ETV Bharat / state

ಬೆಂಗಳೂರಲ್ಲಿ ಚಿಂದಿ ಆಯುವವನಿಗೆ ಸಿಕ್ತು 23ಲಕ್ಷ ಮೌಲ್ಯದ ಯುಎಸ್ ಡಾಲರ್: ಪೊಲೀಸರು ಹೇಳಿದ್ದೇನು?

ಚಿಂದಿ ಆಯುವವನಿಗೆ 23ಲಕ್ಷ ಮೌಲ್ಯದ ಯುಎಸ್ ಡಾಲರ್​ ಸಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದ್ರೆ ಈ ಕುರಿತು ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ.

ಚಿಂದಿ ಆಯುವವನಿಗೆ ಸಿಕ್ತು 23ಲಕ್ಷ ಯುಎಸ್ ಡಾಲರ್

author img

By ETV Bharat Karnataka Team

Published : Nov 8, 2023, 5:57 PM IST

ಬೆಂಗಳೂರು: ಪ್ರತಿದಿನ ಚಿಂದಿ‌ ಆಯ್ದು ಅಲ್ಪಸ್ವಲ್ಪ ಹಣ ಪಡೆಯುವವರಿಗೆ ಒಂದೇ ಬಾರಿ ಲಕ್ಷಾಂತರ ರೂಪಾಯಿ ಹಣ ಸಿಕ್ಕರೆ ಹೇಗಾಗಬೇಡ. ಒಂದು ಕ್ಷಣ ದಂಗಾಗೊದಂತೂ ಗ್ಯಾರಂಟಿ. ನಗರದಲ್ಲಿ ಈ ವ್ಯಕ್ತಿಗೆ ಆಗಿದ್ದು ಇದೇ ರೀತಿ. ಚಿಂದಿ ಆಯುವಾಗ ವ್ಯಕ್ತಿಯೊಬ್ಬ 23 ಲಕ್ಷ ಯುಎಸ್ ಡಾಲರ್ ಸಿಕ್ಕಿದ್ದನ್ನ‌‌‌ ಕಂಡು ಆಶ್ಚರ್ಯಚಕಿತರಾಗಿದ್ದಾನೆ.‌ ಅದನ್ನು ಏನೂ ಮಾಡಬೇಕೆಂಬುದು ತಿಳಿಯದೆ ವ್ಯಕ್ತಿಯೊಬ್ಬರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಹಣ ಸಿಕ್ಕ ಖುಷಿ ಕೆಲವೇ ಗಂಟೆಗಳಿಗೆ ಮಾತ್ರ ಸೀಮಿತವಾಗಿತ್ತು. ಯಾಕೆಂದರೆ ಪೊಲೀಸರ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಸಿಕ್ಕಿದ್ದ 23 ಲಕ್ಷದ ಡಾಲರ್ ಮೊತ್ತದ ಕಲರ್ ಜೆರಾಕ್ಸ್ ನೋಟುಗಳು ಅನ್ನೋದು ತಿಳಿದುಬಂದಿದೆ.

ಹಣ ಸಿಕ್ಕಿದ್ದೆಲ್ಲಿ‌?: ಪಶ್ಚಿಮ ಬಂಗಾಳ ಮೂಲದ 39 ವರ್ಷದ ಚಿಂದಿ ಆಯುವ ಕಾರ್ಮಿಕ ಸೇಲ್ಮನ್ ಎಸ್.ಕೆ ಎಂಬಾತ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಹೆಬ್ಬಾಳ, ನಾಗವಾರ ಸುತ್ತಮುತ್ತ ತ್ಯಾಜ್ಯವಸ್ತು ಆಯ್ದುಕೊಂಡು ಜೀವನ ಸಾಗಿಸುತ್ತಿದ್ದಾನೆ. ಕಳೆದ ಶುಕ್ರವಾರ ವೀರಣ್ಯಾಪಾಳ್ಯದ ರೈಲ್ವೆ ಗೇಟ್ ಬಳಿ‌ಯ ಸುಮಾರು 100 ಮೀಟರ್ ಅಂತರದಲ್ಲಿ ಕಪ್ಪು ಬಣ್ಣದ ಚೀಲ ಪತ್ತೆಯಾಗಿದೆ. ಈ ಪ್ಲಾಸ್ಟಿಕ್ ಬ್ಯಾಗ್ ತೆಗೆದು ನೋಡಿದಾಗ 23 ಲಕ್ಷ ಮೌಲ್ಯದ ಯುಎಸ್ ಡಾಲರ್ ಹಣ ಸಿಕ್ಕಿದೆ.

ದೊಡ್ಡ ಮೊತ್ತದ ಹಣ ಕಂಡು ಒಂದು ಕ್ಷಣ ದಂಗಾಗಿದ್ದಾನೆ. ಈ ಬಗ್ಗೆ ಸ್ಕ್ರಾಪ್ ಬ್ಯುಸಿನೆಸ್ ಮಾಡುವ ವ್ಯಕ್ತಿಯೊಬ್ಬರಿಗೆ ಮಾಹಿತಿ ನೀಡಿದ್ದಾನೆ. ತಾನು‌ ಬೆಂಗಳೂರಿನಲ್ಲಿಲ್ಲ.. ಬರುವವರೆಗೂ ಹಣವನ್ನು ನಿನ್ನೊಂದಿಗೆ ಇಟ್ಟುಕೊಂಡಿರುವಂತೆ ಸಲಹೆ ನೀಡಿದ್ದರು. ಇದರಂತೆ ಅಮೃತಹಳ್ಳಿಯಲ್ಲಿರುವ ಮನೆಯಲ್ಲಿ‌‌ ಇಟ್ಟುಕೊಂಡಿದ್ದ. ಪ್ಲಾಸ್ಟಿಕ್ ಬ್ಯಾಗ್ ತೆಗೆದು ಕೂಲಂಕಶವಾಗಿ ನೋಡಿದಾಗ ನೋಟಿನ‌ ಮೇಲೆ‌ ವಿಶ್ವಸಂಸ್ಥೆ ಹೊಂದಿರುವ ಮುದ್ರೆಯ‌ ಪತ್ರ ದೊರೆತಿದೆ. ಹಣವಿಟ್ಟುಕೊಳ್ಳಲು ಕಷ್ಟವಾದ ಹಿನ್ನೆಲೆಯಲ್ಲಿ ಸ್ವರಾಜ್‌ ಇಂಡಿಯಾ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಸಾಮಾಜಿಕ‌ ಕಾರ್ಯಕರ್ತ ಆರ್.ಕಲೀಂ ಉಲ್ಲಾ ಅವರಿಗೆ ಮಾಹಿತಿ ನೀಡಿದ್ದಾರೆ. ಇದೇ ವಿಷಯವನ್ನು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರನ್ನು ಭೇಟಿಯಾಗಿ ತಿಳಿಸಿದ್ದರು.

ಅಲ್ಲದೆ ಚಿಂದಿ ಆಯುವ ಸೇಲ್ಮನ್​ನನ್ನ ಕರೆಯಿಸಿ ಪ್ರಶ್ನಿಸಿದ್ದರು. ನೋಟುಗಳ ನೈಜತೆ ಬಗ್ಗೆ ಪರಿಶೀಲಿಸಿ ತನಿಖೆ ನಡೆಸಲು ಹೆಬ್ಬಾಳ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್​ಗೆ ಸೂಚಿಸಿದ್ದರು. ಈ ಬಗ್ಗೆ ಪರಿಶೀಲಿಸಿದ ಪೊಲೀಸರು ಮೇಲ್ನೋಟಕ್ಕೆ‌ ಕಲರ್ ಜೆರಾಕ್ಸ್ ಎಂಬುದನ್ನು ಅರಿತುಕೊಂಡಿದ್ದಾರೆ. ನಿಖರವಾಗಿ ನೋಟಿನ ನೈಜತೆ ಬಗ್ಗೆ ಅರಿಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ರೈಲ್ವೆ ಹಳಿ ಬದಿ ಹಣ ಸಿಕ್ಕಿರುವುದರಿಂದ ರೈಲ್ವೆ ಪ್ರಯಾಣಿಕರು ಬಿಸಾಡಿರುವ ಸಾಧ್ಯತೆಯಿದೆ.‌ ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ‌ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.