ETV Bharat / state

ಈ ಬಸ್​ಸ್ಟಾಪ್​ಗೆ ತೆಂಗಿನ ನಾರೇ ಶ್ರೀರಕ್ಷೆ... ಬೆಂಕಿಗೆ ಸುಡಲ್ಲ, ಮಳೆಗೆ ನೆನೆಯಲ್ಲ

ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿಭಾಗದ ವಿದ್ಯಾರ್ಥಿಗಳು ಸೇರಿಕೊಂಡು ಒಂದು ಅದ್ಭುತ ಬಸ್​ ನಿಲ್ದಾಣ ನಿರ್ಮಿಸಿದ್ದಾರೆ. ಅದರ ವಿಶೇಷತೆ ಏನು, ಹೇಗೆ ನಿರ್ಮಿಸಿದರು, ಅದರಿಂದಾಗುವ ಲಾಭ ಏನು ಅನ್ನೋದ ಬಗ್ಗೆ ತಿಳಿದುಕೊಳ್ಳಬೇಕೆ?

author img

By

Published : Jun 20, 2019, 1:43 PM IST

ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿದ್ಯಾರ್ಥಿಗಳಿಂದ ತಯಾರಾದ ಬಸ್​ ನಿಲ್ದಾಣ

ಬೆಂಗಳೂರು: ಸಾಮಾನ್ಯವಾಗಿ ಬಸ್​ ನಿಲ್ದಾಣದ ಮೇಲ್ಛಾವಣಿ ನಿರ್ಮಿಸಲು ಏನನ್ನು ಬಳಸಬಹುದು? ತಗಡು, ಕಾಂಕ್ರೀಟ್, ಪ್ಲಾಸ್ಟಿಕ್ ಹೊದಿಕೆ ಇವುಗಳನ್ನು ಉಪಯೋಗಿಸುವುದನ್ನ ನೋಡಿದ್ದೀರಿ. ಆದರೆ, ರಾಜನಕುಂಟೆಯ ಕಾಕೋಳು ರಸ್ತೆಯಲ್ಲಿ ತೆಂಗಿನ ನಾರು ಬಳಸಿ ಬಸ್​ ನಿಲ್ದಾಣದ ಮೇಲ್ಛಾವಣಿ ನಿರ್ಮಾಣ ಮಾಡಿದ್ದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ರಾಜಾನುಕುಂಟೆಯ ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿಭಾಗದ ವಿದ್ಯಾರ್ಥಿಗಳು ತೆಂಗಿನ ನಾರು ಬಳಸಿ ಪರಿಸರ ಸ್ನೇಹಿ ಬಸ್​ ತಂಗುದಾಣ ನಿರ್ಮಿಸಿದ್ದಾರೆ. ಎರಡು ಕಡೆ ರೈಲ್ವೆ ಕಂಬಿ ಬಳಸಿ, ಮೇಲಿನ ಛಾವಣಿಯ ಎರಡು ಬದಿಗಳಿಗೆ ತೆಂಗಿನ ನಾರಿನಿಂದ ಲೇಪನ ಮಾಡಿದ ಫ್ಲೈವುಡ್​ ಶೀಟ್ ಬಳಸಿದ್ದಾರೆ. ಇದು ಮಳೆ ಬಿಸಿಲಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಮಳೆ ನೀರು, ಹಾಗೂ ಬೆಂಕಿ ತಾಗದಂತೆ ಅಂಟಿನ ಲೇಪನ ಮಾಡಿದ್ದಾರೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿದ್ಯಾರ್ಥಿಗಳಿಂದ ತಯಾರಾದ ಬಸ್​ ನಿಲ್ದಾಣ
ಆಲೋಚನೆ ಬಂದದ್ದು ಹೇಗೆ?
ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೊನೆಯ ಸೆಮಿಸ್ಟರ್​ನಲ್ಲಿ ಏನಾದರೊಂದು ಆವಿಷ್ಕಾರ ಮಾಡಬೇಕು. ಈ ಪ್ರಯತ್ನದಲ್ಲಿದ್ದಾಗ ವಿದ್ಯಾರ್ಥಿಗಳ ತಂಡಕ್ಕೆ ಹೊಳದಿದ್ದೆ ಈ ಪರಿಸರ ಸ್ನೇಹಿ ಬಸ್ ನಿಲ್ದಾಣ.
ಈ ಆಲೋಚನೆ ವಿದ್ಯಾರ್ಥಿಗಳ ತಲೆಗೆ ಹೊಳೆದಿದ್ದೆ ತಡ, ನೇರವಾಗಿ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಬಳಿ ಹೇಳಿಕೊಂಡಿದ್ದಾರೆ. ನಂತರ, ಪ್ರಾಂಶುಪಾಲ ರಮೇಶ್ ಬಾಬು ವಿಭಾಗದ ಮುಖ್ಯಸ್ಥೆ ಸೀತಾ ಹಾಗೂ ಶ್ರೀಕಾಂತ್ ಹಾಗೂ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಅವರ ಸಲಹೆಯಂತೆ ಬಸ್ ನಿರ್ಮಾಣದ ವಿನ್ಯಾಸ ಸಿದ್ಧಗೊಳಿಸಿದ್ದಾರೆ.
12 ಸಾವಿರ ರೂ ಖರ್ಚು
ನಾವು ತಯಾರಿಸುವ ಕೆಲಸ ನಮ್ಮ ತರಗತಿಯ ಪ್ರಾಜೆಕ್ಟ್​ಗೆ ಸೀಮಿತವಾಗಬಾರದು. ಬದಲಾಗಿ ಸಮಾಜಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಬಸ್​ ನಿಲ್ದಾಣ ಮಾಡಲು ತೀರ್ಮಾನಿಸಿದೆವು.
ಅದಕ್ಕೆ ಅಗತ್ಯವಿರುವ ತೆಂಗಿನ ನಾರು ಲೇಪಿತ ಫ್ಲೈವುಡ್ ಶೀಟ್ ತಯಾರಿಸಲು ಚನ್ನಪಟ್ಟಣ ಬಳಿ ಇರುವ ತೆಂಗಿನ ನಾರು ಸಹಕಾರ ಮಂಡಳಿ ಸಹಕಾರದೊಂದಿಗೆ 4x6 ಅಡಿ ವಿಸ್ತೀರ್ಣದ ತೆಂಗಿನನಾರು ಲೇಪಿತ ಫ್ಲೈವುಡ್ ಶೀಟ್ ತಯಾರಿಸಿಕೊಂಡು ಬಂದೆವು.
ಹಾಗೆ, ರೈಲ್ವೆ ಇಲಾಖೆಯಿಂದ ಕಬ್ಬಿಣದ ಸರಳುಗಳನ್ನು ಪಡೆದುಕೊಂಡು, ಸಮಾಜಕ್ಕೆ ಅನುಕೂಲವಾಗುವಂತೆ ಕೇವಲ ಕೇವಲ 12 ಸಾವಿರ ರೂ.ನಲ್ಲಿ 10 ಅಡಿ ಎತ್ತರ 12 ಅಡಿ ಅಗಲ ವಿಸ್ತೀರ್ಣದ ಪರಿಸರ ಸ್ನೇಹಿ ನಿಲ್ದಾಣ ನಿರ್ಮಿಸಿದ್ದೇವೆ ಎನ್ನುತ್ತಾರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು.
ಏನೇ ಹೇಳಿ ಕೊನೆಯ ಸೆಮಿಸ್ಟರ್​ ಪ್ರಾಜೆಕ್ಟ್​ ಅಂದ್ರೆ ಏನೋ ಒಂದು ಮಾಡಿ ಮುಗಿಸೋಣ ಎನ್ನುವ ಮನಸ್ಥಿತಿಗಳ ನಡುವೆ ಸಮಾಜಕ್ಕೆ ಕೊಡುಗೆ ಕೊಡಬೇಕು ಎನ್ನುವ ಈ ಹುಡುಗರ ಕಾಳಜಿ ಮೆಚ್ಚಲೇಬೇಕು.

Intro:ಸಂಜಯ್ ನಾಗ್ , ಬೆಂಗಳೂರು KA10014

(ಪ್ಯಾಕೆಜ್)

ಬೆಂಕಿಗೆ ಬಿದ್ದರೆ ಸುಡಲ್ಲ, ಮಳೆಗೆ ನೆನೆಯಲ್ಲವಂತೆ ಈ ಬಸ್ ನಿಲ್ದಾಣ:
ತೆಂಗಿನ ನಾರಿನ ಮೇಲ್ಚಾವಣಿಯೇ ಇದಕ್ಕೆ ಶ್ರೀರಕ್ಷೆ..!!

ಬೆಂಗಳೂರು: ಸಾಮಾನ್ಯವಾಗಿ ಬಸ್ ನಿಲ್ದಾಣದ ಮೇಲ್ಚಾವಣಿ ನಿರ್ಮಿಸಲು ಏನನ್ನು ಬಳಸಬಹುದು? ಕಬ್ಬಿಣದ ತಗಡು, ಸಿಮೆಂಟ್ ಕಬ್ಬಿಣದ ಕಾಂಕ್ರೀಟ್, ಪ್ಲಾಸ್ಟಿಕ್ ಹೊದಿಕೆ ಇವುಗಳನ್ನು ಉಪಯೋಗಿಸಿ ಬಸ್ ನಿಲ್ದಾಣದ ಮೇಲ್ಚಾವಣಿ ನಿರ್ಮಿಸುತ್ತಾರೆ. ಆದರೆ, ರಾಜಾನುಕುಂಟೆಯ ಕಾಕೋಳು ರಸ್ತೆಯಲ್ಲಿ ತೆಂಗಿನ ನಾರು ಬಳಸಿ ಬಸ್ ನಿಲ್ದಾಣದ ಮೇಲ್ಚಾವಣಿ ನಿರ್ಮಾಣ ಮಾಡಿದ್ದಾರೆ.

ಹೌದು, ರಾಜಾನುಕುಂಟೆಯ ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ತೆಂಗಿನ ನಾರು ಬಳಸಿ ಪರಿಸರ ಸ್ನೇಹಿ ಬಸ್ ತಂಗುದಾಣ ನಿರ್ಮಿಸಿದ್ದಾರೆ. ಎರಡು ಕಡೆ ರೈಲ್ವೆ ಕಂಬಿ ಬಳಸಿ, ಮೇಲಿನ ಚಾವಣಿಯ ಎರಡು ಬದಿಗಳಿಗೆ ತೆಂಗಿನ ನಾರಿನಿಂದ ಲೇಪನ ಮಾಡಿದ ಪ್ಲೈವುಡ್ ಶೀಟ್ ಬಳಸಿದ್ದಾರೆ. ಇದು ಮಳೆ ಬಿಸಿಲಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಮಳೆ ನೀರು, ಹಾಗೂ ಬೆಂಕಿ ತಾಗದಂತೆ ಅಂಟಿನ ಲೇಪನ ಮಾಡಿದ್ದಾರೆ.

ಆಲೋಚನೆ ಬಂದದ್ದು ಹೇಗೆ? : ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೊನೆಯ ಸೆಮಿಸ್ಟರ್ ನಲ್ಲಿ ಏನಾದರೊಂದು ವಿಶೇಷತೆ ಹೊಂದಿರುವ ಹೊಸ ಆವಿಷ್ಕಾರ ತಯಾರಿಸುತ್ತಾರೆ. ಆಗ ಈ ವಿದ್ಯಾರ್ಥಿಗಳ ತಂಡಕ್ಕೆ ಹೊಳದಿದ್ದೆ ಈ ಪರಿಸರ ಸ್ನೇಹಿ ಬಸ್ ನಿಲ್ದಾಣ. ಈ ಆಲೋಚನೆ ವಿದ್ಯಾರ್ಥಿಗಳ ತಲೆಗೆ ಹೊಳೆದಿದ್ದೆ ತಡ, ನೇರವಾಗಿ ಮೆಕಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಬಳಿ ಹೇಳಿಕೊಂಡಿದ್ದಾರೆ. ನಂತರ, ಪ್ರಾಂಶುಪಾಲ ರಮೇಶ್ ಬಾಬು ವಿಭಾಗದ ಮುಖ್ಯಸ್ಥೆ ಸೀತಾ ಹಾಗೂ ಶ್ರೀಕಾಂತ್ ಹಾಗೂ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಅವರ ಸಲಹೆಯಂತೆ ಬಸ್ ನಿರ್ಮಾಣದ ವಿನ್ಯಾಸ ಸಿದ್ದಗೊಳಿಸಿದ್ದಾರೆ.

Body:ಸಮಾಜಕ್ಕೆ ಅನುಕೂಲವಾಗಬೇಕು: ನಾವು ತಯಾರಿಸುವ ಕೆಲಸ ನಮ್ಮ ತರಗತಿಯ ಪ್ರಾಜೆಕ್ಟ್ ಗೆ ಸೀಮಿತವಾಗಬಾರದು ಬದಲಾಗಿ ಸಮಾಜಕ್ಕೆ ಅನುಕೂಲವಾಗಬೇಕು ಉದ್ದೇಶದಿಂದ
ಬಸ್ ನಿಲ್ದಾಣ ಮಾಡಲು ತೀರ್ಮಾನಿಸಿ, ಅದಕ್ಕೆ ಅಗತ್ಯವಿರುವ ತೆಂಗಿನ ನಾರು ಲೇಪಿತ ಫ್ಲೈವುಡ್ ಶೀಟ್ ತಯಾರಿಸಲು ಚನ್ನಪಟ್ಟಣ ಬಳಿ ಇರುವ ತೆಂಗಿನನಾರು ಸಹಕಾರ ಮಂಡಳಿ ಸಹಕಾರದೊಂದಿಗೆ 4x6 ಅಡಿ ವಿಸ್ತೀರ್ಣದ ತೆಂಗಿನನಾರು ಲೇಪಿತ ಫ್ಲೈವುಡ್ ಶೀಟ್ ತಯಾರಿಸಿಕೊಂಡು, ರೈಲ್ವೆ ಇಲಾಖೆಯಿಂದ ಕಬ್ಬಿಣದ ಸರಳುಗಳನ್ನು ಪಡೆದುಕೊಂಡು, ಸಮಾಜಕ್ಕೆ ಅನುಕೂಲವಾಗುವಂತೆ ಕೇವಲ ಕೇವಲ 12 ಸಾವಿರ ರೂ.ನಲ್ಲಿ 10ಅಡಿ ಎತ್ತರ 12 ಅಡಿ ಅಗಲ ವಿಸ್ತೀರ್ಣದ ಪರಿಸರ ಸ್ನೇಹಿ ನಿಲ್ದಾಣ ನಿರ್ಮಿಸಿದ್ದಾರೆ.

Conclusion:ಪ್ರಾಯೋಗಿಕವಾಗಿ ಮೊದಲ ಪ್ರಯತ್ನ: ತೆಂಗಿನ ನಾರಿನ ಕೋಟಿಂಗ್ ಫ್ಲೈವುಡ್ ಬಳಸಿ ಪ್ರಾಯೋಗಿಕವಾಗಿ ಕಾಲೇಜಿನ ಪಕ್ಕದಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದೇವೆ. ನಮಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ 7500 ರೂಪಾಯಿಯನ್ನು ಪ್ರೋತ್ಸಾಹಧನವಾಗಿ ನೀಡಿದ್ದಾರೆ. ಒಟ್ಟಾರೆಯಾಗಿ, ಬಸ್ ನಿಲ್ದಾಣ ನಿರ್ಮಿಸಲು 12 ಸಾವಿರ ರೂಪಾಯಿ ಖರ್ಚಾಗಿದೆ. ನಮ್ಮ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಮನೋಜ್, ಪವನ್, ಹರ್ಷ, ಸುರೇಶ್ ಅವರ ಪರಿಶ್ರಮದಿಂದ 2ತಿಂಗಳಲ್ಲಿ ನಿಲ್ದಾಣನಿರ್ಮಿಸಿದ್ದೇವೆ. ಇದಕ್ಕೆ ಎಸ್.ವಿ.ಐ.ಟಿ ನಿಲ್ದಾಣ ಎಂದು ಹೆಸರಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ದಾನಿಗಳಿಂದ ಅಗತ್ಯ ಸಹಕಾರ ಸಿಕ್ಕರೆ, ಪೂರ್ಣಪ್ರಮಾಣದ ತೆಂಗಿನ ನಾರಿನ ಬಸ್ ನಿಲ್ದಾಣ ನಿರ್ಮಿಸುತ್ತೇವೆ ಎನ್ನುತ್ತಾರೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ.
__________
ಬೈಟ್: ರಾಘವೇಂದ್ರ, ಸಹಾಯಕ ಪ್ರಾಧ್ಯಾಪಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.