ಬೆಂಗಳೂರು: ನಗರದಲ್ಲಿ ಭಾನುವಾರ ಒಂದೇ ದಿನ 7,500 ದಾಟಿದ್ದ, ಕೋವಿಡ್ ಪ್ರಕರಣಗಳ ಆರ್ಭಟ ಇಂದು ಮತ್ತೆ ಮುಂದುವರಿದಿದೆ. ಇಂದು 6574 ಜನರಲ್ಲಿ ಸೋಂಕು ದೃಢಪಟ್ಟಿದೆ.
ಬೆಂಗಳೂರು ದಕ್ಷಿಣ ವಿಭಾಗದಲ್ಲೇ ಅತಿಹೆಚ್ಚು ಕೋವಿಡ್ ಹರಡುತ್ತಿದ್ದು, 1126 ಜನರಲ್ಲಿ ಕಂಡುಬಂದಿದೆ. ಪಶ್ಚಿಮದಲ್ಲಿ 1064, ಪೂರ್ವದಲ್ಲಿ 988 ಜನರಿಗೆ ಸೋಂಕು ದೃಢಪಟ್ಟಿದೆ. ನಿನ್ನೆ ಒಂದೇ ದಿನ 7,584 ಜನರಿಗೆ ಸೋಂಕು ದೃಢಪಟ್ಟಿದ್ದು, 27 ಮಂದಿಯನ್ನು ಮಹಾಮಾರಿ ಕೊರೊನಾ ಬಲಿ ತೆಗೆದುಕೊಂಡಿತ್ತು.
ಕೊರೊನಾ ನಿಯಂತ್ರಣ ಕುರಿತಾಗಿ, ಬಿಬಿಎಂಪಿ ಚೀಫ್ ಕಮಿಷನರ್ ಗೌರವ್ ಗುಪ್ತಾ ಇಂದು ಎಂಟು ವಲಯಗಳ ವಲಯ ಆಯುಕ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಪ್ರತಿ ವಲಯಗಳಲ್ಲೂ ಸಾವಿರ ಜನರಿಗೆ ಕೋವಿಡ್ ಹರಡುತ್ತಿದ್ದು, ಅದರ ನಿಯಂತ್ರಣ ಕುರಿತು ಸಭೆ ನಡೆಸಲಿದ್ದಾರೆ.