ETV Bharat / state

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಕೋವಿಡ್ ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ - ಪಿಯುಸಿ ಫಲಿತಾಂಶ

ಕೊರೊನಾ ಸೋಂಕು ಹರಡುವಿಕೆ ಏರಿಳಿತದಿಂದಾಗಿ ಪರೀಕ್ಷೆ ನಡೆಯಲಿದೆಯೇ ಅಥವಾ ಮುಂದೂಡಿಕೆ ಆಗುತ್ತಾ? ಎಂಬ ಗೊಂದಲ ಆರಂಭವಾಗಿತ್ತು. ಆದರೆ ಇದೀಗ ಪರೀಕ್ಷೆ ನಡೆಯುತ್ತಿದ್ದು ಸುಮಾರು 18,414 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 3ರ ವರೆಗೆ ಪರೀಕ್ಷೆಗಳು ನಡೆಯಲಿವೆ.

2nd-puc-exams-started-from-today
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ
author img

By

Published : Aug 19, 2021, 9:49 AM IST

Updated : Aug 19, 2021, 12:44 PM IST

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯದೇ ಲಕ್ಷಾಂತರ ವಿದ್ಯಾರ್ಥಿಗಳಿಗೆ ಹಿಂದಿನ ಕಲಿಕಾ ಆಧಾರದ ಮೇಲೆ ಅಂಕಗಳನ್ನು ನೀಡಿ ಈಗಾಗಲೇ ಪಾಸ್ ಮಾಡಲಾಗಿದೆ.‌ ಆದರೆ ಪರೀಕ್ಷೆ ಬರೆಯುವ ಹಾಗೂ ಮರು ಪರೀಕ್ಷೆಗೆ ವಿನಂತಿಸಿದ್ದ ವಿದ್ಯಾರ್ಥಿಗಳಿಗೆ ಇಂದಿನಿಂದ ಪರೀಕ್ಷೆ ನಡೆಯಲಿದೆ. ಕೊರೊನಾ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ.

ಕೊರೊನಾ ಸೋಂಕು ಹರಡುವಿಕೆ ಏರಿಳಿತದಿಂದಾಗಿ ಪರೀಕ್ಷೆ ನಡೆಯಲಿದೆಯೇ ಅಥವಾ ಮುಂದೂಡಿಕೆ ಆಗುತ್ತಾ? ಎಂಬ ಗೊಂದಲ ಆರಂಭವಾಗಿತ್ತು. ಆದರೆ ಇದೀಗ ಪರೀಕ್ಷೆ ನಡೆಯುತ್ತಿದ್ದು ಸುಮಾರು 18,414 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 17,469 ಖಾಸಗಿ ವಿದ್ಯಾರ್ಥಿಗಳು, 352 ರಿಪೀಟರ್ಸ್, 5,093 ಪ್ರೆಶರ್ಸ್ ವಿದ್ಯಾರ್ಥಿಗಳಿದ್ದಾರೆ. ಇಂದಿನಿಂದ ಸೆಪ್ಟೆಂಬರ್ 3ರ ವರೆಗೆ ಪರೀಕ್ಷೆ ನಡೆಯಲಿದೆ.

ಇಂದು ಸಾಮಾನ್ಯ ಗಣಿತ, ಐಚ್ಛಿಕ ಕನ್ನಡ, ಗಣಿತ ವಿಷಯಕ್ಕೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರ ವರೆಗೆ ಪರೀಕ್ಷೆ ನಡೆಯಲಿದೆ. 187 ಪರೀಕ್ಷಾ ಕೇಂದ್ರಗಳನ್ನ ನಿಯೋಜನೆ ಮಾಡಲಾಗಿದ್ದು ಪರೀಕ್ಷೆಗೆ ನೋಂದಣಿ ಮಾಡಿಸಿರುವ 18,414 ವಿದ್ಯಾರ್ಥಿಗಳ ಪೈಕಿ 17,469 ಖಾಸಗಿ ಕಾಲೇಜು ವಿದ್ಯಾರ್ಥಿಗಳಿದ್ದರೆ, 352 ಪುನರಾವರ್ತಿತ ,593 ಫ್ರೆಶರ್ಸ್ ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಅಕ್ರಮಕ್ಕೆ ಕಡಿವಾಣ
ಈ ಬಾರಿಯೂ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳು ಡಿಜಿಟಲ್ ಅಥವಾ ಸ್ಮಾರ್ಟ್ ಕೈಗಡಿಯಾರದ ಬಳಕೆ ನಿಷೇಧಿಸಲಾಗಿದೆ. ಅನಲಾಗ್ ಕೈ ಗಡಿಯಾರಗಳನ್ನು ಮಾತ್ರ ಬಳಸಲು ಅವಕಾಶವಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ.‌ ವಿದ್ಯಾರ್ಥಿಗಳಿಗೆ ಬಿಎಂಟಿಸಿ, ಕೆಎಸ್​ಆರ್​​​ಟಿಸಿ ಮೂಲಕ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಮಾರ್ಗಸೂಚಿ ಕಡ್ಡಾಯ:

ಕೋವಿಡ್ ಸೋಂಕು ಇದ್ದರೆ ಕೂಡಲೇ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೋವಿಡ್ ಸೋಂಕಿತರಿಗೂ ಪರೀಕ್ಷೆ ಬರೆಯಲು ಅವಕಾಶ ಇದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತೋರಿಸಬೇಕಿದೆ. ಕೇರಳ ಗಡಿ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಕೂಡ ಟೆಸ್ಟ್ ಕಡ್ಡಾಯವಾಗಿದ್ದು, 72 ಗಂಟೆಗಳ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ ಹತ್ತು ವಿದ್ಯಾರ್ಥಿಗಳಿಗೆ ಅವಕಾಶ ಇದ್ದು, ಡೆಸ್ಕ್​​ಗೆ ಒಬ್ಬರಿಗೆ ಪರೀಕ್ಷೆ ಬರೆಯುವ ಅವಕಾಶ ಇದೆ. ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಆತಂಕವಿಲ್ಲದೇ ಇಲ್ಲದೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಬರೆಯುವ ಮುನ್ನ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆದರೆ ಇದುವರೆಗೆ ಪರೀಕ್ಷೆ ಬರೆಯುವ ಯಾವ ವಿದ್ಯಾರ್ಥಿಯೂ ಕೊರೊನಾ ಸೋಂಕಿನ ಕುರಿತು ಮಾಹಿತಿ ನೀಡಿಲ್ಲ.

ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ಎರಡು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸೈಂಟ್ ಆನ್ಸ್ ಮಹಿಳಾ ಪದವಿ ಪೂರ್ವ ಕಾಲೇಜು, ಮಿಲ್ಲರ್ಸ್ ರಸ್ತೆ ಹಾಗೂ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು, ಕೋಟೆ(ವಾಣಿ ವಿಲಾಸ)ಗೆ ಭೇಟಿ ನೀಡಲಿದ್ದಾರೆ.

Last Updated : Aug 19, 2021, 12:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.