ETV Bharat / state

ಬಿಬಿಎಂಪಿ ಶಾಲಾ ಮಕ್ಕಳಿಗೂ ಕೊರೊನಾ ಕಾಟ: 14 ವಿದ್ಯಾರ್ಥಿಗಳಿಗೆ ಪಾಸಿಟಿವ್​​​ - ಕೊರೊನಾ ಸಂಬಂಧಿತ ಸುದ್ದಿ

14 ಮಂದಿ ಬಿಬಿಎಂಪಿ ಶಾಲಾ ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್​​​ ಸಿಂಪಡನೆ ಮಾಡಿ, ಎಲ್ಲಾ ಸಿಬ್ಬಂದಿಗೆ ಟೆಸ್ಟ್​ ಮಾಡಲಾಗಿದೆ.

Bengaluru
ಬಿಬಿಎಂಪಿ ಶಾಲಾ ಮಕ್ಕಳಿಗೂ ಕೊರೊನಾ
author img

By

Published : Mar 26, 2021, 2:03 PM IST

ಬೆಂಗಳೂರು: ಬಿಬಿಎಂಪಿ ಶಾಲಾ-ಕಾಲೇಜುಗಳಿಗೂ ಕೊರೊನಾ ಮಹಾಮಾರಿ ವಕ್ಕರಿಸಿದ್ದು, 14 ಮಂದಿ ಬಿಬಿಎಂಪಿ ಶಾಲಾ ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಬಿಬಿಎಂಪಿ ವ್ಯಾಪ್ತಿಯ 6ರಿಂದ 9ನೇ ತರಗತಿಗಳನ್ನು ಬಂದ್ ಮಾಡುವ ಸಾಧ್ಯತೆಯೂ ಹೆಚ್ಚಿದೆ.

ಒಟ್ಟು 14 ಕೇಸ್ ಪಾಸಿಟಿವ್ :
ಜೋಗುಪಾಳ್ಯ - 9 ಕೇಸ್
ಆಸ್ಟಿನ್ ಟೌನ್ - 2 ಕೇಸ್
ಕಾಟನ್ ಪೇಟೆ - 1 ಕೇಸ್
ಹೇರೋಹಳ್ಳಿ ಬಿಬಿಎಂಪಿ ಶಾಲೆ - 2 ಕೇಸ್​

ಜೋಗುಪಾಳ್ಯ ಬಾಲಕರ ಶಾಲೆಯಲ್ಲಿ 9 ಕೇಸ್ ದೃಢಪಟ್ಟಿರುವ ಹಿನ್ನೆಲೆ ಸ್ಯಾನಿಟೈಸರ್​ ಸಿಂಪಡನೆ ಆಗ್ತಿದ್ದು, ಸಂಪೂರ್ಣ ಟೆಸ್ಟ್ ನಡೆಸಲಾಗ್ತಿದೆ. ಒಟ್ಟು 89 ವಿದ್ಯಾರ್ಥಿಗಳಿದ್ದು, ಅಧ್ಯಾಪಕರು ಹಾಗೂ ಸಿಬ್ಬಂದಿಯ ಟೆಸ್ಟ್ ಕೂಡ ನಡೆಸಲಾಗ್ತಿದೆ.

8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 9ನೇ ತರಗತಿಯ 4 ಮಕ್ಕಳು, 10ನೇ ತರಗತಿಯ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಿ.ವಿ.ರಾಮನ್ ನಗರದ ಸ್ಲಂ ಪ್ರದೇಶಗಳಲ್ಲಿದ್ದ 7 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಜನಸಂದಣಿ ಇರುವ ಪ್ರದೇಶದಲ್ಲಿ ಕೊರೋನಾ‌ ಸ್ಫೋಟವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.