ಬೆಂಗಳೂರು: ರಾಜ್ಯದಲ್ಲಿ ಇಂದು 27,123 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 562 ಮಂದಿಗೆ ಸೋಂಕು ದೃಢಪಟ್ಟಿದ್ದು, 352 ಮಂದಿ ಗುಣಮುಖರಾಗಿದ್ದಾರೆ. ಯಾರೂ ಕೂಡ ಸೋಂಕಿನಿಂದ ಮೃತಪಟ್ಟಿಲ್ಲ.
ಕರ್ನಾಟಕದಲ್ಲಿ ಸದ್ಯ 3,387 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ. 2.07, ವಾರದ ಸೋಂಕಿತರ ಪ್ರಮಾಣ ಶೇ. 1.93 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.04 ಇದೆ. ವಿಮಾನ ನಿಲ್ದಾಣದಿಂದ 5,065 ತಪಾಸಣೆಗೆ ಒಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 545 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,91,311ಕ್ಕೆ ಏರಿದೆ. 343 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 16,964 ಮಂದಿ ವೈರಸ್ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜಧಾನಿಯಲ್ಲಿ 3,263 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ: ಏರುಗತ್ತಿಯಲ್ಲಿ ಸಾಗಿದ ಕೋವಿಡ್.. 24 ಗಂಟೆಯಲ್ಲಿ 8,329 ಹೊಸ ಪ್ರಕರಣ ದಾಖಲು