ETV Bharat / state

ಬೆಂಗಳೂರೊಂದರಲ್ಲೇ 287 ಮಂದಿಗೆ ಒಮಿಕ್ರಾನ್ ದೃಢ: 766ಕ್ಕೆ ಏರಿದ ಸೋಂಕಿತರ ಸಂಖ್ಯೆ!

Omicron cases in Karnataka: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ರೂಪಾಂತರಿ ಒಮಿಕ್ರಾನ್​ ಸೋಂಕಿನ ಕೇಸ್​ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿವೆ. ಇಂದು ಬೆಂಗಳೂರು ಒಂದರಲ್ಲೇ ಬರೋಬ್ಬರಿ 287 ಜನರಿಗೆ ಸೋಂಕು ತಗುಲಿದೆ.

287 New omicron case found in Bangalore
ಬೆಂಗಳೂರಲ್ಲಿ 287 ಮಂದಿಗೆ ಒಮಿಕ್ರಾನ್ ದೃಢ
author img

By

Published : Jan 17, 2022, 5:32 PM IST

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್​​ ಕೇಸ್​​ಗಳು ಏರಿಕೆಯತ್ತ ಸಾಗುತ್ತಿದ್ದು, ಇದರ ನಡುವೆ ಸದ್ದಿಲ್ಲದೆ ರೂಪಾಂತರಿ ಒಮಿಕ್ರಾನ್​​​ ಸೋಂಕಿನ ಸಂಖ್ಯೆಗಳು ಕೂಡ ಏರಿಕೆಯಾಗುತ್ತಿವೆ. ಇಂದು 287 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 766ಕ್ಕೆ ತಲುಪಿದೆ.

ಸತತ ಒಂದು ವಾರದಿಂದ ಹೈರಿಸ್ಕ್​​ ದೇಶಗಳಿಂದ ಸುಮಾರು 24,836 ಪ್ರಯಾಣಿಕರು ಆಗಮಿಸಿದ್ದು, ಅವರಲ್ಲೇ ರೂಪಾಂತರಿ ಪತ್ತೆಯಾಗಿರುವುದು ಕಂಡು ಬಂದಿದೆ. ಇದರಲ್ಲೂ ಹೆಚ್ಚಾಗಿ ಬೆಂಗಳೂರು ನಗರದಲ್ಲೇ 287 ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಸಚಿವ ಸುಧಾಕರ್​ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಹೈರಿಸ್ಕ್​​ ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಪ್ರಯಾಣಿಕರ ಸಂಖ್ಯೆ ಮತ್ತು ದಿನಾಂಕದ ಮಾಹಿತಿ

10-1-2022- 644

11-1-2022- 198

12-1-2022- 485

13-1-2022- 642

14-1-2022- 176

15-1-2022- 490

16-1-2022- 381

ETV Bharat Logo

Copyright © 2024 Ushodaya Enterprises Pvt. Ltd., All Rights Reserved.