ಬೆಂಗಳೂರು: ತಂದೆಯ ಜೊತೆಗಿನ ವ್ಯವಹಾರ ವೈಷಮ್ಯಕ್ಕೆ ಮಗನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಯಲಹಂಕ ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ. ಕಲಬುರಗಿ ಮೂಲದ ರಮೇಶ್ ರಾಥೋಡ್ (43), ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್ (23) ಹಾಗೂ ಹರೀಶ್ ಕುಮಾರ್ (24) ಬಂಧಿತರು.
ಆಂಧ್ರಪ್ರದೇಶ ಮೂಲದ ಉದ್ಯಮಿಯೊಬ್ಬನ ಜೊತೆ ವ್ಯವಹಾರ ವಿಚಾರವಾಗಿ ವೈಷಮ್ಯ ಹೊಂದಿದ್ದ ಇವರು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಉದ್ಯಮಿಯ ಪುತ್ರನನ್ನು ಅಪಹರಿಸಿದ್ದರು. ಬಳಿಕ ತಂದೆಗೆ(ಉದ್ಯಮಿ) ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು 3 ಗಂಟೆಯಲ್ಲೇ ಚಿತ್ರದುರ್ಗ ಬಳಿ ಸ್ಥಳೀಯ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 3 ಲಕ್ಷದ ಟೆಂಡರ್‌ಗೆ 15 ಸಾವಿರ ಲಂಚ; ಎಸಿಬಿಗೆ ಸಿಕ್ಕಿಬಿದ್ದ ಹಾವೇರಿ ನಗರಸಭೆ ಪೌರಾಯುಕ್ತ