ದೇವನಹಳ್ಳಿ: ಮೇ. 24, 2008 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ವಿಮಾನ ಯಾನ ಸೇವೆ ಪ್ರಾರಂಭವಾಗಿತ್ತು. ದಕ್ಷಿಣ ಭಾರತದ ಪ್ರಮುಖ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕೆಐಎಎಲ್ಗೆ ಇದೀಗ 14ನೇ ವಾರ್ಷಿಕೋತ್ಸವದ ಸಂಭ್ರಮ. ಸಿಲಿಕಾನ್ ಸಿಟಿ ಎಂದು ಖ್ಯಾತಿಗಳಿಸಿರುವ ಬೆಂಗಳೂರು ನಗರಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅವಶ್ಯಕತೆ ಅಗತ್ಯವಾಗಿತ್ತು.
ಪ್ರಪಂಚದ ಮೂಲೆ ಮೂಲೆಗೂ ಇಲ್ಲಿಂದಲೇ ಸಂಪರ್ಕ ಸಾಧಿಸಬೇಕೆನ್ನುವ ಕಾರಣಕ್ಕೆ ದೇವನಹಳ್ಳಿ ಬಳಿ 2005ರ ಜುಲೈ ತಿಂಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಮೇ. 24, 2008 ರಂದು ಕೆಐಎಎಲ್ ನಿಂದ ನಾಗರಿಕ ವಿಮಾನಯಾನ ಸೇವೆ ಪ್ರಾರಂಭವಾಗಿತ್ತು. ಬೆಂಗಳೂರು ಬೆಳೆದ ವೇಗದಲ್ಲಿ ಕೆಐಎಎಲ್ ಸಹ ಬೆಳದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಂದು ದಕ್ಷಿಣ ಭಾರತದ ಹೆಬ್ಬಾಗಿಲು ಆಗಿದೆ.
-
14 years ago our story began. Today, we are the busiest airport in South India. Thank you to our passengers for their continued trust in us and a big congratulations to the entire BLR Airport Community on completing 14 fabulous years.#BLRAirportTurns14 #BLRAirport #Bengaluru pic.twitter.com/VlrhbI0WhW
— BLR Airport (@BLRAirport) May 24, 2022 " class="align-text-top noRightClick twitterSection" data="
">14 years ago our story began. Today, we are the busiest airport in South India. Thank you to our passengers for their continued trust in us and a big congratulations to the entire BLR Airport Community on completing 14 fabulous years.#BLRAirportTurns14 #BLRAirport #Bengaluru pic.twitter.com/VlrhbI0WhW
— BLR Airport (@BLRAirport) May 24, 202214 years ago our story began. Today, we are the busiest airport in South India. Thank you to our passengers for their continued trust in us and a big congratulations to the entire BLR Airport Community on completing 14 fabulous years.#BLRAirportTurns14 #BLRAirport #Bengaluru pic.twitter.com/VlrhbI0WhW
— BLR Airport (@BLRAirport) May 24, 2022
ಸರಕು ಸಾಗಣೆ ಮತ್ತು ಪ್ರಯಾಣಿಕರ ವಿಮಾನಯಾನ ಸೇವೆ ಎರಡರಲ್ಲೂ ಕೆಐಎಎಲ್ ಉತ್ತಮ ಸಾಧನೆ ಮಾಡಿದೆ. 2021-22 ರ ಸಾಲಿನಲ್ಲಿ 16.2 ಮಿಲಿಯನ್ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ ಮತ್ತು 4,11,550 ಟನ್ ಸರಕು ಸಾಗಣೆ ಮಾಡಲಾಗಿದೆ. ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಮತ್ತು ಸ್ವಚ್ಚತೆಯನ್ನ ವಿಮಾನ ನಿಲ್ದಾಣದ ಆವರಣದಲ್ಲಿ ಕಾಪಾಡಿಕೊಂಡಿದ್ದಕ್ಕೆ ಹಲವು ಪ್ರಶಸ್ತಿಗಳು ಸಹ ಬಂದಿವೆ.
ಇದನ್ನೂ ಓದಿ: ಮಧ್ಯರಾತ್ರಿ ಬೈಕ್ ನಲ್ಲಿ ಬಂದು ಬೆಂಗಳೂರು ತುಂಬೆಲ್ಲ Sorry ಬರಹ.. ಕಿಡಿಗೇಡಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಜನ!