ETV Bharat / state

ಹೈಟೆಕ್​ ಡ್ರಗ್ಸ್​ ದಂಧೆ.. 8 ಡ್ರಗ್ಸ್​ ಪೆಡ್ಲರ್​ಗಳ ಬಂಧಿಸಿದ ಪೊಲೀಸರು! - ಬೆಂಗಳೂರು ಅಪರಾಧ ಸುದ್ದಿ

ಡಾರ್ಕ್ ವೆಬ್​ಸೈಟಿನಲ್ಲಿ ಡ್ರಗ್ಸ್ ಆರ್ಡರ್ ಮಾಡಿ ಬಿಟ್ ಕಾಯಿನ್ ಮೂಲಕ ಖರೀದಿಸಿ ಮಾರಾಟ ಮಾಡುತ್ತಿದ್ದ 8 ಡ್ರಗ್ಸ್ ಪೆಡ್ಲರ್ಸ್​ಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Drugs Fedlers are Arrest in Bangalore, Drugs order in Dark website, Drugs buy in Bitcoin, Bangalore crime news, Bengaluru drug case, ಬೆಂಗಳೂರಿನಲ್ಲಿ ಡ್ರಗ್ಸ್ ಫೆಡ್ಲರ್ಸ್​ ಬಂಧನ, ಡಾರ್ಕ್​ ವೆಬ್​ಸೈಟ್​ನಲ್ಲಿ ಡ್ರಗ್ಸ್​ ಆರ್ಡರ್​, ಬಿಟ್​​ಕಾಯಿನ್ ಮೂಲಕ ಡ್ರಗ್ಸ್​ ಖರೀದಿ, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಡ್ರಗ್ಸ್​ ಪ್ರಕರಣ,
ಡ್ರಗ್ಸ್​ ಪೆಡ್ಲರ್​ಗಳನ್ನು ಬಂಧಿಸಿದ ಪೊಲೀಸರು
author img

By

Published : Feb 8, 2022, 1:58 PM IST

Updated : Feb 8, 2022, 3:18 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ನಿಮೂರ್ಲನೆಗಾಗಿ ನಗರ ಪೊಲೀಸರು ಪಣ ತೊಟ್ಟು ಕಾರ್ಯಾಚರಣೆ ನಡೆಸುತ್ತಿದ್ದರೆ ಮತ್ತೊಂದೆಡೆ ಡ್ರಗ್ಸ್ ಪೆಡ್ಲರ್​ಗಳು ಮಾತ್ರ ಯಾವುದೇ ಅಡ್ಡಿ ಆತಂಕವಿಲ್ಲದೇ ಮಾದಕವಸ್ತು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಅಕ್ರಮ ಜಾಲದ ಬಗ್ಗೆ ಯಾರಿಗೂ ಅನುಮಾನ ಬಾರದಿರಲು ಡಾರ್ಕ್ ವೆಬ್​ಸೈಟ್​ನ‌ಲ್ಲಿ ಬಿಟ್​ಕಾಯಿನ್ ಮುಖಾಂತರ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 8 ಮಂದಿ ದಂಧೆಕೋರರನ್ನ ಸಿಸಿಬಿ ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ.

ಓದಿ: ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ!

ಬಂಡೆಪಾಳ್ಯ ಹಾಗೂ ಆರ್​ಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಎಂಡಿಎಂಎ ಕ್ರಿಸ್ಟೆಲ್ ಹಾಗೂ ಎಲ್​ಎಸ್​ಡಿ ಬ್ಯಾಟಲ್ ಪೇಪರ್​ಗಳನ್ನು ಡಾರ್ಕ್ ವೆಬ್​ಸೈಟಿನಲ್ಲಿ ಆರ್ಡರ್ ಮಾಡುತ್ತಿದ್ದರು. ಬಿಟ್​ಕಾಯಿನ್ ಮೂಲಕ ಹಣಕಾಸಿನ ವ್ಯವಹಾರ ನಡೆಸಿ ಕಡಿಮೆ ಬೆಲೆಗೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಬಳಿಕ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಪರಿಚಯಸ್ಥ ಗಿರಾಕಿಗಳಿಗೆ ನಿರಂತರವಾಗಿ ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ‌ ಮಾಡುತ್ತಿದ್ದರು.

ಡ್ರಗ್ಸ್ ಮಾರಾಟ ಜಾಲ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ 75 ಲಕ್ಷ ಮೌಲ್ಯದ 1 ಕೆಜಿ ಎಂಡಿಎಂಎಂ ಕ್ರಿಸ್ಟೆಲ್, 183 ಎಲ್ಎಸ್​ಡಿ ಪೇಪರ್ ಬ್ಲಾಟ್ಸ್​, 9 ಮೊಬೈಲ್ ಪೋನ್, ತೂಕದ ಯಂತ್ರ ಹಾಗೂ ಪ್ಯಾಕಿಂಗ್ ಮಾಡಲು ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡು ಜೈಲಿಗಟ್ಟಿದ್ದಾರೆ.

ಓದಿ: ಹಿಜಾಬ್​ ಗಲಾಟೆ: ಶಿವಮೊಗ್ಗದಲ್ಲಿ ಉದ್ರಿಕ್ತ ಗುಂಪಿನ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ

ಪ್ರಕರಣ ಸಂಬಂಧ ಬಂಡೆಪಾಳ್ಯ ಹಾಗೂ ಆರ್ ಎಂಸಿಯಾರ್ಡ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ‌.

Last Updated : Feb 8, 2022, 3:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.