ETV Bharat / state

ದಂತ ವೈದ್ಯೆ ಆತ್ಮಹತ್ಯೆ ಪ್ರಕರಣಕ್ಕೆ ತಿರುವು : ಪ್ರೇಮ ವೈಫಲ್ಯದಿಂದ ಸಾವಿಗೆ ಶರಣಾದ ಯುವತಿ - ವೈದ್ಯನ ಕಿರುಕುಳ ತಾಳದೆ ದಂತ ವೈದ್ಯೆ ಆತ್ಮಹತ್ಯೆ

ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ ವೈದ್ಯನ ಕಿರುಕುಳ ತಾಳದೆ ದಂತ ವೈದ್ಯೆ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ವೈದ್ಯೆಯೇ ತನ್ನ ಸಹೋದ್ಯೋಗಿ ವೈದ್ಯನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರೀತಿಸಲು ವೈದ್ಯ ಒಪ್ಪದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.

Bengaluru
ಬೆಂಗಳೂರು
author img

By

Published : Feb 2, 2023, 1:38 PM IST

Updated : Feb 2, 2023, 9:46 PM IST

ಬೆಂಗಳೂರು: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಯುವ ದಂತ ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಖನೌ ಮೂಲದ ಪ್ರಿಯಾಂನ್ಷಿ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ ಎಂದು ತಿಳಿದುಬಂದಿದೆ. ಯುವತಿಯು ಚಿಕ್ಕ ವಯಸ್ಸಿನಿಂದಲೂ ವೈದ್ಯೆ ಆಗಬೇಕೆಂಬ ಕನಸು ಕಂಡಿದ್ದಳು. ಅದರಂತೆ ಸಿಲಿಕಾನ್​ ಸಿಟಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಉತ್ತರ ಪ್ರದೇಶ ಲಖನೌ ಮೂಲದ ಪ್ರಿಯಾಂನ್ಷಿ ಕಾನ್ಪುರದಲ್ಲಿ ಬಿಡಿಎಸ್ ಕೋರ್ಸ್‌ ಮುಗಿಸಿ 2020ರಲ್ಲಿ ಬೆಂಗಳೂರಿಗೆ ಬಂದಿದ್ದಳು.

ಬೆಂಗಳೂರಿನ ಆರ್​​ಎಂವಿ ಲೇಔಟ್​​ನಲ್ಲಿ ವಾಸಿಸುತ್ತಿದ್ದ ಯುವತಿ, ಇಲ್ಲಿನ ಆಸ್ಪತ್ರೆಯೊಂದರಲ್ಲಿ ಇಂಟರ್ನ್​ಶಿಪ್ ಮುಗಿಸಿ, ಬಳಿಕ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿಯೇ ಪರಿಚಯವಾದ ವೈದ್ಯರೊಬ್ಬರ ಜೊತೆ ಯುವತಿಗೆ ಪ್ರೇಮಾಂಕುರವಾಗಿತ್ತು. ಆದರೆ, ಪ್ರಿಯಾಂನ್ಷಿಯ ಪ್ರೇಮ ನಿವೇದನೆಗೆ ವೈದ್ಯನ ಕಡೆಯಿಂದ ನಿರಾಕರಣೆ ವ್ಯಕ್ತವಾಗಿತ್ತು. ಇದರಿಂದಲೇ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ವೈದ್ಯೆ ತಂದೆಯಿಂದ ದೂರು: ಜನವರಿ 25ರಂದು ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ವೈದ್ಯೆ ಮೃತಪಟ್ಟ ಸುದ್ದಿ ಕೇಳಿ ಬೆಂಗಳೂರಿಗೆ ಬಂದ ತಂದೆ ತನ್ನ ಮಗಳ ಸಾವಿಗೆ ಮತ್ತೊರ್ವ ವೈದ್ಯನೇ ಕಾರಣ ಎಂದು ಆರೋಪಿಸಿ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಸ್ಪತ್ರೆಯ ವೈದ್ಯರೊಬ್ಬರು ತನ್ನನ್ನು ಪ್ರೀತಿಸುವಂತೆ ಅವಳಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಅಲ್ಲದೆ, ಹಲವು ಸಲ ನಿರಾಕರಿಸಿದರೂ ಮದುವೆಯಾಗುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ಮುಂದುವರೆಸಿದ್ದ. ಜೊತೆಗೆ ಆಕೆಯ ಬಗ್ಗೆ ಆಸ್ಪತ್ರೆಯಲ್ಲಿ ಅಪಪ್ರಚಾರ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದರು.

ತನಿಖೆ ಬಳಿಕ ಪ್ರಕರಣಕ್ಕೆ ತಿರುವು : ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಬೇರೆಯದೇ ಆಯಾಮ‌ ಸಿಕ್ಕಿದೆ. ವೈದ್ಯೆ ಪ್ರಿಯಾಂನ್ಷಿಯ ತಂದೆ ಆರೋಪ ಹೊರಿಸಿದ್ದ ವೈದ್ಯನಿಗೆ ಆಕೆಯೇ ಪ್ರೇಮ ನಿವೇದನೆ ಮಾಡಿದ್ದಳು. ಬಳಿಕ ಆತನಿಗೆ ಆಕೆ ಮದುವೆಯಾಗುವಂತೆಯೂ ಕೇಳಿಕೊಂಡಿದ್ದಳು. ಆದರೆ ಆತ ನಿರಾಕರಿಸಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸಂಗತಿ ಕೇಳಿ ಬಂದಿದೆ.

ಸದ್ಯ ಪೊಲೀಸರು ಹೇಳುವ ಪ್ರಕರಣ ಮಗಳ ಸಾವಿನ ತನಿಖೆ ವೇಳೆ ಬಯಲಾದ ಸಂಗತಿಗಳ ಬಗ್ಗೆ ಆಕೆಯ ಪೊಷಕರಿಗೆ ತಿಳಿಸಿದ್ದರಂತೆ. ಈ ವೇಳೆ ಪೋಷಕರು ವೈದ್ಯನ ವಿರುದ್ಧ ದಾಖಲಿಸಿದ್ದ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದರಂತೆ. ಆದರೆ, ಅದಾಗಲೇ ಎಫ್​ಐಆರ್ ದಾಖಲಾಗಿರುವುದರಿಂದ ಅದರ ಪ್ರಕಾರ ತನಿಖೆ ನಡೆಸಲಾಗುವುದು ಎಂದು ಪೋಷಕರಿಗೆ ಸಂಜಯ್ ನಗರ ಪೊಲೀಸರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಲೇವಾದೇವಿದಾರರ ಕಿರುಕುಳ: ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಚಲಿಸುತ್ತಿದ್ದ ಲಾರಿ ಹಿಂಬದಿ ಚಕ್ರದ ಕೆಳಕ್ಕೆ ಹಾರಿ ಯುವಕ ಆತ್ಮಹತ್ಯೆ- ಆನೇಕಲ್​: ಬಿಹಾರ ಮೂಲದ 30 ವರ್ಷದ ಕಾರ್ಮಿಕ ಆನೇಕಲ್ ಕಡೆಯಿಂದ ಚಂದಾಪುರದ ಕಡೆಗೆ ಚಲಿಸುತ್ತಿದ್ದ ಲಾರಿ ಕೆಳಕ್ಕೆ ಏಕಾಏಕಿ ಹಾರಿ ಸಾವನ್ನಪ್ಪಿದ್ದಾನೆ.

ಆನೇಕಲ್ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಪ್ರಯಾಣಿಕರ ಜೊತೆ ನಿಂತಿದ್ದ ಸಂದರ್ಭದಲ್ಲಿ ಚಲಿಸುತ್ತಿದ್ದ ಲಾರಿ ಹಿಂಬದಿ ಚಕ್ರದ ಕೆಳಕ್ಕೆ ಹಾರಿದ್ದಾನೆ. ಲಾರಿಯ ಹಿಂಬದಿಯ ಎರಡು ಗಾಲಿ ಯುವಕನ ಮೇಲೆ ಚಲಿಸಿದೆ. ಅದೇ ವೇಳೆ ಅಲ್ಲಿದ್ದ ಜನ ಕಿರುಚಿದ್ದು, ಆ ಬೊಬ್ಬೆಗೆ ಚಾಲಕ ಏಕಾಏಕಿ ಲಾರಿ ನಿಲ್ಲಿಸಿದ್ದಾನೆ. ಅಷ್ಟರಲ್ಲಿ ಚಕ್ರದ ಕೆಳಗೆ ಸಿಲುಕಿ ಭುಜದ ಮೇಲೆ ಹರಿದ ಲಾರಿಯ ಬಾರಕ್ಕೆ ಚಕ್ರದ ಕೆಳಗಡೆಯೇ, ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.

ಇದೇ ಯುವಕ ಮೊದಲು ಇದೇ ವೃತ್ತದಲ್ಲಿ ಚಲಿಸುತ್ತಿದ್ದ ಕಾರಿನ ಕೆಳಕ್ಕೆ ಹಾರಲು ವಿಫಲ ಯತ್ನ ನಡೆಸಿದ್ದು, ಸಾರ್ವಜನಿಕರ ಕೈಯಿಂದ ಬೈಸಿಕೊಂಡಿದ್ದನು. ಅನಂತರವೇ ಲಾರಿ ಕೆಳಗಡೆಗೆ ಹೊಂಚು ಹಾಕಿ‌ ನುಗ್ಗಿದ್ದ ಎಂದು ಬಸ್ ನಿಲ್ದಾಣದಲ್ಲಿದ್ದ ಹೆಸರೇಳಲಿಚ್ಚಿಸದ ವ್ಯಕ್ತಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ಕಳ್ಳ ಅಂತ ಇದೇ ಯುವಕನನ್ನು ಚೂಡೇನಹಳ್ಳಿ ಗ್ರಾಮಸ್ಥರು ಹೊಡೆದು ಪೊಲೀಸರಿಗೊಪ್ಪಿಸಿದ್ದರು. ಅನಂತರ ಯುವಕನ ಅಮಾಯಕ ಸ್ಥಿತಿ ಕಂಡು ಪೊಲೀಸರು ಬಿಟ್ಟು ಕಳುಹಿಸಿದ್ದರು. ಬೆಳಗ್ಗೆಯೂ ಆನೇಕಲ್ ಪಟ್ಟಣದಲ್ಲಿ ಸಾರ್ವಜನಿಕರು ಯುವಕನನ್ನು ಅಟ್ಟಾಡಿಸಿದ್ದರು.

ಲಾರಿಯ ಚಕ್ರದ ಅಡಿಯಿಂದ ಯುವಕನ ಮೃತದೇಹ ಹೊರತೆಗೆಯಲು ಆನೇಕಲ್ ಪೊಲೀಸರು ಹರಸಾಹಸ ಪಟ್ಟಿದ್ದರು. ವ್ಯಕ್ತಿಯ ಭುಜದ ಮೇಲೆ ಹರಿದಿರುವ ಚಕ್ರ ಹಿಂದಕ್ಕೆ‌ ಮುಂದಕ್ಕೆ ಸರಿಸಲಾಗದ ಸ್ಥಿತಿಯಲ್ಲಿ ಇತ್ತು. ಕೊನೆಗೆ ಲಾರಿಯನ್ನು ಕ್ರೈನ್‌ ಮೂಲಕ ಸರಿಸಿ ಯುವಕನ ಮೃತದೇಹವನ್ನು ಹೊರತೆಗೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಯಾರು, ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ತಿಳಿದುಬಳದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Last Updated : Feb 2, 2023, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.