ETV Bharat / state

6 ಲಕ್ಷ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಬಿಎಂಪಿ ನೋಟಿಸ್ - ಬಿಬಿಎಂಪಿ ನೋಟಿಸ್

ಆರು ಲಕ್ಷ ರೂಪಾಯಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಬಿಎಂಪಿಯಿಂದ ನೋಟಿಸ್ ನೀಡಲಾಗಿದೆ. ವಸತಿ ಪ್ರದೇಶದಲ್ಲಿರುವ ಅಂಗಡಿಗಳು ಹಾಗೂ ಸಣ್ಣ ಹೋಟೆಲ್‌ಗಳನ್ನು ಕೂಡ ವಾಣಿಜ್ಯ ಎಂದು ವರ್ಗೀಕರಿಸಲಾಗುತ್ತಿದ್ದು, ಅವುಗಳಿಗೆ ವಾಣಿಜ್ಯ ಘಟಕಗಳಂತೆ ತೆರಿಗೆ ಪಾವತಿಸಬೇಕಿದೆ.

BBMP  property tax  notice from the BBMP  ಬಿಬಿಎಂಪಿ ನೋಟಿಸ್  ಆಸ್ತಿ ತೆರಿಗೆ ಬಾಕಿ
6 ಲಕ್ಷ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಬಿಎಂಪಿ ನೋಟಿಸ್
author img

By ETV Bharat Karnataka Team

Published : Jan 8, 2024, 10:33 PM IST

ಬೆಂಗಳೂರು: 6 ಲಕ್ಷ ರೂಪಾಯಿಗೂ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಪಾಲಿಕೆಯು ನೋಟಿಸ್ ನೀಡುತ್ತಿದ್ದು, ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳಿಗೂ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸುತ್ತಿದೆ.

ಬಿಬಿಎಂಪಿ ನಿಯಮದ ಅನುಸಾರ, ವಸತಿ ಪ್ರದೇಶದಲ್ಲಿರುವ ಅಂಗಡಿಗಳು ಹಾಗೂ ಸಣ್ಣ ಹೋಟೆಲ್‌ಗಳನ್ನು ಕೂಡ ವಾಣಿಜ್ಯ ಎಂದು ವರ್ಗೀಕರಿಸಲಾಗುತ್ತಿದ್ದು, ಅವುಗಳಿಗೆ ವಾಣಿಜ್ಯ ಘಟಕಗಳಂತೆ ತೆರಿಗೆ ಪಾವತಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂಲಕ ಆಸ್ತಿ ತೆರಿಗೆ ಸಂಗ್ರಹವನ್ನು ವೃದ್ಧಿಸಲು ಮುಂದಾಗಿದ್ದು, ಎಲ್ಲಾ ಆಯ್ಕೆಗಳ ಮೂಲಕ ಪ್ರಯತ್ನಿಸುತ್ತಿದೆ. ಇದರ ಜೊತೆಗೆ ಆಸ್ತಿಗಳನ್ನು ಕಡಿಮೆ ಮೌಲ್ಯಮಾಪನ ಮಾಡಿರುವ ಹಾಗೂ ಹೊಸ ಸೇರ್ಪಡೆಗಳನ್ನು ಘೋಷಿಸದ ಮತ್ತು ತೆರಿಗೆ ವಂಚಿಸಿದ ಆಸ್ತಿಗಳಿಗೂ ನೋಟಿಸ್ ನೀಡಲಾಗುತ್ತಿದೆ ಎಂದಿದ್ದಾರೆ.

ಪಾಲಿಕೆಯು ಎರಡು ಲಕ್ಷ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆಯನ್ನು ಪಾಲಿಸುವಂತೆ ನೋಟಿಸ್ ನೀಡುತ್ತಿದ್ದಾರೆ. ಈ ನಡುವೆ ಕೆಲವು ಆಸ್ತಿ ಮಾಲೀಕರು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿ ಕಟ್ಟಡಗಳಿಗೆ ಹೊಸ ಸೇರ್ಪಡೆಗಳನ್ನು ಮಾಡಿದ್ದಾರೆ. ಮತ್ತೆ ಕೆಲವರು ತಮ್ಮ ಜಾಗಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಾಡಿಗೆಗೆ ನೀಡಿದ್ದಾರೆ. ಹೆಚ್ಚುವರಿ ನಿರ್ಮಾಣ ಮಾಡಿದ ಬಳಿಕ ಆಸ್ತಿ ತೆರಿಗೆಯನ್ನು ಸೆಸ್‌ನೊಂದಿಗೆ ಪಾವತಿಸಲು ಆಸ್ತಿ ಮಾಲೀಕರಿಗೆ ತಿಳಿಸಲಾಗಿದೆ ಎಂದಿದ್ದಾರೆ.

ಕಮರ್ಷಿಯಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಘಟಕಗಳಿಗೆ ಆಸ್ತಿ ತೆರಿಗೆ ಪಾವತಿಸಲು ಮತ್ತು ಬಡ್ಡಿಯೊಂದಿಗೆ ಆಸ್ತಿ ತೆರಿಗೆ ಮೌಲ್ಯಮಾಪನದಲ್ಲಿನ ವ್ಯತ್ಯಾಸಗಳನ್ನು ಪಾವತಿಸಲು ಪಾಲಿಕೆಯಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ಅನೇಕ ಆಸ್ತಿ ಮಾಲೀಕರು ಪಾಲಿಕೆ ಕ್ರಮಕ್ಕೆೆ ಹೆದರಿ ಬಾಕಿ ತೆರಿಗೆ ಪಾವತಿಸಿದ್ದಾರೆ. ಆದರೆ, ಕೆಲವರು ಲಕ್ಷಗಟ್ಟಲೆ ಬಾಕಿ ಉಳಿಸಿಕೊಂಡಿದ್ದಾರೆ. ಅಂಗಡಿಗಳು ವಾಣಿಜ್ಯ ವರ್ಗದ ಅಡಿ ಬೆಸ್ಕಾಂ ವಿದ್ಯುತ್ ಸರಬರಾಜು ಪಡೆದಿವೆ. ಅದೇ ರೀತಿಯಲ್ಲಿ, ಅವರು ವಾಣಿಜ್ಯ ಘಟಕಗಳಾಗಿ ತೆರಿಗೆಯನ್ನು ಪಾವತಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಈ ರೀತಿಯ ಅಭಿಮಾನ ಬೇಡವೇ ಬೇಡ, ಮೃತರ ಕುಟುಂಬಗಳಿಗೆ ಅಗತ್ಯವಿರುವುದನ್ನು ಮಾಡುವೆ: ಯುವಕರ ಪೋಷಕರಿಗೆ ಯಶ್​ ಸಾಂತ್ವನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.