ETV Bharat / state

ರಷ್ಯಾದಿಂದ ತಾಯ್ನಾಡಿಗೆ ಮರಳಿದ 227 ವೈದ್ಯಕೀಯ ವಿದ್ಯಾರ್ಥಿಗಳು - 227 Student return to karnataka from Russia

ವಿದ್ಯಾರ್ಥಿಗಳು ಭಾರತಕ್ಕೆ ಬರಲು ವ್ಯವಸ್ಥೆ ಮಾಡಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು. ಇದನ್ನು ನೋಡಿದ್ದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮನವಿಗೆ ಸ್ಪಂದಿಸಿ ಅವರನ್ನು ತಾಯ್ನಾಡಿಗೆ ಕರೆತರುವಲ್ಲಿ ನೆರವಾಗಿದ್ದಾರೆ.

ರಷ್ಯಾದಿಂದ ತಾಯ್ನಾಡಿನ ಮರಳಿದ 227 ವೈದ್ಯಕೀಯ ವಿದ್ಯಾರ್ಥಿಗಳು

author img

By

Published : Jul 15, 2020, 12:34 AM IST

ಬೆಂಗಳೂರು: ಕೊರೊನಾ ವೈರಸ್ ಸೋಂಕಿನಿಂದಾಗಿ ಹೊರ ದೇಶಗಳಲ್ಲಿ ಅತಂತ್ರರಾಗಿರುವ ಕನ್ನಡಿಗರು ಭಾರತಕ್ಕೆ ಮರಳಿದ್ದಾರೆ. ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಸಂಕಷ್ಟಕ್ಕೆ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಸ್ಪಂದಿಸಿದ್ದು, 227 ವೈದ್ಯಕೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

227 ಜನ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದಾರೆ. ಇದರಲ್ಲಿ 170 ಕನ್ನಡಿಗರು, ಉಳಿದಂತೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಗೋವಾ ಸೇರಿದಂತೆ ಇತರ ವಿದ್ಯಾರ್ಥಿಗಳು ಭಾರತಕ್ಕೆ ಬರಲು ವ್ಯವಸ್ಥೆ ಮಾಡಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು. ಇದನ್ನು ನೋಡಿದ್ದ ಜಿ.ಸಿ.ಚಂದ್ರಶೇಖರ್ ಮನವಿಗೆ ಸ್ಪಂದಿಸಿ ಅವರನ್ನು ತಾಯ್ನಾಡಿಗೆ ಕರೆತರಲು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಪತ್ರ ಬರೆದಿದ್ದರು.

ವಂದೇ ಭಾರತ್ ಮಿಷನ್ ಅಡಿಯಲ್ಲಿ ಕರೆತರಲು ಆಗದಿದ್ದರೂ ಪರವಾಗಿಲ್ಲ. ವಿದ್ಯಾರ್ಥಿಗಳೇ ತಮ್ಮ ಸ್ವಂತ ಹಣದಲ್ಲಿ ಚಾರ್ಟೆಡ್ ಫ್ಲೈಟ್ ಬುಕ್ ಮಾಡಿಕೊಂಡು ಭಾರತಕ್ಕೆ ಬರಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು. ಜಿ.ಸಿ. ಚಂದ್ರಶೇಖರ್ ಅವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ವಿದೇಶಾಂಗ ಇಲಾಖೆ ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಭಾರತಕ್ಕೆ ಬರಲು ಅನುಮತಿ ನೀಡಿತ್ತು. ಇದೀಗ ಆ ವಿದ್ಯಾರ್ಥಿಗಳು ಭಾರತಕ್ಕೆ ಮರಳಲಿದ್ದಾರೆ.

ರಷ್ಯಾದಿಂದ ತಾಯ್ನಾಡಿನ ಮರಳಿದ 227 ವೈದ್ಯಕೀಯ ವಿದ್ಯಾರ್ಥಿಗಳು

ಮಲೇಶಿಯಾದಿಂದ 92 ವಿದ್ಯಾರ್ಥಿಗಳು, ಮಸ್ಕತ್​ನಿಂದ ಮಂಗಳೂರಿಗೆ 220 ಜನರನ್ನು ಕರ್ನಾಟಕಕ್ಕೆ ವಾಪಸ್​ ಕರೆತರಲು ಸಹಾಯ ಮಾಡಿದ್ದಾರೆ. ಅಲ್ಲದೇ ಕೆರೆಬಿಯನ್ ದ್ವೀಪಗಳಲ್ಲಿ ಸಿಲುಕಿರುವ ಸುಮಾರು 250 ಜನರು ಸ್ವಗ್ರಾಮಗಳಿಗೆ ತೆರಳಲು, ಬೆಂಗಳೂರಿನಿಂದ ಕುವೈತ್​ ಹಾಗೂ ಯುಎಇಗೆ 200ಕ್ಕೂ ಹೆಚ್ಚು ಜನ ಹೋಗಲು ಚಂದ್ರಶೇಖರ್ ನೆರವಾಗಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.