ದೇವನಹಳ್ಳಿ(ಬೆಂಗಳೂರು): ಮುಂದೆ ಬರುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು ನಂತರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಬಳಿ ನಡೆದಿದೆ.
ಚಿಂತಾಮಣಿ ಮೂಲದ ಕಿರಣ್ (20) ಮೃತಪಟ್ಟ ದುರ್ದೈವಿ. ಅಂದ ಹಾಗೆ ಹೊಸಕೋಟೆ ಕಡೆಯಿಂದ ಚಿಂತಾಮಣಿ ಕಡೆಗೆ ಬೈಕ್ ಸವಾರ ತೆರಳುತ್ತಿದ್ದ ಎನ್ನಲಾಗಿದೆ. ಈ ವೇಳೆ ಮುಂದೆ ಎರಡು ಬೈಕ್ಗಳಿಗೆ ಅತಿ ವೇಗದಿಂದ ಡಿಕ್ಕಿ ಹೊಡೆದ ಬೈಕ್, ನಂತರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.
ಜತೆಗೆ ಇನ್ನೆರಡು ಬೈಕ್ಗಳ ಸವಾರರು ರಸ್ತೆಯಲ್ಲಿ ಬಿದ್ದು, ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರು ಸವಾರರನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಸವಾರನ ಕಾಲು ಕೈ ಕಟ್ ಆಗಿದೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ದೊಡ್ಡಬಳ್ಳಾಪುರ: ಹಳಿಗಳ ಮೇಲೆ ಸೈಜ್ ಕಲ್ಲು, ರೈಲಿನ ಮುಂಭಾಗಕ್ಕೆ ಹಾನಿ