ETV Bharat / state

ಕೆವೈಸಿ ಸೋಗಿನಲ್ಲಿ 9 ಲಕ್ಷ ರೂ. ವಂಚನೆ.. ಸಮಯಪ್ರಜ್ಞೆಯಿಂದ ಹಣ ಉಳಿಸಿದ ಕಾನ್​ಸ್ಟೇಬಲ್​ಗೆ ಸೆಲ್ಯೂಟ್​

author img

By

Published : Jul 20, 2022, 7:41 PM IST

ಕೆವೈಸಿ ಅಪ್​ಡೇಟ್ ಮಾಡುವ ಸೋಗಿನಲ್ಲಿ ದಾಖಲಾತಿ ಪಡೆದು ಆನ್​ಲೈನ್​ ವಂಚನೆ-ಸಮಯ ಪ್ರಜ್ಞೆ ಮೆರೆದ ಪೊಲೀಸ್​ ಕಾನ್​ಸ್ಟೇಬಲ್- ಗ್ರಾಹಕನ 9 ಲಕ್ಷ ರೂಪಾಯಿ ಹಣ ಸುರಕ್ಷಿತ

ಸಮಯಪ್ರಜ್ಞೆ ತೋರಿದ ಕಾನ್​ಸ್ಟೇಬಲ್
ಸಮಯಪ್ರಜ್ಞೆ ತೋರಿದ ಕಾನ್​ಸ್ಟೇಬಲ್

ಬೆಂಗಳೂರು: ನಗರ ಆಗ್ನೇಯ ವಿಭಾಗದ ಸೆನ್‌ ಪೊಲೀಸ್ ಠಾಣೆ ಕಾನ್​ಸ್ಟೇಬಲ್​​ವೊಬ್ಬರ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ಅವರು ಕಳೆದುಕೊಂಡಿದ್ದ ಹಣ ಸುರಕ್ಷಿತವಾಗಿ ಅಕೌಂಟ್​ನಲ್ಲಿ ಉಳಿದಿದೆ. ಬ್ಯಾಂಕಿನಿಂದ ಸೈಬರ್ ಖದೀಮರು 9 ಲಕ್ಷ ರೂಪಾಯಿ ವಂಚಿಸಿದ್ದರು. ಕೆವೈಸಿ ಅಪ್​ಡೇಟ್ ಮಾಡುವುದಾಗಿ ಬ್ಯಾಂಕ್ ಹೆಸರೇಳಿಕೊಂಡು ಕರೆ ಮಾಡಿದ ಆನ್​ಲೈನ್ ವಂಚಕರು, ಎಲ್ಲಾ ದಾಖಲಾತಿಗಳನ್ನ ಫೋನ್​ನಲ್ಲಿ‌ ಪಡೆದುಕೊಂಡು ಕ್ಷಣಾರ್ಧದಲ್ಲಿ ಹಣವನ್ನು ಎಗರಿಸಿದ್ದರು.

ಸಮಯಪ್ರಜ್ಞೆ ತೋರಿದ ಕಾನ್​ಸ್ಟೇಬಲ್

ಹಣ ಕಳೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ‌ ದೂರುದಾರರು ಕೂಡಲೇ ಆಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.‌ ಈ ವೇಳೆ ರಜೆಯಿದ್ದರೂ ಅನ್ಯ ಕಾರ್ಯನಿಮಿತ್ತ ಠಾಣೆಗೆ ಬಂದಿದ್ದ ಕಾನ್​ಸ್ಟೇಬಲ್ ಆಶ್ತಪ್ ಸಾಬ್ ಪಿಂಜಾರ ಅವರು, ದೂರು ದಾಖಲಿಸಿಕೊಳ್ಳದೆ ಕೂಡಲೇ ಕೆನರಾ ಬ್ಯಾಂಕ್ ಮ್ಯಾನೇಜರ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ‌.‌‌ ರಾಜಸ್ಥಾನದಲ್ಲಿದ್ದ ಮ್ಯಾನೇಜರ್ ಕೂಡಲೇ ಕಾರ್ಯಪ್ರವೃತ್ತರಾಗಿ ಸೈಬರ್ ಖದೀಮರ ಬ್ಯಾಂಕ್ ಅಕೌಂಟ್ ಖಾತೆಯನ್ನ ಫ್ರೀಜ್ ಮಾಡಿದ್ದಾರೆ. ಈ ಮೂಲಕ‌ ಅಕೌಂಟ್​ನಲ್ಲಿದ್ದ 9 ಲಕ್ಷ ಹಣವನ್ನ ದೂರುದಾರರಿಗೆ ವಾಪಸ್ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಂಚ ತಡವಾಗಿದ್ದರೂ ಹಣ ಸೈಬರ್ ಖದೀಮರ ಪಾಲಾಗುತಿತ್ತು. ಫ್ರೀಜ್ ಆದ ಹಣ ಖಾತೆಗೆ ರಿಟರ್ನ್ ಆದ ಹಿನ್ನೆಲೆ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆಗೆ ದೂರುದಾರರು ಧನ್ಯವಾದ ಹೇಳಿದ್ದಾರೆ. ಸಿಬ್ಬಂದಿ ತೋರಿದ ಸಮಯಪ್ರಜ್ಞೆಗೆ ಡಿಸಿಪಿ ಸಿ.ಕೆ. ಬಾಬಾ ಪ್ರಶಂಶೆ ವ್ಯಕ್ತಪಡಿಸಿದ್ದಾರೆ. ಯಾವುದೇ ಬ್ಯಾಂಕ್​ನವರು ಕರೆ ಮಾಡಿ ದಾಖಲೆ ಕೇಳುವುದಿಲ್ಲ. ಹಿರಿಯ ನಿವೃತ್ತಿ ಹೊಂದಿದ ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ ವಂಚಿಸುವ ಹೆಚ್ಚಾಗುತ್ತಿದೆ‌. ಈ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಡಿಸಿಪಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬೈಂದೂರು: ಚಾಕೊಲೇಟ್​ ಗಂಟಲಲ್ಲಿ ಸಿಲುಕಿ ಶಾಲಾ ಬಾಲಕಿ ಸಾವು

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.