ಬೆಂಗಳೂರು: ರಾಜ್ಯದಲ್ಲಿಂದು 2,17,230 ಜನರಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ 48,905 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 36,54,413 ಏರಿಕೆ ಆಗಿದೆ.
41,699 ಸೋಂಕಿತರು ಗುಣಮುಖರಾಗಿದ್ದು, ಈ ತನಕ 32,57,769 ಡಿಸ್ಚಾರ್ಜ್ ಆಗಿದ್ದಾರೆ. 39 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,705 ಕ್ಕೆ ಏರಿಕೆ ಕಂಡಿದೆ. ಸದ್ಯ ಸಕ್ರಿಯ ಪ್ರಕರಣಗಳು 3,57,909 ರಷ್ಟಿದೆ.
ಇವತ್ತಿನ ಪಾಸಿಟಿವ್ ರೇಟು 22.51% ರಷ್ಟಿದ್ದರೆ ಡೆತ್ ರೇಟ್ 0.07% ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 627 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 143 ವಿದೇಶಿಗರು ಹೈ ರಿಸ್ಕ್ ದೇಶದಿಂದ ಆಗಮಿಸಿದ್ದಾರೆ.
ರಾಜಧಾನಿ ಬೆಂಗಳೂರುನಲ್ಲಿ 22,427 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,48,758 ಕ್ಕೆ ಏರಿದೆ. 18,734 ಜನರು ಡಿಸ್ಚಾರ್ಜ್ ಆಗಿದ್ದು,14,16,078 ಗುಣಮುಖರಾಗಿದ್ದಾರೆ. 8 ಸೋಂಕಿತರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 16,534 ರಷ್ಟಿದ್ದು, ಸದ್ಯ ಸಕ್ರಿಯ ಪ್ರಕರಣಗಳು 2,16,145 ರಷ್ಟಿದೆ.
ರೂಪಾಂತರಿ ವೈರಸ್ ಅಪ್ಡೇಟ್ಸ್:
- ಅಲ್ಪಾ- 156
- ಬೀಟಾ-08
- ಡೆಲ್ಟಾ- 2956
- ಡೆಲ್ಟಾ ಸಬ್ ಲೈನೇಜ್- 1372
- ಕಪ್ಪಾ-160
- ಈಟಾ-01
- ಒಮಿಕ್ರಾನ್- 931
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ