ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಆರೋಗ್ಯ ಇಲಾಖೆ ಅದೆಷ್ಟೇ ಬಾರಿ ಎಚ್ಚರಿಸಿದರೂ ಅದ್ಯಾಕೋ ಏನೋ ಜನರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ ಅನ್ನುವ ಅಂಶ ಗೊತ್ತಾಗಿದೆ.
ಆರೋಗ್ಯ ಇಲಾಖೆಯ ಪ್ರಕಾರ, ಇಡೀ ರಾಜ್ಯಕ್ಕೆ ಕೊರೊನಾ ಹರಡಿದ್ದು ಸೂಪರ್ ಸ್ಪ್ರೆಡರ್ಸ್ ಅಂತ ಗೊತ್ತಾಗಿದೆ. ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್ಗಳಿಗೆ ಈ ಸೂಪರ್ ಸ್ಪ್ರೆಡರ್‌ಗಳೇ ಕಾರಣವಾಗಿದ್ದಾರೆ.
ಸೂಪರ್ ಸ್ಪ್ರೆಡರ್ಸ್ ಅಂದರೇನು?
ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಮಂದಿಗೆ ಸೋಂಕು ಹರಡಿರುವ ವ್ಯಕ್ತಿಯಾಗಿದ್ದು, ಇಂತಹ ರೋಗಿಗಳನ್ನು ಸೂಪರ್ ಸ್ಪ್ರೆಡರ್ ಎಂದು ಪರಿಗಣಿಸಲಾಗುತ್ತೆ. ಇಲ್ಲಿಯವರೆಗೆ ರಾಜ್ಯದಲ್ಲಿ 13 ಮಂದಿ ಈ ರೀತಿಯ ಸೋಂಕಿತರಿದ್ದಾರೆ. ಇವರು ಯಾರು ಅಂತ ನೋಡಿ.
ಎಷ್ಟು ಮಂದಿಗೆ ಹರಡಿದ್ದಾರೆ ಗೊತ್ತಾ?
13 ಸೋಂಕಿತರಿಂದ 328 ಮಂದಿಗೆ ಸೋಂಕು
P- 52 76
P- 221 37
P- 128 36
P- 419 29
P- 205 27
P- 533 20
P- 134 19
P- 556 19
P- 167 17
P- 125 14
P- 607 12
P- 247 11
P- 390 11
ರೋಗಿ ಸಂಖ್ಯೆ - 52 ಒಬ್ಬನಿಂದ ಬರೋಬ್ಬರಿ 76 ಮಂದಿಗೆ ಸೋಂಕು ಹರಡಿದೆ. ರೋಗಿ ಸಂಖ್ಯೆ -221 ರಿಂದ 37 ಮಂದಿಗೆ ಸೋಂಕು ಹರಡಿದೆ. ರೋಗಿ ಸಂಖ್ಯೆ- 128 ಒಟ್ಟು 36 ಮಂದಿಗೆ ಸೋಂಕು ತಗುಲಿದೆ.
ಹೀಗೆ ಈ 13 ಮಂದಿಯಿಂದ ಸೂಪರ್ ಸ್ಪ್ರೆಡರ್ ಗಳಿಂದ ಬರೋಬ್ಬರಿ 328 ಮಂದಿಗೆ ಕೊರೊನಾ ಸೋಂಕು ಹರಡಿದೆ. ಇನ್ನು ಮುಂದಾದರೂ ಎಚ್ಚರಿಕೆಯಿಂದ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.