ETV Bharat / state

ಆನೇಕಲ್: ನಿವೇಶನ ವಿವಾದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆ - ನಿವೇಶನ ವಿವಾದದ ಹಿನ್ನಲೆ ಹತ್ಯೆ

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಆನೇಕಲ್​ನಲ್ಲಿ ನಡೆದಿದೆ.

a-man-killed-over-land-dispute-in-anekal-bengaluru
ಆನೇಕಲ್ : ನಿವೇಶನ ವಿವಾದ ಹಿನ್ನಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆ
author img

By ETV Bharat Karnataka Team

Published : Oct 30, 2023, 2:31 PM IST

Updated : Oct 30, 2023, 4:03 PM IST

ಆನೇಕಲ್ : ನಿವೇಶನ ವಿವಾದ ಹಿನ್ನಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆ

ಆನೇಕಲ್ (ಬೆಂಗಳೂರು) : ನಿವೇಶನದ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಆನೇಕಲ್​ನಲ್ಲಿ ನಡೆದಿದೆ. ಕೊಲೆಯಾದವರನ್ನು ಹೆಬ್ಬಗೋಡಿ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಹೆಂಡತಿ ಮತ್ತು ಮಕ್ಕಳ ಎದುರಲ್ಲೇ ಆರೋಪಿಗಳು ರಮೇಶ್​ ಅವರನ್ನು ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಮೃತ ರಮೇಶ್​ ಪತ್ನಿ ಕಾವ್ಯ ಆರೋಪಿಸಿದ್ದಾರೆ.

ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಾರ್ಡ್ ನಂ 22ರಲ್ಲಿ ರಮೇಶ್ ಅವರು ಸರ್ಕಾರದಿಂದ ಮಂಜೂರಾಗಿದ್ದ ನಿವೇಶನದಲ್ಲಿ ಮನೆಯನ್ನು ಕಟ್ಟಿಸುತ್ತಿದ್ದರು. ಆದಿತ್ಯವಾರ ರಾತ್ರಿ ವೇಳೆ ಕೆಲಸಗಾರರಿಗೆ ರಮೇಶ್​ ಅವರು ಊಟ ತಂದಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಕೆಲವರು ರಮೇಶ್​ ಮೇಲೆ ಏಕಾಏಕಿ ಮಾರಕಾಸ್ತ್ರದಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಮೃತ ರಮೇಶನ ಪತ್ನಿ ಕಾವ್ಯ ಆರೋಪಿಸಿದ್ದಾರೆ.

ನಿವೇಶನ ವಿವಾದದ ಹಿನ್ನೆಲೆ ಹತ್ಯೆ: ರಮೇಶ್ ಹೆಬ್ಬಗೋಡಿ ನಗರಸಭೆಯ ಖಾತೆಯಂತೆ ಸರ್ಕಾರದಿಂದ ಮಂಜೂರಾಗಿದ್ದ ನಿವೇಶನದಲ್ಲಿ ಮನೆ ಕಟ್ಟಲು ಮುಂದಾಗಿದ್ದರು. ಭಾನುವಾರವೂ ಮನೆ ನಿರ್ಮಾಣ ಕೆಲಸ ಸಾಗುತ್ತಿತ್ತು. ಈ ನಿವೇಶನ ವಿಚಾರವು ವಿವಾದಕ್ಕೆ ಕಾರಣವಾಗಿತ್ತು.

ಭಾನುವಾರ ರಾತ್ರಿ ನಿರ್ಮಾಣ ಹಂತದ ಮನೆಯ ಬಳಿ ಬಂದಿದ್ದ ಆರೋಪಿಗಳು ಏಕಾಏಕಿ ರಮೇಶ್ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೂ ಮೊದಲು ಹಲವು ಬಾರಿ ಜಗಳ ಮಾಡಿದ್ದರು ಎಂದು ತಿಳಿದುಬಂದಿದೆ. ಘಟನೆ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಮೇಶ್ ಪತ್ನಿ ಕಾವ್ಯ, ಎರಡು ಮಕ್ಕಳನ್ನು ಅಗಲಿದ್ದಾನೆ. ಕಾವ್ಯ ಹೆಬ್ಬಗೋಡಿ ಠಾಣೆಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸಿ ಮಕ್ಕಳನ್ನು ಪೋಷಿಸುತ್ತಿದ್ದಳು. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ರಾಯಚೂರಿನಲ್ಲಿ ವ್ಯಕ್ತಿ ಬರ್ಬರ ಹತ್ಯೆ : ರಾಯಚೂರಿನಲ್ಲಿ ಜಮೀನಿಗೆ ನೀರು ಕಟ್ಟಲು ತೆರಳಿದ್ದ ವ್ಯಕ್ತಿ ಮೇಲೆ ಮೂವರು ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ರಬಣಕಲ್‌ ಗ್ರಾಮದ ಪ್ರಸಾದ್ (38) ಎಂದು ಗುರುತಿಸಲಾಗಿದೆ. ಹಳೆ ವೈಷಮ್ಯದ ಹಿನ್ನೆಲೆ ಹತ್ಯೆ ನಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಜಮೀನು ವಿವಾದದ ಕಿತ್ತಾಟದಲ್ಲಿ 6 ಬಾರಿ ಟ್ರ್ಯಾಕ್ಟರ್​ ಹತ್ತಿಸಿ ಯುವಕನ ಬರ್ಬರ ಹತ್ಯೆ!

Last Updated : Oct 30, 2023, 4:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.