ಬೆಂಗಳೂರು: ನಗರದಲ್ಲಿಂದು 1452 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 33229ಕ್ಕೆ ಏರಿಕೆಯಾಗಿದೆ. ಇಂದು 163 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 6956 ಮಂದಿ ಗುಣಮುಖರಾಗಿದ್ದಾರೆ. 25574 ಸಕ್ರಿಯ ಪ್ರಕರಣಗಳಿವೆ.
ಆದ್ರೆ ಗುಣಮುಖರಾಗುತ್ತಿರುವವರ ಸಂಖ್ಯೆ ಪ್ರತಿದಿನ ಕಡಿಮೆಯಾಗುತ್ತಿದ್ದು, ಹದಿನಾಲ್ಕು ದಿನಗಳಾಗಿ ಕೋವಿಡ್ ರೋಗಿ ಗುಣಮುಖರಾಗಿ ಬಿಡುಗಡೆಯಾದ್ರೂ ಪಾಲಿಕೆಗೆ ದಾಖಲೆ ಸಿಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಹದಿನಾಲ್ಕು ದಿನದ ಹಿಂದೆ 1500 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ರೂ, ಬಿಡುಗಡೆಯಾಗುತ್ತಿರುವವರ ಸಂಖ್ಯೆ ಮಾತ್ರ 150, 163 ರಷ್ಟೇ ಇದೆ. ಮನೆಯಲ್ಲೇ ಐಸೋಲೇಶನ್ನಲ್ಲಿ ಇದ್ದು ಗುಣಮುಖರಾದವರ ವಿವರ ಹಾಗೂ ಖಾಸಗಿ ಆಸ್ಪತ್ರೆಗಳ ಡಿಸ್ಚಾರ್ಜ್ ವಿವರ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಇದೆ.
ಇಂದು 31 ಮಂದಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 698ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 336ಕ್ಕೆ ಏರಿಕೆಯಾಗಿದೆ.