ಬೆಂಗಳೂರು: ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಯುವಕ-ಯುವತಿಯರಿಗೆ ಲಾಠಿ ಏಟು ಕೊಟ್ಟು ಓಡಿಸಿರುವ ಘಟನೆ ಸಹಕಾರ ನಗರದ ಜಿ.ಕೆ.ವಿ.ಕೆ ಬಳಿ ನಡೆದಿದೆ.
ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಗರೇಟ್, ಗಾಂಜಾ ಸೇವಿಸಿ ಪ್ರೇಮಿಗಳು ತಮ್ಮ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಅದು ಕೂಡ ಸಂಜೆಯಾಗುತ್ತಿದ್ದಂತೆ ಈ ಚಟುವಟಿಕೆ ಜಾಸ್ತಿಯಾಗುತ್ತಿತ್ತಂತೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದರು. ಸ್ಥಳೀಯರ ದೂರಿನನ್ವಯ ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾಠಿ ರುಚಿ ತೋರಿಸಿದ್ದಾರೆ.