ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ 30 ಲಕ್ಷ ರೂ. ಹಣ ಪಡೆದು ಉದ್ಯಮಿಗೆ ವಂಚಿಸಿದ ಆರೋಪದಡಿ ಪ್ರಿಯತಮೆ ವಿರುದ್ಧ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಮಿ ಅನಂತ್ ಮಲ್ಯ ನೀಡಿದ ದೂರಿನ ಮೇರೆಗೆ ಪ್ರಿಯತಮೆ ಅನುಷಾ ಹಾಗೂ ಕುಟುಂಬಸ್ಥರ ವಿರುದ್ಧ ಹೆಚ್‌ಎಎಲ್ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಗರದ ಕ್ವಾನ್‌ಟೇಕ್ ಕನ್ಸಲ್‌ಟೆನ್ಸಿ ಕಂಪನಿ ಸಿಇಒ ಆಗಿರುವ ಅನಂತ್ ಮಲ್ಯಗೆ 2019ರ ಜೂನ್‌ನಲ್ಲಿ ಬೆಂಗಳೂರಿನ ಯುವತಿಗೆ ಪರಿಚಯವಾಗಿದೆ.
ಕಾಲ ಕ್ರಮೇಣ ಇಬ್ಬರ ನಡುವೆ ಸಲುಗೆ ಬೆಳೆದು ಪ್ರೇಮಾಂಕುರವಾಗಿದೆ. ಇದೇ ಸೋಗಿನಲ್ಲಿ ಹಂತ-ಹಂತವಾಗಿ ಉದ್ಯಮಿಯಿಂದ 36.22 ಲಕ್ಷ ಹಣ ಪಡೆದಿದ್ದಾಳೆ. ಚಿಟ್ ಫಂಡ್ ಹಾಗೂ ಸೈಟ್ ತೆಗೆದುಕೊಳ್ಳಬೇಕು ಎಂದು ಕಾರಣ ನೀಡಿ ಹಣ ಪೀಕಿದ್ದಳು.
ಕಡೆಗೆ 36 ಲಕ್ಷ ಹಣದಲ್ಲಿ ₹6.90 ಲಕ್ಷ ವಾಪಸ್ ನೀಡಿದ್ದಳು. ನಂತರ ಪಡೆದ ಹಣವನ್ನು ವಾಪಸ್ ಕೊಡದೇ, ಮದುವೆಯೂ ಆಗದೇ ಎಸ್ಕೇಪ್ ಆಗಿದ್ದಾಳೆ ಎಂದು ಉದ್ಯಮಿ ನೀಡಿದ ದೂರಿನ ಮೇರೆಗೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ 406 ಹಾಗೂ 420 ಅಡಿ ಯುವತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.