ETV Bharat / state

ಬೆಂಗಳೂರಲ್ಲಿ ಕೇಳಿದ ನಿಗೂಢ ಶಬ್ದ... ಜನ ಏನಂತಾರೆ?

author img

By

Published : May 20, 2020, 5:25 PM IST

ಬೆಂಗಳೂರು ನಗರದ ಹಲವೆಡೆ ಸ್ಫೋಟಕ ಸಿಡಿದ ರೀತಿಯಲ್ಲಿ ಭಯಾನಕ ಶಬ್ದವೊಂದು ಕೇಳಿಸಿದ್ದು, ಸಿಲಿಕಾನ್​ ಸಿಟಿ ಜನ ಬೆಚ್ಚಿಬಿದ್ದಿದ್ದಾರೆ.

a bomb blast like sound in bengaluru city
ಕೆ.ಆರ್. ಪುರಂ ಭಾಗದಲ್ಲಿ ನಿಗೂಢ ಶಬ್ಧ

ಬೆಂಗಳೂರು: ನಗರದ ಕೆ.ಆರ್.ಪುರಂ, ಮಾರತ್​ಹಳ್ಳಿ ಹೆಚ್ಎಎಲ್, ವೈಟ್​ ​ಫೀಲ್ಡ್, ಟಿನ್ ಫ್ಯಾಕ್ಟರಿ ಸೇರಿದಂತೆ ಅನೇಕ ಕಡೆ ಸ್ಫೋಟಕ ಸಿಡಿದ ರೀತಿಯಲ್ಲಿ ಭಯಾನಕ ಶಬ್ದ ಕೇಳಿ ಬಂದಿದೆ. ಈ ಶಬ್ದ ಕೇಳಿ ಬೆಚ್ಚಿದ ಅನೇಕ ಜನರು, ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಕೆ.ಆರ್.ಪುರಂ ಭಾಗದಲ್ಲಿ ನಿಗೂಢ ಶಬ್ಧ

ಸ್ಫೋಟದಂತಹ ಸದ್ದಿಗೆ ಕೆಲ ಕಾಲ ಭೂಮಿ ಕಂಪಿಸಿದ ಅನುಭವ ಕೂಡ ಜನರಿಗೆ ಆಗಿರುವುದಾಗಿ ತಿಳಿದು ಬಂದಿದೆ. ಅನುಮಾನಾಸ್ಪದ ಶಬ್ದ ಕೇಳಿಸಿಕೊಂಡ ನಾಗರಿಕರು ಭಯಭೀತರಾಗಿದ್ದಾರೆ. ಮಧ್ಯಾಹ್ನ 1.20ರ ಸುಮಾರಿಗೆ ನಿಗೂಢ ಶಬ್ದ ಕೇಳಿ ಬಂದಿದೆ. ಹಲವು ಕಡೆ ಮನೆಯ ಕಿಟಕಿ ಬಾಗಿಲು ಅಲುಗಾಡಿದ ಅನುಭವ ಆಗಿದೆ.

ಶಬ್ಧ ಕೇಳಿಸಿಕೊಂಡ ಕೆಲವು ಜನ ತಮ್ಮ ಅನುಭವ ಹಂಚಿಕೊಂಡಿದ್ದು, ನಾವು ಮನೆಯಲ್ಲಿದ್ವಿ. ವಿಚಿತ್ರವಾದಂತಹ ದೊಡ್ಡ ಶಬ್ಧ ಆಯ್ತು. ನಾವು ಬಾಂಬ್ ಬ್ಲಾಸ್ಟ್ ಆಗಿರಬಹುದೇನೋ ಎಂದುಕೊಂಡಿದ್ವಿ. ಆದ್ರೆ ಆ ಸೌಂಡ್ ಯಾವ್ದು ಅಂತ ಗೊತ್ತಿಲ್ಲ. ಆದ್ರೆ ಈ ತರಹದ ಶಬ್ಧ ನಾವು ಕೇಳಿರಲಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.