ದೇವನಹಳ್ಳಿ(ಬೆಂಗಳೂರು): ದುಬೈನಿಂದ ಕೆಐಎಎಲ್ ಏರ್ ಕಾರ್ಗೋ ವಿಭಾಗಕ್ಕೆ ಕೊರಿಯರ್ ಮೂಲಕ ಬಂದ ಡ್ಯಾಕ್ಯುಮೆಂಟ್ಸ್ ಬ್ಯಾಗ್ ಪರಿಶೀಲನೆ ನಡೆಸಿದ್ದಾಗ 5.3 ಕೋಟಿ ಮೌಲ್ಯದ 754 ಗ್ರಾಂ ಹೆರಾಯಿನ್ ಪತ್ತೆಯಾಗಿದೆ.
ಜ.22 ರಂದು ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಕಾರ್ಗೋ ವಿಭಾಗಕ್ಕೆ ಕೊರಿಯರ್ ಮೂಲಕ ಡ್ಯಾಕ್ಯುಮೆಂಟ್ಸ್ ಬ್ಯಾಗ್ ಬಂದಿದೆ. ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಇಂಟೆಲಿಜೆನ್ಸ್ ಯುನಿಟ್ ( CIU) ಮತ್ಯು ಏರ್ ಕಾರ್ಗೋ ಕಮಿಷನರೇಟ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಬ್ಯಾಗ್ನ ಪೋಲ್ಡರ್ ಒಳಗೆ ಪುಡಿಯೊಂದು ಪತ್ತೆಯಾಗಿದೆ. ಪರೀಕ್ಷೆ ನಡೆಸಿದಾಗ ಪತ್ತೆಯಾದ ಪುಡಿ ಹೆರಾಯಿನ್ ಎಂದು ದೃಢಪಟ್ಟಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಎನ್ಡಿಪಿಎಸ್ ಕಾಯ್ದೆಯಡಿ 5.3 ಕೋಟಿ ಮೌಲ್ಯದ 754 ಗ್ರಾಂ ಹೆರಾಯಿನ್ ವಶಕ್ಕೆ ಪಡೆಯಲಾಗಿದ್ದು, ಆಮದುದಾರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಚಿಕನ್ ಸಾಂಬಾರ್ ಕೊಡುವುದಾಗಿ ಪೈಶಾಚಿಕ ಕೃತ್ಯ : ಮೂರು ದಿನದಲ್ಲಿ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ