ಆನೇಕಲ್: ಮಹಾಮಾರಿ ಕೊರೊನಾ ಜನರ ಬದುಕನ್ನೇ ಹಿಂಡಿ ಹಿಪ್ಪೆ ಮಾಡಿದೆ. ಸಮಾಜದ ಎಲ್ಲರನ್ನೂ ಸಂಕಷ್ಟಕ್ಕೆ ನೂಕಿರುವ ಈ ವೈರಸ್ ಈಗ ಇಡೀ ಕುಟುಂಬವನ್ನೇ ನುಂಗಿದೆ. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.
ಹೌದು, ಅತ್ತಿಬೆಲೆ ಟೌನ್ ಅಂಬೇಡ್ಕರ್ ಕಾಲೋನಿಯಲ್ಲಿ ಮೂರು ಜನ ಒಂದೇ ಕುಟುಂಬದ ಸದಸ್ಯರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಂಗಳ ಹಿಂದೆ ನಡೆದಿದ್ದ ತಾಯಿಯ ಸಾವಿನ ನೋವು ಆ ಕುಟುಂಬದ ಮೂವರ ಆತ್ಮಹತ್ಯೆಗೆ ಕಾರಣವಾಗಿದೆ.
ಮೃತರಲ್ಲಿ, ಸತೀಶ್ (45) ಅಂಬೇಡ್ಕರ್ ಕಾಲೋನಿ ಸಾಮ್ರಾಟ್ ಗಾರ್ಮೆಂಟ್ಸ್ ನಲ್ಲಿ ಮಾಜಿ ನೌಕರರಾಗಿದ್ದರು. ಇವರ ಹೆಣ್ಣು ಮಕ್ಕಳಾದ ಕೀರ್ತಿ (18 ) ಪ್ರಥಮ ಬಿಎಸ್ಸಿ, ಮೋನಿಷಾ (15) 9ನೇ ತರಗತಿ ಓದುತ್ತಿದ್ದರು. ಇವರೆಲ್ಲರೂ ನೇಣಿಗೆ ಶರಣಾಗಿದ್ದಾರೆ.
ಸತೀಶ್ ಅವರ ಧರ್ಮಪತ್ನಿ ಆಶಾ ಒಂದೂವರೆ ತಿಂಗಳ ಹಿಂದೆ ಕೊರೊನಾ ವೈರಸ್ಗೆ ಬಲಿಯಾಗಿದ್ದರು. ಇದೇ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಓದಿ: 'ಕರ್ನಾಟಕದ ರಾಜಕೀಯ ಹುಲಿ ಸಿದ್ದರಾಮಯ್ಯ': ಮೈಸೂರಲ್ಲಿ ಮಾರ್ದನಿಸಿತು ಅಭಿಮಾನಿಗಳ ಘೋಷಣೆ