ಬೆಂಗಳೂರು: ಮೇಕ್ ಇನ್ ಇಂಡಿಯಾ ಕಲ್ಪನೆಯಡಿ ದೇಶದ ಡ್ರೋನ್ ವಲಯದಲ್ಲಿ ಒಂದಿಲ್ಲೊಂದು ನೂತನ ಆವಿಷ್ಕಾರ ನಡೆಯುತ್ತಿದ್ದು, ಬೆಂಗಳೂರು ಇದಕ್ಕೆ ನಾಂದಿಯಾಡಿದೆ. ಡ್ರೋನ್ ಉದ್ಯಮದಲ್ಲಿ ನಂಬರ್ ಒನ್ ಸ್ಥಾನ ಗಳಿಸುವ ಉದ್ದೇಶ ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಸಂಬಂಧ ರಾಜಧಾನಿಯಲ್ಲಿ ಶಾರ್ಟ್ ಹಾಲ್ ಮೊಬಿಲಿಟಿ ಕುರಿತ ಅಂತಾರಾಷ್ಟ್ರೀಯ ಡ್ರೋನ್ ಸಮ್ಮೇಳನ ನಡೆಯಿತು.
ಸ್ಟಾರ್ಟಪ್ ಕಂಪನಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ: ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶವು ಬಾಹ್ಯಾಕಾಶ ಸೇರಿದಂತೆ ತಂತ್ರಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಅದರಂತೆ ತಂತ್ರಜ್ಞಾನ ವಲಯದಲ್ಲಿ ಮುಂದಡಿಯಿಡುವ ಸ್ಟಾರ್ಟಪ್ ಕಂಪನಿಗಳಿಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ವರುಣಾ ಹಾಗೂ ಕೋಲಾರ ಎರಡೂ ಕ್ಷೇತ್ರಗಳಿಂದಲೂ ಸ್ಪರ್ಧಿಸುವೆ: ಸಿದ್ದರಾಮಯ್ಯ
ಭವಿಷ್ಯದಲ್ಲಿ ಡ್ರೋನ್ ವಲಯದಲ್ಲಿ ಭಾರತ ಮುಂಚೂಣಿಯಲ್ಲಿರುವ ಉದ್ದೇಶದಿಂದ ವಿವಿಧ ಕಂಪನಿಗಳ ನಾವೀನ್ಯತೆಯಿರುವ ಹಾಗೂ ಆವಿಷ್ಕರಿಸಿದ ಡ್ರೋನ್ಗಳನ್ನು ತಯಾರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ದೇಶದ ರಕ್ಷಣಾ ವಲಯದ ಜೊತೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಬಳಸಬಹುದಾಗಿದೆ ಎಂದರು. ಇದಕ್ಕೂ ಮುನ್ನ ಪ್ರದರ್ಶನಕ್ಕೆ ಇಡಲಾಗಿದ್ದ ತರಹೇವಾರಿ ಡ್ರೋನ್ ಗಳನ್ನ ಕೇಂದ್ರ ಸಚಿವರು ಪರಿಶೀಲಿಸಿದರು.
ಇದನ್ನೂ ಓದಿ : ಬಿಜೆಪಿ ಶಾಸಕರಿಗೆ ಡಿಕೆ ಶಿವಕುಮಾರ್ ಕಾಲ್ ಮಾಡಿ ಕಾಂಗ್ರೆಸ್ಗೆ ಆಹ್ವಾನ ನೀಡುತ್ತಿದ್ದಾರೆ : ಸಿಎಂ ಬೊಮ್ಮಾಯಿ
920 ಮೀಟರ್ ಎತ್ತರದವರೆಗೆ ಹಾರಾಡಲಿರುವ ಡ್ರೋನ್: ಮೇಕ್ ಇನ್ ಇಂಡಿಯಾ ಕಲ್ಪನೆಯಡಿ ಎಲೆನಾ ಜಿಯೊ ಸಿಸ್ಟಂ ಪ್ರೈವೇಟ್ ಕಂಪನಿಯು ಜಿಪಿಎಸ್ಗೆ ಪರ್ಯಾಯವೆಂಬಂತೆ ವಿಶೇಷವಾಗಿ ಆರ್ಮಿಯ ಲಾಜೆಸ್ಟಿಕ್ ಬಳಕೆಗಾಗಿ ನಾವಿಕ್ ನ್ಯಾವಿಗೇಷನ್ ಡ್ರೋನ್ ಆವಿಷ್ಕರಿಸಿದೆ. 40 ಕೆ.ಜಿ ತೂಕವಿರುವ ಡ್ರೋನ್ ಜಿಪಿಎಸ್ನಂತೆ ಕಾರ್ಯನಿರ್ವಹಿಸಲಿದೆ. ಸಮುದ್ರ ನೆಲಮಟ್ಟದಿಂದ ಮೂರು -ನಾಲ್ಕು ಕಿಲೋಮೀಟರ್ ಎತ್ತರದಲ್ಲಿ ಹಾರುವ ಕ್ಷಮತೆ ಹೊಂದಿದೆ. ಸಮುದ್ರ ಮಟ್ಟದಿಂದ ಬೆಂಗಳೂರು ನಗರ ಎತ್ತರದಲ್ಲಿರುವುದರಿಂದ 920 ಮೀಟರ್ ಎತ್ತರದವರೆಗೆ ಡ್ರೋನ್ ಹಾರಾಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಎಲ್ಲಾ ಲಂಚ ಪ್ರಕರಣಗಳ ತನಿಖೆಗೆ ಎಸ್ಐಟಿಗೆ ವಹಿಸುವಂತೆ ಪಿಐಎಲ್.. ಶ್ರೀರಾಮ ಸೇನೆಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಕೊರಿಯರ್, ಫುಡ್ ಡೆಲಿವರಿಗೂ ಡ್ರೋನ್ ಬಳಕೆ: 15 ಕೆ. ಜಿ ತೂಕದ ಸಾಮರ್ಥ್ಯವಿರುವ ಬ್ಯಾಟರಿಯನ್ನು ಡ್ರೋನ್ ಹೊಂದಿದ್ದು, ಏಕಕಾಲದಲ್ಲಿ 30 ಕಿಲೋ ಮೀಟರ್ವರೆಗೂ ಡ್ರೋನ್ ಹಾರಾಡಬಲ್ಲದು. ನಿಖರವಾಗಿ ಲೊಕೇಷನ್ ಸಹ ಪತ್ತೆ ಹಚ್ಚಬಹುದಾಗಿದೆ. ಭವಿಷ್ಯದಲ್ಲಿ ಕೊರಿಯರ್, ಫುಡ್ ಡೆಲಿವರಿ ಸೇರಿದಂತೆ ವಾಣಿಜ್ಯ ಉದ್ದೇಶಗಳಿಗೂ ಬಳಸಲು ಸಹಕಾರಿಯಾಗಿದೆ ಎಂದು ಕಂಪನಿಯ ಸದಸ್ಯ ಪ್ರತಿನಿಧಿ ಪ್ರಣವ್ ಎಸ್ ರಾವ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ZOOM ನಲ್ಲಿ OpenAI: ಮೀಟ್ಗೆ ಲೇಟ್ ಆದ್ರೆ ಸಮರಿ ಹೇಳುತ್ತೆ ChatGPT