ETV Bharat / state

ಏನ್​ ಸಮಾಚಾರ ಎಂದು ಕೆಣಕಿದ್ದಕ್ಕೆ ರೌಡಿಶೀಟರ್​​ ಹೆಣವನ್ನೇ ಉರುಳಿಸಿದ್ರು! - undefined

ಬೆಂಗಳೂರಲ್ಲಿ ಮತ್ತೆ ನೆತ್ತರು ಹರಿದಿದೆ. ಏನ್​ ಸಮಾಚಾರ ಎಂದು ಕೆಣಕಿದ್ದ ರೌಡಿಶೀಟರ್​ನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಿಲಕ್​ ನಗರದ ಬಿಟಿಪಿ ಲೇಔಟ್​ನಲ್ಲಿ ನಡೆದಿದೆ.

ರಾಜಶೇಖರ್​ ಅಲಿಯಾಸ್​ ರಾಜೇಶ್​, ಮೃತ ರೌಡಿಶೀಟರ್​
author img

By

Published : May 20, 2019, 9:46 PM IST

ಬೆಂಗಳೂರು: ರೌಡಿಶೀಟರ್​ವೋರ್ವ ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ತಿಲಕ್ ನಗರದ ಬಿಟಿಪಿ ಲೇಔಟ್​ನಲ್ಲಿ ನಡೆದಿದೆ.

BNG
ರಾಜಶೇಖರ್​ ಅಲಿಯಾಸ್​ ರಾಜೇಶ್​, ಮೃತ ರೌಡಿಶೀಟರ್​

ರಾಜಶೇಖರ್ ಅಲಿಯಾಸ್​ ರಾಜೇಶ್​ ಕೊಲೆಯಾಗಿರುವ ರೌಡಿಶೀಟರ್​. ನಿನ್ನೆ ರಾತ್ರಿ ರಾಜೇಶ್​​ನನ್ನು ವಿನೋದ್​ ಎಂಬಾತ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನಡೆದಿದ್ದೇನು: ತಿಲಕ್​ ನಗರದ ಬಿಟಿಪಿ ಪ್ರದೇಶದಲ್ಲಿ ಊರ ಹಬ್ಬ ನಡೆಯುತ್ತಿತ್ತು. ಈ ವೇಳೆ ವಿನೋದ್​ ಹಬ್ಬದ ಮುಂದಾಳತ್ವ ವಹಿಸಿಕೊಂಡಿದ್ದ. ಈ ವೇಳೆ ರಾಜಶೇಖರ್ ಹಾಗೂ ಆತನ ಸ್ನೇಹಿತರು ಏನ್ ಸಮಾಚಾರ ಎಂದು ವಿನೋದ್​ನನ್ನ ಕೆಣಕಿದ್ದರು ಎನ್ನಲಾಗ್ತಿದೆ. ಇದರಿಂದ ಕೆರಳಿದ ವಿನೋದ್ ತನ್ನ ಸಹೋದರನಿಗೆ ಈ ವಿಚಾರ ತಿಳಿಸಿದ್ದ. ನಂತರ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ವಿನೋದ್ ಹಾಗೂ ರಾಜಶೇಖರ್​ ಜಗಳವಾಡಿದ್ದರು. ಈ ವೇಳೆ ರಾಜಶೇಖರ್​ಗೆ ವಿನೋದ್ ಚಾಕುವಿನಿಂದ ಇರಿದಿದ್ದನಂತೆ. ತಕ್ಷಣ ರಾಜಶೇಖರ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಈ ಸಂಬಂಧ ತಿಲಕ್​ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ‌ಮರೆಸಿಕೊಂಡಿರುವ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.

Intro:ಏನ್ ಸಮಾಚರ ಎಂದು ಮೂರು ಸ್ನೇಹಿತರು ಜೊತೆ ಸೇರಿ‌‌ಕೆಣಕ್ಕಿದ್ರು.
ಕೆಣಕಿದವ ಕೊನೆಗೆ ಹೆಣವಾದ

ಭವ್ಯ

ಬೆಂಗಳೂರಿನಲ್ಲಿ ತಡ ರಾತ್ರಿ ವ್ಯಕ್ತಿಯೊರ್ವನ ಬರ್ಬರ ಹತ್ಯೆ ಮಾಡಿರುವ ಘಟನೆ ತಿಲಕ್ ನಗರದ ಬಿಟಿಪಿ ಲೇಔಟ್ನಲ್ಲಿ ನಡೆದಿದೆ..
ರಾಜಶೇಖರ್ ಮೃತ ದುರ್ದೈವಿ. ನಿನ್ನೆ ರಾತ್ರಿ ರೌಡಿಶೀಟರ್ ‌ಅನ್ನ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ರು..

ತಿಲಕ್ನಗರದ ಬಿಟಿಪಿ ಪ್ರದೇಶದಲ್ಲಿ ಊರ ಹಬ್ಬ ನಡೆಯುತ್ತಿತ್ತು. ಈ ವೇಳೆ ಆರೋಪಿ ವಿನೋದ್ ಕರ್ ಹಬ್ಬದ ಮುಂದಾಳತ್ವ ವಹಿಸಿ ಓಡಾಡುತ್ತಿದ್ದ. ಇದನ್ನ ರಾಜಶೇಖರ್ ಹಾಗೂ ಆತನ ಸ್ನೇಹಿತರು ಪ್ರಶ್ನೇ ಮಾಡಿದ್ರು. ಏನ್ ಸಮಾಚರ ಎಂದು ಮೂರು ಸ್ನೇಹಿತರು ಜೊತೆ ಸೇರಿ‌‌ಕೆಣಕ್ಕಿದ್ರು.

ಇದರಿಂದ ವಿನೋದ್ ತನ್ನ ಸಹೋದರನಿಗೆ ವಿಚಾರ ತಿಳಿಸಿ ನಂತ್ರ ಎರಡು ಗ್ಯಾಂಗ್ ಜಗಳವಾಡಿ ಮಾತಿಗೆ ಮಾತು ಬೆಳೆದು ವಿನೋದ್ ಹಾಗೂ ರಾಜೇಶ್ ಜಗಳವಾಡಿದ್ದಾರೆ. ನಂತ್ರ ರಾಜೇಶ್ಗೆ ವಿನೋದ್ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ರಾಜೇಶ್ನನ್ನ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ರು ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಸಂಭಂದಿಸಿದಂತೆ ತಿಲಕ್ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆ‌ಮರೆಸಿಕೊಂಡಿರುವ ಆರೋಪಿಗೆ ತಿಲಕ್ನಗರ ಪೊಲೀಸರು ಬಲೆಬೀಸಿದ್ದಾರೆBody:KN_BNG_06_20_MURDER_BHAVYA_7204498Conclusion:KN_BNG_06_20_MURDER_BHAVYA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.