ETV Bharat / state

ಐವರು ಅಂತಾರಾಜ್ಯ ಖದೀಮರ ಬಂಧನ : 125 KG ಶ್ರೀಗಂಧ ವಶ - ಅಂತಾರಾಜ್ಯ ಕಳ್ಳರ ಬಂಧನ

ಏರ್​​​ಫೋರ್ಸ್ ಇಂಜಿನಿಯರ್ಸ್ ಕ್ಯಾಂಪಸ್‌ನಲ್ಲಿ ಶ್ರೀಗಂಧದ ಮರ ಕದ್ದಿದ್ದ ಆರೋಪಿಗಳು, ಹಲವಾರು ಕಡೆ ಶ್ರೀಗಂಧ ಮರ ಕಳ್ಳತನದ ಕೇಸಿನಲ್ಲಿ ಜೈಲು ಸೇರಿದ್ದರು. ಜೈಲಿನಲ್ಲೇ ಪರಸ್ಪರ ಪರಿಚಯವಾಗಿ ಹೊರ ಬಂದ ಬಳಿಕ ಪುನಾಃ ಸಕ್ರಿಯವಾಗಿದ್ದರು. ಸದ್ಯ ಗಂಗಮ್ಮನಗುಡಿ ಪೊಲೀಸರಿಂದ ಐವರೂ ಆರೋಪಿಗಳ ಬಂಧನವಾಗಿದ್ದು, ತನಿಖೆ ನಡೆಸಲಾಗುತ್ತಿದೆ..

125 kg sandalwood seized from interstate thieves
ಶ್ರೀಗಂಧ ಕಳ್ಳರ ಬಂಧನ
author img

By

Published : Sep 11, 2021, 9:49 PM IST

ಬೆಂಗಳೂರು : ದುಶ್ಚಟಗಳ ಖರ್ಚಿಗಾಗಿ ಕಳ್ಳತನದ ಹಾದಿ ಹಿಡಿದಿದ್ದ ಐವರು ಅಂತಾರಾಜ್ಯ ಕಳ್ಳರನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 125 ಕೆಜಿ ಶ್ರೀಗಂಧ, 1 ಕಾರು, ಮರ ಕತ್ತರಿಸುವ ಸಲಕರಣೆ, ತೂಕದ ಯಂತ್ರ ಜಪ್ತಿ ಮಾಡಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈ ಆರೋಪಿಗಳು ಮದ್ಯಪಾನ, ಜೂಜಿನ ಚಟಕ್ಕೆ ದಾಸರಾಗಿದ್ದರು. ಸುಲಭವಾಗಿ ಹಣ ಗಳಿಕೆಗಾಗಿ ಶ್ರೀಗಂಧದ ಮರ ಕಳ್ಳತನದ ಹಾದಿ ಹಿಡಿದಿದ್ದರು.

ಏರ್​​​ಫೋರ್ಸ್ ಇಂಜಿನಿಯರ್ಸ್ ಕ್ಯಾಂಪಸ್‌ನಲ್ಲಿ ಶ್ರೀಗಂಧದ ಮರ ಕದ್ದಿದ್ದ ಆರೋಪಿಗಳು, ಹಲವಾರು ಕಡೆ ಶ್ರೀಗಂಧ ಮರ ಕಳ್ಳತನದ ಕೇಸಿನಲ್ಲಿ ಜೈಲು ಸೇರಿದ್ದರು. ಜೈಲಿನಲ್ಲೇ ಪರಸ್ಪರ ಪರಿಚಯವಾಗಿ ಹೊರ ಬಂದ ಬಳಿಕ ಪುನಾಃ ಸಕ್ರಿಯವಾಗಿದ್ದರು. ಸದ್ಯ ಗಂಗಮ್ಮನಗುಡಿ ಪೊಲೀಸರಿಂದ ಐವರೂ ಆರೋಪಿಗಳ ಬಂಧನವಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಅಂತಾರಾಜ್ಯ ಬೈಕ್ ಕಳ್ಳನ ಬಂಧನ.. 11 ದ್ವಿಚಕ್ರ ವಾಹನ ವಶಕ್ಕೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.