ಬೆಂಗಳೂರು:19 ನೇ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಇಂದು ಮಧ್ಯಾಹ್ನ 12:20 ಕ್ಕೆ ಬೆಂಗಳೂರಿನ ವೈಟ್‌ಫೀಲ್ಡ್ ಕಂಟೇನರ್ ಡಿಪೊ ತಲುಪಿದೆ. ಈ ರೈಲು ನಿನ್ನೆ ಬೆಳಗ್ಗೆ 08:50ಕ್ಕೆ ಜಾರ್ಖಂಡ್‌ನ ಟಾಟಾ ನಗರದಿಂದ ಹೊರಟಿತ್ತು.
ಈ ರೈಲು 6 ಕ್ರಯೋಜೆನಿಕ್ ಕಂಟೇನರ್‌ಗಳಿಂದ 120 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಸಾಗಿಸಿದೆ. ಇಲ್ಲಿಯವರೆಗೆ ಕರ್ನಾಟಕವು ರೈಲ್ವೆ ಮೂಲಕ 2236.53 ಟನ್ ದ್ರವ ವೈದ್ಯಕೀಯ ಆಮ್ಲಜನಕವನ್ನು ಪಡೆದಿದೆ.
ಭಾರತೀಯ ರೈಲ್ವೆ ಇದುವರೆಗೆ 305 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳನ್ನು ಓಡಿಸಿದೆ ಮತ್ತು 1237 ಟ್ಯಾಂಕರ್‌ಗಳಲ್ಲಿ 20,000 ಟನ್‌ಗಿಂತ ಹೆಚ್ಚು ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಿದೆ. 15 ರಾಜ್ಯಗಳಿಗೆ ಈ ಮೂಲಕ ಆಕ್ಸಿಜನ್ ಪರಿಹಾರ ತಂದುಕೊಟ್ಟಿದೆ.
ಕೇಂದ್ರ ಸರ್ಕಾರ ಆಕ್ಸಿಜನ್ ಕಳುಹಿಸಿ ಕೊಟ್ಟ ನಂತರ ಕರ್ನಾಟಕದಲ್ಲಿ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ಈಗ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರೆತೆ ಆಗದಂತೆ ರಾಜ್ಯ ಸರ್ಕಾರ ಕ್ರಮವಹಿಸಿದೆ.
ಬೆಂಗಳೂರಿಗೆ ಆಗಮಿಸಿರುವ ವೈದ್ಯಕೀಯ ಆಮ್ಲಜನಕವನ್ನು ಅಗತ್ಯವಿರುವ ಆಸ್ಪತ್ರೆಗೆ ಸರಬರಾಜು ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಮ್ಲಜನಕ ಹಂಚಿಕೆ ಮಾಡಿದೆ.