ಬೆಂಗಳೂರು: ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಪಡೆಯಲು ಇದುವರೆಗೆ 3,453 ಅರ್ಜಿಗಳು ಬಂದಿವೆ. ಇದರಲ್ಲಿ ಶೇ.40 ರಷ್ಟು ಮನೆಗಳಿಗೆ ಪರಿಹಾರ ನೀಡಲಾಗಿದೆ. ಬಾಕಿ ಉಳಿದ ಶೇ.60ರಷ್ಟು ಮನೆಗಳಿಗೆ ಪರಿಹಾರ ಸಂಜೆಯೊಳಗೆ ನೀಡಲಾಗುವುದು ಎಂದು ಪಾಲಿಕೆ ವಿಶೇಷ ಆಯುಕ್ತ ರಂಗಪ್ಪ ಮಾಹಿತಿ ನೀಡಿದರು.
ನಿಯಮದ ಪ್ರಕಾರ, ನೆಲಮಹಡಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ. ಮೊದಲನೇಯ ಮಹಡಿಯಲ್ಲಿರುವವರಿಗೆ ಹೆಚ್ಚು ಅನಾಹುತವಾಗಿಲ್ಲ. ನೆಲಮಹಡಿಯಲ್ಲಿ ಇದ್ದ ಮನೆಗಳಲ್ಲಿನ ವಸ್ತುಗಳು ಹಾನಿಗೊಳಗಾಗಿವೆ. ಹೀಗಾಗಿ ನೆಲಮಹಡಿಯಲ್ಲಿರುವವರಿಗೆ ಮಾತ್ರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ರಾಜಕಾಲುವೆ ಒತ್ತುವರಿ ವಿಚಾರ: 2,626 ಪ್ರದೇಶಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಈಗಾಗಲೇ 696 ಪ್ರಕರಣಗಳ ವ್ಯಾಜ್ಯ ಕೋರ್ಟ್ನಲ್ಲಿದೆ. ಆದಷ್ಟು ಬೇಗ ಪ್ರಕರಣ ಇತ್ಯರ್ಥಗೊಳಿಸಿ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಯುವಕನ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಪ್ರಕರಣಕ್ಕೆ ಟ್ವಿಸ್ಟ್: ಪ್ರೀತಿಗೆ ಬೇಬಿ ಅಡ್ಡಿ ಎಂದು ನಾಟಕವಾಡಿದ ಲವ್ಬರ್ಡ್ಸ್