ETV Bharat / state

ರಾಜ್ಯದಲ್ಲಿ ಒಂದೇ ದಿನಕ್ಕೆ ಕಿಕ್​ ತರುವ ಆದಾಯವನ್ನೇ ಕೊಟ್ಟ ’ಗುಂಡು’ಗಲಿಗಳು! - ದಾಖಲೆ ಬರೆದ ಅಬಕಾರಿ ಇಲಾಖೆ

ರಾಜ್ಯದಾದ್ಯಂತ ಲಾಕ್​ಡೌನ್ ಸಡಿಲಿಕೆಯಾಗಿದ್ದು, ಇಂದು ಒಂದೇ ದಿನ ದಾಖಲೆ ಮಟ್ಟದ ಮದ್ಯ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಬಕಾರಿ ಇಲಾಖೆಯ ಆಯುಕ್ತರ ಕಚೇರಿಯಿಂದ ಅಧಿಕೃತ ಮಾಹಿತಿ ಸಹ ಬಿಡುಗಡೆಯಾಗಿದೆ.

45 crores liquor sales in a single day
ಸಾಂದರ್ಭಿಕ ಚಿತ್ರ
author img

By

Published : May 4, 2020, 8:51 PM IST

Updated : May 4, 2020, 9:43 PM IST

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಇಷ್ಟು ದಿನ ಬಂದ್ ಆಗಿದ್ದ ಮದ್ಯ ಮಾರಾಟ ಇಂದು ಆರಂಭವಾಗಿ ದಾಖಲೆ ಬರೆದಿದೆ.

ಇಂದು ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ನಡೆದ ವಹಿವಾಟಿನಲ್ಲಿ ಅಂದಾಜು 3.9 ಲಕ್ಷ ಲೀಟರ್ ಬಿಯರ್ ಮತ್ತು 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ. ಈ ಮಾರಾಟದ ಅಂದಾಜು ಮೌಲ್ಯ ಸುಮಾರು 45 ಕೋಟಿ ರೂ. ಆಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಕೊರೊನಾ ಸೋಂಕಿನಿಂದಾಗಿ 40 ದಿನಗಳಿಂದ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಇದೀಗ ಕೆಲವೊಂದು ಷರತ್ತು ವಿಧಿಸಿ ಇಂದಿನಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದೆ. ಇಂದಿನಿಂದ 3500 ಸಿಎಲ್-2 ಮತ್ತು 700 ಸಿಎಲ್-11(ಸಿ) (ಎಂ.ಎಸ್.ಐ.ಎಲ್) ಸನ್ನದನ್ನು ಬೆಳಿಗ್ಗೆ 9:00 ರಿಂದ ಸಂಜೆ 7:00ರವರೆಗೆ ತೆರೆಯಲಾಗಿದ್ದು, ಕಟ್ಟುನಿಟ್ಟಾಗಿ ಎಂ.ಆರ್.ಪಿ (MRP) ದರದಲ್ಲೇ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದೆಲ್ಲೆಡೆ ಇಂದು ಭರ್ಜರಿಯಾಗಿಯೇ ವಹಿವಾಟು ನಡೆದಿದೆ.

ಷರತ್ತುಗಳು: ಸನ್ನದು ಮಳಿಗೆಯಲ್ಲಿ ಕೇವಲ 5 ಜನರು ಮಾತ್ರ ಗ್ರಾಹಕರು ಇರುವಂತೆಯೂ ಹಾಗೂ ಸಾಮಾಜಿಕ ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುವುದು. ಮದ್ಯ ಮಾರಾಟ ಮಾಡುವ ಸನ್ನದಿನಲ್ಲಿನ ನೌಕರರು ಗ್ಲೌಸ್​ ಧರಿಸುವುದು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು ಮಾಸ್ಕ್​​ ಕಡ್ಡಾಯವಾಗಿ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಸುವುದು.

ಮದ್ಯ ದಾಸ್ತಾನು: ಎಂ.ಆರ್.ಪಿ (MRP) ದರ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಕೆಲವು ದೂರುಗಳು ಸ್ವೀಕೃತವಾದಲ್ಲಿ ಅಂತಹ ವುಗಳನ್ನು

ಪರಿಶೀಲಿಸಿ ಅಮಾನತು ಒಳಗೊಂಡಂತೆ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನು ಇದೆ ಹಾಗೂ ಡಿಸ್ಟಿಲರಿ ಮತ್ತು ಬ್ರೀವರಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ಅಬಕಾರಿ ಆಯುಕ್ತರ ಸೂಚನೆಯ ಮೇರೆಗೆ ಜಿಲ್ಲಾಮಟ್ಟದಲ್ಲಿ ಅಬಕಾರಿ ಅಧಿಕಾರಿಗಳು ಸಿಎಲ್-2 ಮತ್ತು ಸಿಎಲ್-11(ಸಿ) ಸನ್ನದುದಾರರ ಸಭೆಯನ್ನು ಕರೆದು ಈಗಾಗಲೇ ತಿಳುವಳಿಕೆಯನ್ನು ನೀಡಲಾಗಿದ್ದು, ಅಬಕಾರಿ ಆಯುಕ್ತರು ಆಗಿಂದಾಗ್ಗೆ ಜರುಗಿಸಬೇಕಾದ ಕ್ರಮಗಳ ಬಗ್ಗೆ ವಿಮರ್ಶೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Last Updated : May 4, 2020, 9:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.