ಬೆಂಗಳೂರು: ರಾಜ್ಯದಲ್ಲಿ ಇಂದು 33,671 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,552 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದು 1,384 ಮಂದಿ ಡಿಸ್ಜಾರ್ಜ್ ಆಗಿದ್ದು, ಇಲ್ಲಿಯ ತನಕ ಒಟ್ಟು 39,43,444 ಮಂದಿ ಗುಣಮುಖರಾಗಿದ್ದಾರೆ. ಇಂದು ಕೋವಿಡ್ಗೆ ಒಬ್ಬರು ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,033ಕ್ಕೆ ಏರಿಕೆಯಾಗಿದೆ.
ಈ ಮೂಲಕ ಸೋಂಕಿತರ ಪ್ರಮಾಣ ಶೇ. 4.60 ರಷ್ಟಿದ್ದರೆ, ವಾರದ ಸೋಂಕಿತರ ಪ್ರಮಾಣ ಶೇ. 4.62 ರಷ್ಟಿದೆ. ಇಲ್ಲಿಯವರೆಗೂ ಪರಿಕ್ಷೀಸಲಾದ ಒಟ್ಟು ಸಂಖ್ಯೆ 6,75,13,540. ವಾರದ ಸಾವಿನ ಪ್ರಮಾಣ ಶೇ. 0.06 ರಷ್ಟಿದೆ. ವಿಮಾನ ನಿಲ್ದಾಣದಿಂದ ಇಂದು ತಪಾಸಣೆಗೆ 6,753 ಮಂದಿ ಒಳಗಾಗಿದ್ದು, ಇದುವರೆಗೂ 12,51,125 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ಇದನ್ನೂ ಓದಿ: ಜಮೀರ್ಗೆಲ್ಲ ಉತ್ತರ ಕೊಡೊಕೆ ನಾನು ತಯಾರಿಲ್ಲ: ಡಿಕೆಶಿ
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಇಂದು 1,285 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಕೋವಿಡ್ ಸಾವಿನ ಸಂಖ್ಯೆ ಶೂನ್ಯವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 18,23,987 ಕ್ಕೆ ಏರಿಕೆ ಆಗಿದೆ. ಇಂದು 1,242 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 17,99,907 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,107 ಇದೆ. ಇಲ್ಲಿಯತನಕದ ಕೋವಿಡ್ ಸಾವಿನ ಸಂಖ್ಯೆ 16,972 ರಷ್ಟಿದೆ.