ETV Bharat / state

ಬೆಂಗಳೂರಿನ 8 ವಲಯಗಳಿಗೆ ಹೆಚ್ಚುವರಿ ಉಪಪೊಲೀಸ್ ಆಯುಕ್ತರ ಹುದ್ದೆ ಅಗತ್ಯ: ಸರ್ಕಾರಕ್ಕೆ ಪ್ರಸ್ತಾವನೆ

ಜಿಲ್ಲಾ ಮಾದರಿಯಲ್ಲಿ ಬೆಂಗಳೂರಿನ ವಿಭಾಗಕ್ಕೊಂದರಂತೆ ಎಂಟು ವಲಯಗಳಿಗೆ 8 ಹೆಚ್ಚುವರಿ ಉಪಪೊಲೀಸ್ ಆಯುಕ್ತರ ಹುದ್ದೆ ಸೃಷ್ಟಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪೊಲೀಸ್ ಇಲಾಖೆ
ಪೊಲೀಸ್ ಇಲಾಖೆ
author img

By ETV Bharat Karnataka Team

Published : Dec 22, 2023, 10:32 PM IST

ಬೆಂಗಳೂರು: ನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 8 ಕಾನೂನು ಹಾಗೂ ಸುವ್ಯವಸ್ಥೆ ವಿಭಾಗಗಳಲ್ಲಿರುವ ಡಿಸಿಪಿಗಳ ಜೊತೆಗೆ ವಲಯಕ್ಕೊಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಹುದ್ದೆ ಸೃಷ್ಟಿಸುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ರಾಜ್ಯ ಪೊಲೀಸ್ ಇಲಾಖೆ ಪ್ರಸ್ತಾವ ಸಲ್ಲಿಸಿದೆ.

ರಾಜ್ಯದ ಆಯಾ ಜಿಲ್ಲೆಗಳಲ್ಲಿ ಎಸ್ಪಿ ಜೊತೆಗೆ ಹೆಚ್ಚುವರಿ ಉಪಪೊಲೀಸ್ ಆಯುಕ್ತರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಆಯಾ ವಿಭಾಗದಲ್ಲಿ ಡಿಸಿಪಿ ಮಾತ್ರವಿದ್ದು, ಹೆಚ್ಚುವರಿ ಉಪಪೊಲೀಸ್ ಆಯುಕ್ತರಿಲ್ಲ. ಹೀಗಾಗಿ ಅಪರಾಧ ಪ್ರಕರಣಕ್ಕೆ ನಿಯಂತ್ರಣ, ಬಂದೋಬಸ್ತ್ ಹಾಗೂ ತನಿಖಾ ಮೇಲ್ವಿಚಾರಣೆ ಸೇರಿದಂತೆ ಮುಂತಾದ ಆಡಳಿತ ವ್ಯವಸ್ಥೆಯನ್ನ ಪರಿಣಾಮಕಾರಿ ಜಾರಿ ತರಲು ಎಂಟು ವಲಯಗಳಲ್ಲಿ ಎಂಟು ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಹೊಸ ಹುದ್ದೆಗಳ ಅಗತ್ಯವಿದ್ದು, ಈ ಸಂಬಂಧ ಪೊಲೀಸ್ ಇಲಾಖೆಯಿಂದ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ನಗರದಲ್ಲಿ 1 ಕೋಟಿಗಿಂತ ಹೆಚ್ಚು ಜನರು ವಾಸವಾಗಿದ್ದಾರೆ. ಪ್ರತಿನಿತ್ಯ ನಗರದಲ್ಲಿ ನೂರಾರು ಪ್ರಕರಣ ದಾಖಲಾಗುತ್ತಿದೆ. ಪೊಲೀಸರು ಸಮಗ್ರ ತನಿಖೆ ನಡೆಸಿ ಸಕಾಲಕ್ಕೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಅದರೊಂದಿಗೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಗರದಲ್ಲಿ ನಡೆಯುವ ಪ್ರತಿಭಟನೆ-ಧರಣಿ ಹಾಗೂ ಸಭೆ-ಸಮಾರಂಭಗಳಿಗೆ ಪೊಲೀಸ್ ಬಂದೋಬಸ್ತ್ ನೀಡಬೇಕು. ನಗರಕ್ಕೆ ಬರುವ ವಿವಿಐಪಿಗಳಿಗೂ ಭದ್ರತೆ ಒದಗಿಸುವ ಜವಾಬ್ದಾರಿವಿದೆ. ಅಪರಾಧ ಪ್ರಕರಣ ಹತ್ತಿಕ್ಕಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಆಯಾ ವಿಭಾಗದ ಡಿಸಿಪಿಗಳಿಗೆ ಕಷ್ಟವಾಗುತ್ತಿದೆ. ಅಲ್ಲದೆ ಡಿಸಿಪಿ ಅನುಪಸ್ಥಿತಿಯಲ್ಲಿ ನಿಭಾಯಿಸಲು ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆ ಅಗತ್ಯವಾಗಿದ್ದು ಮಂಜೂರು ಮಾಡುವಂತೆ ಕೋರಲಾಗಿದೆ.

ಎಸಿಪಿ, ಪಿಐ, ಪಿಎಸ್ಐ ಹುದ್ದೆಗಳು ಮೇಲ್ದರ್ಜೆಗೆ: 8 ಕಾನೂನು ಸುವ್ಯವಸ್ಥೆ ವಿಭಾಗಗಳಿಗೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ಹುದ್ದೆಗಳನ್ನು ಹಾಲಿವಿರುವ ಎಸಿಪಿ ದರ್ಜೆ ಹುದ್ದೆಗಳನ್ನು ಮೇಲ್ದರ್ಜೆಗೇರಿಸಬೇಕು. ಎಸಿಪಿ ದರ್ಜೆಯ ಹುದ್ದೆಯನ್ನು ಹಾಲಿ ಇರುವ ಇನ್‌ಸ್ಪೆಕ್ಟರ್ ಹುದ್ದೆ ಮೇಲ್ದರ್ಜೆಗೆ ಹಾಗೂ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳನ್ನು ಇನ್ ಸ್ಪೆಕ್ಟರ್ ಹುದ್ದೆಗಳನ್ನು ಮೇಲ್ದರ್ಜೆಗೇರಿಸಿ ಸೃಜನೆ ಮಾಡುವ ಅಗತ್ಯವಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತರ ಮೇಲ್ದರ್ಜೆಗೇರಿಸಲು ನಗರದ ಎಂಟು ವಲಯಗಳಲ್ಲಿ ಬರುವ ಹಲಸೂರು ಉಪವಿಭಾಗ (ಪೂರ್ವ), ಉಪ್ಪಾರಪೇಟೆ ಉಪವಿಭಾಗ (ಪಶ್ಚಿಮ), ಯಶವಂತಪುರ ಉಪವಿಭಾಗ (ಉತ್ತರ), ಕಬ್ಬನ್ ಪಾರ್ಕ್ ಉಪವಿಭಾಗ (ಕೇಂದ್ರ), ಜಯನಗರ ಉಪವಿಭಾಗ (ದಕ್ಷಿಣ), ಎಸಿಪಿ ಮಡಿವಾಳ ಉಪವಿಭಾಗ ( ಆಗ್ನೇಯ) ಎಸಿಪಿ ಯಲಹಂಕ ಉಪವಿಭಾಗ (ಈಶಾನ್ಯ) ವೈಟ್ ಫೀಲ್ಡ್ ಉಪವಿಭಾಗದ ಎಸಿಪಿ ಹುದ್ದೆಗಳನ್ನು (ವೈಟ್ ಫೀಲ್ಡ್ ) ಮೇಲ್ದೆರ್ಜೆಗೇರಿಸಲು ತಿಳಿಸಲಾಗಿದೆ.

ಅದೇ ರೀತಿ ವಿಭಾಗ ವ್ಯಾಪ್ತಿಯ ಇನ್ ಸ್ಪೆಕ್ಟರ್ ಗಳನ್ನ ಎಸಿಪಿಗೆ ಹಾಗೂ ಸಬ್ ಇನ್ ಸ್ಪೆಕ್ಟರ್ ಗಳ ಹುದ್ದೆಯನ್ನು ಇನ್ ಸ್ಪೆಕ್ಟರ್ ಗಳ ಹುದ್ದೆಗಳಿಗೆ ಮೆಲ್ದರ್ಜೆಗೇರಿಸೇಕಿದೆ. ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳ ಹೆಚ್ಚಾಗುತ್ತಿದ್ದು ತನಿಖೆ ಮೇಲೆ ಒತ್ತಡ ಬೀರುತ್ತಿದೆ. ಬಂದೋಬಸ್ತ್ ಹಾಗೂ ಕಾನೂನು ಸುವ್ಯವಸ್ಥೆ ಹತೋಟಿ ತರಲು ಪೊಲೀಸರ ಮೇಲೆ ಕಾರ್ಯಾಭಾರ ಅಧಿಕವಾಗಿದೆ. ಕಳೆದ ಅಕ್ಟೋಬರ್ ಕೊನೆಗೊಂಡಂತೆ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 21,941 ಪ್ರಕರಣ ದಾಖಲಾಗಿದೆ. 2022ರಲ್ಲಿ 16,161, 2021ರಲ್ಲಿ 13,161 ಪ್ರಕರಣ ದಾಖಲಾಗಿವೆ.

ನಗರದ ವಿಭಾಗವಾರು ಅಪರಾಧ ಪ್ರಕರಣಗಳ ಅಂಕಿ- ಅಂಶಗಳು :

ವಿಭಾಗ 20222023
ಪೂರ್ವ2,504 2,785
ಪಶ್ಚಿಮ1,252 1,518
ಉತ್ತರ2,454 4,251
ದಕ್ಷಿಣ2,665 3,382
ಕೇಂದ್ರ 1,647 1,767
ಆಗ್ನೇಯ2,079 2,335
ಈಶಾನ್ಯ2,079 2,335
ವೈಟ್ ಫೀಲ್ಡ್ 1,475 2,837
ಒಟ್ಟು16,161 21,941

ಇದನ್ನೂ ಓದಿ: ವರ್ಗಾವಣೆ ಆದೇಶಕ್ಕೆ ಡೋಂಟ್ ಕೇರ್ ಎಂದ 44 ಇನ್​​ಸ್ಪೆಕ್ಟರ್​ಗಳಿಗೆ ಸಸ್ಪೆಂಡ್ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.