ಬೆಂಗಳೂರು: ಇಂದು ಒಂದೇ ದಿನ 52 ಸೋಂಕಿತರು ಮೃತಪಟ್ಟಿದ್ದು ಸಾವಿನ ಸಂಖ್ಯೆ 38,666 ರಷ್ಟಾಗಿದೆ. 1,55,054 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು 41,400 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 36,05,508 ಏರಿಕೆ ಆಗಿದೆ.
53,093 ಸೋಂಕಿತರು ಗುಣಮುಖರಾಗಿದ್ದು, ಈ ತನಕ 32,16,070 ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 3,50,742 ರಷ್ಟಿದೆ. ಇವತ್ತಿನ ಪಾಸಿಟಿವ್ ರೇಟು 26.70% ರಷ್ಟಿದ್ದರೆ ಡೆತ್ ರೇಟ್ 0.12% ರಷ್ಟಿದೆ. ಇನ್ನು ವಿಮಾನ ನಿಲ್ದಾಣದಲ್ಲಿ 833 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 404 ವಿದೇಶಿಗರು ಹೈ ರಿಸ್ಕ್ ದೇಶಗಳಿಂದ ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 19,105 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,26,331 ಕ್ಕೆ ಏರಿದೆ. 33,011 ಜನರು ಡಿಸ್ಚಾರ್ಜ್ ಆಗಿದ್ದು 13,97,344 ಗುಣಮುಖರಾಗಿದ್ದಾರೆ. 19 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,526 ರಷ್ಟಿದೆ. ಸದ್ಯ ಸಕ್ರಿಯ ಪ್ರಕರಣಗಳು 2,12,460 ರಷ್ಟಿದೆ.
ರೂಪಾಂತರಿ ವೈರಸ್ ಅಪ್ಡೇಟ್ಸ್
- ಅಲ್ಪಾ- 156
- ಬೀಟಾ-08
- ಡೆಲ್ಟಾ- 2956
- ಡೆಲ್ಟಾ ಸಬ್ ಲೈನ್ ಏಜ್- 1372
- ಕಪ್ಪಾ-160
- ಈಟಾ-01
- ಒಮಿಕ್ರಾನ್- 931
-
ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ