ಬೆಂಗಳೂರು: ಕಳೆದ ವರ್ಷದ ವಾಣಿಜ್ಯ (commercial) ಎಲ್ಪಿಜಿ ಬೆಲೆ ಹೋಲಿಕೆಯಲ್ಲಿ ಈ ವರ್ಷ ಶೇ.60ರಷ್ಟು ಬೆಲೆ ಏರಿಕೆ ಆಗಿದೆ. ಹೋಟೆಲ್ ಗಳಲ್ಲಿ ಬಳಸುವ ಎಲ್ ಪಿ ಜಿಯ ತೂಕ 19ಕೆಜಿ ಆಗಿರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 60 ರಷ್ಟು ಬೆಲೆ ಏರಿಕೆ ಆಗಿದೆ. 2020ರ ನವೆಂಬರ್ನಲ್ಲಿ ವಾಣಿಜ್ಯ ಎಲ್ಪಿರ್ಜಿ ಬೆಲೆ ₹ 1290 ಇದ್ದು, ಈ ವರ್ಷ ನವೆಂಬರ್ ನಲ್ಲಿ ₹ 2063 ಆಗಿದೆ.
ಈ ವರ್ಷದ ನವೆಂಬರ್ ತಿಂಗಳ ಪರಿಷ್ಕೃತ ಬೆಲೆ ₹ 2063 ಆಗಿದ್ದು ಮೇ ತಿಂಗಳಲ್ಲಿ ₹1655 ಬೆಲೆ ಇತ್ತು. ಅರ್ಧ ವರ್ಷದ ಪರಿಷ್ಕೃತ ಬೆಲೆಯಲ್ಲಿ ಮೇ 2021-ನವೆಂಬರ್ 2021 ರಲ್ಲಿ ₹407 ಹೆಚ್ಚಳ ಆಗಿದ್ದು ಶೇ 24.62 ರಷ್ಟು ಬೆಲೆ ಏರಿಕೆ ಕಂಡಿದೆ.
ಎಲ್ಪಿಜಿ ಬೆಲೆ ಏರಿಕೆ ಕುರಿತು ಮಾತನ್ನಾಡಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ ರಾವ್, ಎಲ್ಪಿಜಿ ಹೋಟೆಲ್ ಉದ್ಯಮಕ್ಕೆ ಹೃದಯವಿದ್ದಂತೆ. ಅಡುಗೆ ತಯಾರಿಸಲು ಇಂಧನ ಅತ್ಯಗತ್ಯ. ಹೋಟೆಲ್ ಉದ್ಯಮದ ಒಟ್ಟಾರೆ ವಹಿವಾಟಿನಲ್ಲಿ ಶೇ.10 ರಿಂದ 15 ರಷ್ಟು ಎಲ್ಪಿ ಜಿ ಖರ್ಚು ಎಂದು ಹೇಳಬಹುದು. ಸದ್ಯ ಏರುತ್ತಿರುವ ಎಲ್ ಪಿ ಜಿ ಬೆಲೆಗಳು ಹೋಟೆಲ್ ಉದ್ಯಮಿಗಳಿಗೆ ತೂಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ಒಂದೆರಡು ತಿಂಗಳಲ್ಲಿ ಹೋಟೆಲ್ ತಿಂಡಿಗಳ ಬೆಲೆ ಏರಿಕೆ ಅತ್ಯಗತ್ಯ ಎಂದು ವಿವರಿಸಿದರು.
ವಿದ್ಯುತ್ ಚಾಲಿತ ಅಡುಗೆ ಮನೆ ಅಳವಡಿಕೆ ಬಗ್ಗೆ ಇವರಿಗೆ ಕೇಳಿದಾಗ , ಇತ್ತೀಚೆಗೆ ವಿದ್ಯುತ್ ಚಾಲಿತ stove ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ stove ಬೆಲೆ ಹಾಗೂ ವಿದ್ಯುತ್ ಬೆಲೆ ದುಬಾರಿ. ಹೋಟೆಲ್ ಗಳಿಗೆ ವಾಣಿಜ್ಯ ವಿದ್ಯುತ್ ದರ ವಿಡಿಸಲಾಗುವುದೇ ಹೊರತು ಕೈಗಾರಿಕೆ ವಿದ್ಯುತ್ ದರ ಅಲ್ಲ. ವಿದ್ಯುತ್ ಅಡುಗೆ ಮನೆ ಅಳವಡಿಕೆ ಕೆಲ ದೊಡ್ಡ ಹೋಟೆಲ್ ನಲ್ಲಿ ಅಳವಡಿಸಲಾಗಿದೆ ಹೊರತು ಮಧ್ಯಮ ಹಾಗೂ ಚಿಕ್ಕ ಹೋಟೆಲ್ ಗಳಲ್ಲಿ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಉತ್ತರಿಸಿದರು.
ಇನ್ನು ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಅಗತ್ಯ, ಅಡುಗೆ ಎಣ್ಣೆ ₹160/ಕೆಜಿ, ಕಾಫಿ ಪುಡಿ ₹300, ಬೀಳೆಗಳು ₹80 ರಿಂದ 95, ಬ್ಯಾಡಗಿ ಮೆಣಸು ₹390, ತರಕಾರಿಗಳು ₹40 ರಿಂದ ₹60 ಆಗಿವೆ. ಸದ್ಯ ಹೋಟೆಲ್ ವ್ಯಾಪಾರದಲ್ಲಿ 80% ಸುಧಾರಣೆ ಕಂಡಿದ್ದು ಮುಂದಿನ ತಿಂಗಳ ಕೊನೆಯಲ್ಲಿ ಬೆಲೆ ಏರಿಕೆ ಮಾರ್ಗ ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಹೇಳಿದರು.