ETV Bharat / state

ನಕಲಿ ದಾಖಲೆ ಸೃಷ್ಟಿಸಿ 69 ಲಕ್ಷ ರೂ. ವಂಚನೆ: ಐವರು ಆರೋಪಿಗಳು ಅರೆಸ್ಟ್

ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸುವ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ್ದ 5 ಮಂದಿ ಆರೋಪಿಗಳನ್ನು ಇದೀಗ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

author img

By

Published : Jan 20, 2021, 3:50 PM IST

69-lakhs-fraud-in-bengalore-5-accused-arrest-by-police
ಐವರು ವಂಚಕರು ಅರೆಸ್ಟ್!

ಬೆಂಗಳೂರು: ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಮಾಲೀಕರಿಂದ ಕ್ರಯ ಪತ್ರ ಮಾಡಿಸಿಕೊಂಡು ಅಸಲಿ ಮಾಲೀಕರ ಸೋಗಿನಲ್ಲಿ ಬೇರೆಯವರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ 5 ಜನ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿಗಳಾದ ಕೀರ್ತನಾ, ಈಕೆಯ ಗಂಡ ಶೇಖರ್, ಸಹಚರರಾದ ಪವನ್ ಕುಮಾರ್, ಉಮಾ ಮಹೇಶ್ ರಾವ್, ಜಯಪ್ರಕಾಶ್ ಎಂಬುವರನ್ನು ಬಂಧಿಸಿ 16.83 ಲಕ್ಷ ರೂ. ಮೌಲ್ಯದ 362 ಗ್ರಾಂ ಚಿನ್ನ, ಎರಡು ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಪ್ರಜ್ವಲ್ ರಾಮಯ್ಯ ಪತ್ತೆಗಾಗಿ ಶೋಧ ಮುಂದುವರೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌.

ಆರೋಪಿಗಳ‌ ಪೈಕಿ ಕೀರ್ತನಾ ರಿಯಲ್ ಎಸ್ಟೇಟ್​ನಲ್ಲಿ ತೊಡಗಿಸಿಕೊಂಡಿದ್ದು, ಈಕೆಯ ಗಂಡ ಶೇಖರ್ ಖಾಸಗಿ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದಾನೆ. ತಲೆಮರೆಸಿಕೊಂಡಿರುವ ಪ್ರಜ್ವಲ್ ಜೊತೆ ಸೇರಿಕೊಂಡು ಗೊಟ್ಟಿಗೆರೆಯ ಭಾಗ್ಯನಗರದ 8ನೇ ಕ್ರಾಸ್​​ನಲ್ಲಿರುವ ಸರ್ವೇ ನಂಬರ್ 282 ಸೈಟ್ ಮಾರಾಟಕ್ಕೆ ಇರುವುದಾಗಿ ಬಿಂಬಿಸಿಕೊಂಡಿದ್ದರು. ನಿವೇಶನದ ಅಸಲಿ ಮಾಲೀಕ ಮೈಕಲ್ ಡಿಸೋಜಾ ದುಬೈನಲ್ಲಿರುವುದನ್ನು ಅರಿತಿದ್ದ ವಂಚಕರು ಈತನ ಹಸರಿನಲ್ಲೇ ನಕಲಿ ದಾಖಲಾತಿ ಸೃಷ್ಟಿಸಿಕೊಂಡಿದ್ದರು.

69-lakhs-fraud-in-bengalore-5-accused-arrest-by-police
ಐವರು ಆರೋಪಿಗಳು ಅರೆಸ್ಟ್

ನಿವೇಶನ ಖರೀದಿಸಲು ಚಕ್ರವರ್ತಿ ನಡುಪಾಂಡು ಎಂಬುವರು ಮುಂದಾಗಿದ್ದರು. ಈತನ ಪತ್ನಿ ರುತಿರಾದೇವಿ ಚಕ್ರವರ್ತಿ ಹೆಸರಿನಲ್ಲಿ‌ ಸೈಟ್ ಖರೀದಿಸಲು ಮುಂದಾಗಿದ್ದರು.‌ ವಂಚಕರೊಂದಿಗೆ 1 ಕೋಟಿ ರೂಪಾಯಿ ಖರೀದಿಯ ಮಾತುಕತೆಯಾಗಿತ್ತು. ಆರೋಪಿಗಳ ಸಹಕಾರದಿಂದಲೇ ಸಹಕಾರನಗರದ ಐಸಿಐಸಿಐ ಬ್ಯಾಂಕ್​​ನಲ್ಲಿ 69 ಲಕ್ಷ ಸಾಲ ಪಡೆದುಕೊಂಡಿದ್ದರು.

ಓದಿ: ನಕಲಿ ವೋಟರ್ ಐಡಿ ಪ್ರಕರಣ: ಶಾಸಕ ಮುನಿರತ್ನಗೆ ಬಿಗ್ ರಿಲೀಫ್

ಆರೋಪಿಗಳ‌ ಸೂಚನೆಯಂತೆ ಬ್ಯಾಂಕ್​​ನಿಂದ ಮಂಜೂರಾಗಿದ್ದ ಹಣವನ್ನು ಡಿಮಾಂಡ್ ಡ್ರಾಪ್ಟ್ (ಡಿಡಿ) ಮಾಡಿಸಿಕೊಂಡು ಬೊಮ್ಮನಹಳ್ಳಿಯ ಉಪನೋಂದಣಿ ಅಧಿಕಾರಿ ಕಚೇರಿಗೆ ಬಂದಿದ್ದರು. ಇತ್ತ ಆರೋಪಿಗಳು ನಿರುದ್ಯೋಗಿಯಾಗಿದ್ದ ಜೇರ್ವಗಿಸ್ ಮ್ಯಾಥ್ಯೂ ಎಂಬುವರನ್ನು ಕೆಲಸ ಕೊಡಿಸುವ ಸೋಗಿನಲ್ಲಿ ನೋಂದಣಿ ಕಚೇರಿಗೆ ಕರೆತಂದು ಸೈಟ್ ಮಾಲೀಕ ಮೈಕಲ್ ಡಿಸೋಜಾ ಎಂದು ಬಿಂಬಿಸುವಂತೆ ಮಾಡಿದ್ದರು. ಬಳಿಕ ಆರೋಪಿಗಳ ಪೈಕಿ ಪವನ್ ಕುಮಾರ್ ಎಂಬಾತ ಮಲ್ಲೇಶ್ವರಂ ಬಂಧನ್ ಬ್ಯಾಂಕ್​​ನಲ್ಲಿ ಮೈಕಲ್ ಡಿಸೋಜಾ ಹೆಸರಿನಲ್ಲಿ ನಕಲಿ ಹೆಸರಿನಲ್ಲಿ ಖಾತೆ ತೆರೆದು ಹಣ ಜಮಾವಣೆ ಮಾಡಿಕೊಂಡಿದ್ದ. ಬಂದ ಹಣವನ್ನು ಆರೋಪಿಗಳು ಸಮನಾಗಿ ಹಂಚಿಕೊಂಡಿದ್ದರು ಎಂದು‌ ಪೊಲೀಸರು ತಿಳಿಸಿದ್ದಾರೆ.

ವಂಚನೆ ಬಯಲಾಗಿದ್ದು ಹೇಗೆ?

ರಿಯಲ್ ಎಸ್ಟೇಟ್ ಗಂಧ ಅರಿತಿದ್ದ ಕೀರ್ತನಾ ದಂಪತಿಗೆ ವಕೀಲ ಪ್ರಜ್ವಲ್ ರಾಮಯ್ಯ ಪರಿಚಿತನಾಗಿದ್ದ‌. ಗೊಟ್ಟಿಗೆರೆಯಲ್ಲಿ ಗುರುತಿಸಿಕೊಂಡಿದ್ದ ನಿವೇಶನಕ್ಕೆ ನಕಲಿ‌ ದಾಖಲೆಯನ್ನು ಫೋಟೋ ಶಾಪ್ ಮೂಲಕ ಮಾಡಿಸಿಕೊಂಡಿದ್ದರು.‌ ಇದೇ ವೇಳೆ ಕೋರ್ಟ್​ವೊಂದರ ಮುಂದೆ ವಕೀಲಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಪ್ರಜ್ವಲ್​​ಗೆ ಜೀರ್ವಗೀಸ್ ಮ್ಯಾಥೂಸ್ ಎಂಬಾತ ಪರಿಚಯವಾಗಿದ್ದ. ನಿರುದ್ಯೋಗಿಯಾಗಿದ್ದ ಈತ ಕೆಲಸ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದ. ಇದನ್ನೇ ದುರ್ಬಳಕೆ ಮಾಡಿಕೊಂಡು ಆರೋಪಿಯನ್ನು ಬೊಮ್ಮನಹಳ್ಳಿಯ ಉಪನೋಂದಣಾಧಿಕಾರಿ ಕಚೇರಿಗೆ ಬರುವಂತೆ ತಿಳಿಸಿದ್ದ. ಇದರಂತೆ ಅಲ್ಲಿಗೆ ಹೋಗಿದ್ದ ಮ್ಯಾಥೂಸ್, ಸೈಟ್ ಮಾಲೀಕ ಡಿಸೋಜಾ‌ ಹೆಸರಿನಲ್ಲಿ ಭಾವಚಿತ್ರ ಪಡೆದು ಸಹಿ ಹಾಕಿಸಿಕೊಂಡು ಕಳುಹಿಸಿದ್ದರು. ತನ್ನನ್ನು ಬಳಸಿಕೊಂಡು ಮೋಸ ಮಾಡುತ್ತಿದ್ದಾರೆ ಎಂಬ ಮೂನ್ಸೂಚನೆ ಅರಿತ ಆತ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಈತ ನೀಡಿದ ಮಾಹಿತಿ ಆಧರಿಸಿ ವಂಚಕರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.