ETV Bharat / state

ಅನುಮಾನ ಮೂಡಿಸಿದ ನವೀನ್​ ಫೇಸ್​ಬುಕ್ ಖಾತೆ: 15 ಗಂಟೆ ಹಿಂದೆ ಮತ್ತೊಂದು ಪೋಸ್ಟ್​ ಶೇರ್

author img

By

Published : Aug 13, 2020, 9:14 AM IST

ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆಗೆ ಕಾರಣನಾಗಿದ್ದ ನವೀನ್ ಫೇಸ್​ಬುಕ್​ ಖಾತೆಯಿಂದ ಮತ್ತೊಂದು ಪೋಸ್ಟ್ ಶೇರ್ ಮಾಡಲಾಗಿದ್ದು, ಅನುಮಾನ ಹುಟ್ಟುಹಾಕಿದೆ.

15 hours ago Another post Shared in Naveen Facebook account:
ಅನುಮಾನ ಮೂಡಿಸಿದೆ ನವೀನ್​ ಫೇಸ್​ಬುಕ್ ಖಾತೆ

ಬೆಂಗಳೂರು: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆಗೆ ಕಾರಣನಾಗಿರುವ ನವೀನ್ ಕುಮಾರ್ ಫೇಸ್​ಬುಕ್ ಖಾತೆಯಿಂದ ಮತ್ತೊಂದು ಪೋಸ್ಟ್ ಶೇರ್ ಮಾಡಲಾಗಿದ್ದು, ಮತ್ತೆ ಅನುಮಾನ ಮೂಡಿಸಿದೆ.

ಧರ್ಮದ ಬಗ್ಗೆ ಅವಹೇಳಕಾರಿಯಾಗಿ ಪೋಸ್ಟ್ ಮಾಡಿದ ಕಾರಣ ಘಟನೆ ನಡೆದ ದಿನವೇ ಪೊಲೀಸರು ನವೀನ್​ನನ್ನು ಬಂಧಿಸಿದ್ದಾರೆ. ನವೀನ್ ಮೊಬೈಲ್ ಮೂರು ದಿನಗಳ ಹಿಂದೆ ಕಳೆದು ಹೋಗಿದೆ ಎಂದು ಆತನ ತಾಯಿ, ಜಯಂತಿ ‌ಕೂಡ ಹೇಳಿದ್ದಾರೆ. ಇಷ್ಟಿದ್ದರೂ ಕಳೆದ 15 ಗಂಟೆಗಳ ಹಿಂದೆ ಒಂದು ಫೋಸ್ಟ್​​ವೊಂದನ್ನು ನವೀನ್ ಅಕೌಂಟ್​​ನಿಂದಲೇ ಶೇರ್ ಮಾಡಲಾಗಿದೆ.

ನವೀನ್ ಕಳೆದ 30 ಗಂಟೆಗಳಿಂದ ಪೊಲೀಸರ ವಶದಲ್ಲಿದ್ದಾನೆ. ಮೊನ್ನೆ ರಾತ್ರಿಯೇ ಆತನನ್ನು ಅರೆಸ್ಟ್ ಮಾಡಲಾಗಿದೆ. ಹೀಗಿರುವಾಗ ಕಳೆದ ಹದಿನೈದು ಗಂಟೆಗಳ ಹಿಂದೆ ಮಾಜಿ ಸಚಿವರೊಬ್ಬರು ಹಿಂದೂ ದೇವರ ಬಗ್ಗೆ ವಾಟ್ಸ್​ಆ್ಯಪ್​​ ಮಾಡಿದ್ದ ಸುದ್ದಿ ಶೇರ್ ಆಗಿದೆ. ಪೀರೋಜ್ ಪಾಷಾ ಎಂಬಾತನ ಅಕೌಂಟ್​​​ನಿಂದ ಶೇರ್​ ಆಗಿದ್ದ ಪೋಸ್ಟ್​ ಅನ್ನು ನವೀನ್ ಶೇರ್ ಮಾಡಿದ್ದು, ಬಹಳ ಅನುಮಾನಗಳನ್ನ ಹುಟ್ಟು ಹಾಕಿದೆ.

ಸದ್ಯ ತನ್ನ ಮೊಬೈಲ್ ಕಳೆದು ಹೋಗಿದೆ ಎಂದು ನವೀನ್​​​ ಮೊನ್ನೆಯಿಂದ ಪೊಲೀಸರಿಗೆ ಹೇಳಿಕೆ ನೀಡುತ್ತಿದ್ದಾನೆ. ಹಾಗಾದರೆ ಮೊಬೈಲ್ ಯಾರ ಬಳಿ ಇದೆ ಎಂಬ ತನಿಖೆ ನಡೆಸಲಾಗುತ್ತಿದೆ. ನವೀನ್ ಮೊಬೈಲ್ ನಿಜವಾಗಿಯೂ ಕಳ್ಳತನವಾಗಿದೆಯಾ? ಯಾರು ಇದನ್ನ ಪೋಸ್ಟ್ ಮಾಡಿದ್ದಾರೆ ಎಂಬ ಬಗ್ಗೆ ಸಿಸಿಬಿ ಹಾಗೂ ಸೈಬರ್ ​ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.