ETV Bharat / state

ಹೆಡ್ ಕಾನ್ಸ್‌ಟೇಬಲ್​ಗೆ ಒಕ್ಕರಿಸಿದ ಕೊರೊನಾ: ಸಾರ್ವಜನಿಕರ ಠಾಣೆ ಪ್ರವೇಶಕ್ಕೆ ನಿರ್ಬಂಧ - ಪಾದರಾಯನಪುರ ವಾರ್ಡ್​ ಪಕ್ಕ ಇರುವ ಠಾಣೆ

ಉಳಿದವರು ಕೂಡಾ ಕೊರೊನಾ ಟೆಸ್ಟ್​ಗೆ ಒಳಗಾಗಿದ್ದು, ತಮಗೂ ಕೊರೊನಾ ಸೋಂಕಿನ ಲಕ್ಷಣಗಳು ಇದೆಯೇ ಅನ್ನೋ ಭಯದಲ್ಲಿದ್ದಾರೆ. ಹೀಗಾಗಿ ಜೆ.ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಪ್ರವೇಶವನ್ನ ತಾತ್ಕಲಿಕವಾಗಿ ನಿರ್ಬಂಧಿಸಿದ್ದು, ಒಂದು ವೇಳೆ, ತುರ್ತು ಸಂದರ್ಭ ಇದ್ದರೆ ನಮ್ಮ 100 ನಂಬರ್​​ ಗೆ ಕರೆ ಮಾಡಿ ತಿಳಿಸುವಂತೆ ಹೊಯ್ಸಳ ಮುಖಾಂತರ ಪೊಲೀಸರು ತಿಳಿಸಿದ್ದಾರೆ.

A 43-year-old head constable has a corona infection
ಜೆ.ಜೆ ನಗರ ಠಾಣೆ
author img

By

Published : Jun 3, 2020, 2:01 PM IST

ಬೆಂಗಳೂರು: ಜೆ.ಜೆ ನಗರ ಠಾಣೆಯ 43 ವರ್ಷದ ಹೆಡ್ ಕಾನ್ಸ್‌ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಕಾರಣ ಸದ್ಯ ಠಾಣೆಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಪಾದರಾಯನಪುರ ವಾರ್ಡ್​ ಪಕ್ಕ ಇರುವ ಠಾಣೆ ಇದಗಿದ್ದು, ದಿನಕ್ಕೆ ಎರಡು ಮೂರು ದೂರುಗಳು ಇಲ್ಲಿ ದಾಖಲಾಗುತ್ತಿದ್ದವು.

ಅಲ್ಲದೇ ಪಾದರಾಯನಪುರದ ಬಳಿ ಕೊರೊನಾ ವಾರಿಯರ್ ಮೇಲೆ ಹಲ್ಲೆ ನಡೆದಾಗ 126 ಮಂದಿಯನ್ನ ಬಂಧಿಸಿ ಎಫ್ ಐ ಆರ್ ದಾಖಲಿಸಿದ ಹೆಗ್ಗಳಿಕೆ ಈ ಠಾಣೆಗೆ ಇತ್ತು. ಸದ್ಯ ಕೊರೊನಾ ಮಹಾಮಾರಿ ಠಾಣೆಗೆ ಒಕ್ಕರಿಸಿದ ಕಾರಣ ಇಲ್ಲಿರುವ 70 - 80 ಸಿಬ್ಬಂದಿ ಪೈಕಿ ಕೊರೊನಾ ಸೋಂಕು ಬಂದಿರುವ 43 ವರ್ಷದ ಹೆಡ್ ಕಾನ್ಸ್‌ಟೇಬಲ್ ಸಂಪರ್ಕದಲ್ಲಿದ್ದ ಕಾರಣ ಇದೀಗ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಸಾರ್ವಜನಿಕರ ಠಾಣೆ ಪ್ರವೇಶಕ್ಕೆ ನಿರ್ಬಂಧ
ಉಳಿದವರು ಕೂಡಾ ಕೊರೊನಾ ಟೆಸ್ಟ್​ಗೆ ಒಳಗಾಗಿದ್ದು, ತಮಗೂ ಕೊರೊನಾ ಸೋಂಕಿನ ಲಕ್ಷಣಗಳು ಇದೆಯೇ ಅನ್ನೋ ಭಯದಲ್ಲಿದ್ದಾರೆ. ಹೀಗಾಗಿ ಜೆ.ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಪ್ರವೇಶವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದು, ಒಂದು ವೇಳೆ, ತುರ್ತು ಸಂದರ್ಭ ಇದ್ದರೆ, ನಮ್ಮ 100 ನಂಬರ್​​ ಗೆ ಕರೆ ಮಾಡಿ ತಿಳಿಸುವಂತೆ ಹೊಯ್ಸಳ ಮುಖಾಂತರ ಪೊಲೀಸರು ತಿಳಿಸಿದ್ದಾರೆ.
ಸದ್ಯ ಠಾಣೆಗೆ ಸ್ಯಾನಿಟೈಸ್ ಮಾಡಿದ್ದರೂ ಕೂಡಾ ಬೆರಳೆಣಿಕೆಯಷ್ಟು ಸಿಬ್ಬಂದಿಗಳು‌ ಮಾಸ್ಕ್ ಹಾಗೂ ಮುಂಜಾಗ್ರತೆ ವಹಿಸಿಕೊಂಡು ಠಾಣೆಯೆಡೆಗೆ ಬರ್ತಿದ್ದಾರೆ. ಮತ್ತೊಂದೆಡೆ ಡಿಸಿಪಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಕೂಡ ಅಭಯ ನೀಡಿದ್ದು , ಏನೇ ತೊಂದರೆಯಾದರೂ ಹೆದರಬೇಡಿ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.