ಬೆಂಗಳೂರು: ನಗರದಲ್ಲಿ ಮತ್ತೆ ಕ್ಲಸ್ಟರ್ ಮಟ್ಟದಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಯಲಹಂಕ ವಲಯದಲ್ಲಿ ಕೊರೊನಾ ಅಲೆ ಮತ್ತೆ ಬೆಚ್ಚಿ ಬೀಳಿಸಿದ್ದು, ಒಟ್ಟು 28 ಪ್ರಕರಣ ದೃಢಪಟ್ಟಿವೆ.
ಯಲಹಂಕ ವಲಯದ ವಾರ್ಡ್ 4ರ ಅಗ್ರಗಾಮಿ ಕಾಲೇಜಿನಲ್ಲಿ 266 ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 8 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ. ಮೂವರನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ವ ವೆನೇಜಿಯಾ ಅಪಾರ್ಟ್ಮೆಂಟ್ನಲ್ಲಿ ಒಟ್ಟು 6 ಮಂದಿಗೆ ಪಾಸಿಟಿವ್ ಬಂದಿದ್ದು, ಮೂವರನ್ನು ರಾಮಯ್ಯ ಹಾಗೂ ಎಸ್ತರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ಒಟ್ಟು 111 ಜನರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿದೆ.
ಸಂಭ್ರಮ ಕಾಲೇಜಿನಲ್ಲಿ 1,156 ಜನರ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಈ ಪೈಕಿ 9 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇಲ್ಲಿಯವರೆಗೆ 15 ಜನರಿಗೆ ಕೋವಿಡ್ ದೃಢಪಟ್ಟಿದೆ. ಈ ಕ್ಲಸ್ಟರ್ಗಳನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 453 ಮಂದಿಗೆ ಕೊರೊನಾ ದೃಢ: 7 ಸೋಂಕಿತರು ಬಲಿ