಬೆಂಕಿ ದಾಟುವ ಸಂಪ್ರದಾಯ ರೋಮಾಂಚನಕಾರಿ..!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.